ಟ್ರಂಪ್ Vs ಹ್ಯಾರಿಸ್.. ಬಿಗ್ ಫೈಟ್ – ಸಮೀಕ್ಷೆ ಏನ್ ಹೇಳುತ್ತೆ?
ನೇರ ಹಣಾಹಣಿ.. ಯಾರು ಬೆಸ್ಟ್?
ಕರ್ನಾಟಕದಲ್ಲಿ ಬೈಎಲೆಕ್ಷನ್ ಕಣ ರಂಗೇರಿದ್ರೆ, ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಾವು ಜೋರಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದೆ. ಆಡಳಿತಾರೂಢ ಡೆಮಾಕ್ರಟಿ ಮತ್ತು ಎದುರಾಳಿ ರಿಪಬ್ಲಿಕನ್ ಪಕ್ಷಗಳ ಪ್ರಚಾರ ಭರಾಟೆ ತೀವ್ರಗೊಳ್ಳುತ್ತಿದೆ. ಭಿನ್ನ ನಿಲುವು ಹೊಂದಿರುವ ಇಬ್ಬರು ಅಭ್ಯರ್ಥಿಗಳು ದೇಶದ ನೀತಿಗಳ ವಿಚಾರದಲ್ಲಿ ತಮ್ಮದೇ ಆದ ನಿಲುವು ಪ್ರತಿಪಾದಿಸುವ ಮೂಲಕ ಮತದಾರರ ಮನಗೆಲ್ಲಲು ಯತ್ನಿಸಿದ್ದಾರೆ. ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಸಮಗ್ರ ವಲಸೆ ನೀತಿ ರೂಪಿಸುವ ಆಶಯ ವ್ಯಕ್ತಪಡಿಸಿದ್ದರೆ, ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಎನಿಸಿರುವ ಹಳೆ ವಲಸೆ ನೀತಿ ಪುನಃ ಜಾರಿಗೊಳಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಿಟೇನ್ ಟ್ವಿಸ್ಟ್ ಕೊಟ್ಟ RCB – 9 ಹೆಸ್ರು.. ಕೊಹ್ಲಿ ಕ್ಯಾಪ್ಟನ್.. KL ಎಂಟ್ರಿ?
ಕಮಲಾ ಹ್ಯಾರಿಸ್‌ಗೆ ಶೇ.61 ಭಾರತೀಯರ ಮತ
ಅಮೆರಿಕ ಚುನಾವಣೆಯಲ್ಲಿ ಭಾರತೀಯ ಮೂಲದ ಮತದಾರರ ಪೈಕಿ ಶೇ.60 ಮಂದಿ ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಬೆಂಬಲ ನೀಡುವ ಇಚ್ಛೆ ವ್ಯಕ್ತಪಡಿಸಿದ್ದರೆ, ಶೇ.32 ಮಂದಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿಲುವು ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಅಮೆರಿಕನ್ ಆ್ಯಟಿಟ್ಯೂಡ್’ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಇದಲ್ಲದೇ ಶೇ.67ರಷ್ಟು ಮಹಿಳೆಯರು ಹಾಗೂ ಶೇ.53ರಷ್ಟು ಪುರುಷರು ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್‌ಗೆ ಬೆಂಬಲಿಸಿದ್ದಾರೆ. ಇದರ ಜತೆಗೆ ಭಾರತೀಯ ಅಮೆರಿಕನ್ನರಿಗೆ ಡೆಮಾಕ್ರಟಿಕ್ ಪಕ್ಷದೊಂದಿಗಿನ ಸಂಬಂಧ ಕ್ಷೀಣಿಸುತ್ತಿದೆ ಎಂದು ಡೆಮಾಕ್ರೆಟಿಕ್ ಪಕ್ಷಕ್ಕೆ ಭಾರತೀಯ ಅಮೆರಿಕನ್ನರು ಬೆಂಬಲ ಸೂಚಿಸಿದರೂ ಆ ಸಂಖ್ಯೆಯಲ್ಲಿ ಕುಸಿದಿದೆ ಎಂದು ಸಮೀಕ್ಷೆ ತಿಳಿಸಿದೆ. 2020ರ ಚುನಾವಣೆ ವೇಳೆ ನಡೆಸಿದ್ದ ಸಮೀಕ್ಷೆಯಲ್ಲಿ ಶೇ.56ರಷ್ಟು ಮಂದಿ ಡೆಮಾಕ್ರೆಟ್ಸ್ ಎಂದು ಗುರುತಿಸಿಕೊಂಡಿದ್ದರು. ಆದರೆ ಈ ಬಾರಿ ಆ ಸಂಖ್ಯೆ ಶೇ.47ಕ್ಕೆ ಕುಸಿದಿದೆ. ಇದೇ ವೇಳೆ ರಿಪಬ್ಲಿಕನ್ನರ ಸಂಖ್ಯೆ ಶೇ.21ರೊಂದಿಗೆ ಯಥಾಸ್ಥಿತಿ ಕಾಯ್ದುಕೊಂಡಿದೆ. ನಿರ್ಣಾಯಕ ಚುನಾವಣಾ ಕಣದ ರಾಜ್ಯಗಳಾದ ಅರಿಜೋನಾ ಹಾಗೂ ನೆವಾಡಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇಬ್ಬರ ನಡುವೆ ತೀರಾ ಹಣಾಹಣಿಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಅರಿಜೋನಾದಲ್ಲಿ 48 ಶೇ ಸಂಭಾವ್ಯ ಮತದಾರರು ಹ್ಯಾರಿಸ್ ಅವರಿಗೆ ಬೆಂಬಲ ಸೂಚಿಸಿದರೆ, ಟ್ರಂಪ್ಗೆ 47 ಶೇ ಬೆಂಬಲ ಸೂಚಿಸಿದ್ದಾರೆ. ನೆವಾಡಾದಲ್ಲಿ, ಹ್ಯಾರಿಸ್ ಅವರಿಗೆ ಶೇ 47 ಆದರೆ ಟ್ರಂಪ್ ಅವರು ಶೇ 48 ಬೆಂಬಲ ಪಡೆದು ಸ್ವಲ್ಪ ಮುನ್ನಡೆ ಸಾಧಿಸಿದ್ದಾರೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಅದ್ರಲ್ಲೂ ಓಹಿಯೋ ರಾಜ್ಯದ ಮತಗಳು ಸಾಕಷ್ಟು ಮತ್ವದಾಗಿದೆ. ಯಾಕಂದ್ರೆ ಈ ಹಿಂದಿನಿಂದಲೂ ಈ ರಾಜ್ಯದಲ್ಲಿ ಯಾರ್ ಗೆಲ್ತಾರೆ ಅವರೇ ಅಮೆರಿಕಾದ ಅಧ್ಯಕ್ಷ ಚುಕ್ಕಾಣಿ ಹಿಡಿತಾರೆ ಅನ್ನೋ ಪ್ರತಿತಿ ಇದೆ. ಹೀಗಾಗಿ ಈ ರಾಜ್ಯ ಸಾಕಷ್ಟು ಮಹತ್ವದಾಗಿದೆ.
ಹೀಗೆ ಅಮೆರಿಕಾದ ಚುನಾವಣೆ ಸಾಕಷ್ಟು ಕುತೂಹಲವನ್ನ ಮೂಡಿಸಿದೆ. ಅಮೆರಿಕಾದ ಮುಂದಿನ ಅಧ್ಯಕ್ಷರು ಯಾರು ಅನ್ನೋದು ನವೆಂಬರ್ 5 ರಂದು ನಿರ್ಧಾರವಾಗಲಿದ್ದು, ಅಮೆರಿಕದ ಮುಂದಿನ ನಾಯಕತ್ವ ಟ್ರಂಪ್ ಅಥವಾ ಹ್ಯಾರಿಸ್ ಎಂಬುದನ್ನು ಜನರು ನಿರ್ಧರಿಸಲಿದ್ದಾರೆ. ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಯಾರು ಗೆಲ್ಲುತ್ತಾರೋ ಅವರು ಜನವರಿ 20, 2025 ರಂದು ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.