ಕೆಂಪು ಸಮುದ್ರದಲ್ಲಿ ಹೊತ್ತಿಕೊಂಡ ಕದನದ ಕಿಚ್ಚು – ಹೌತಿ ಬಂಡುಕೋರರ ವಿರುದ್ಧ ಅಮೆರಿಕ ಸೇನೆ ಆಪರೇಷನ್

ಕೆಂಪು ಸಮುದ್ರದಲ್ಲಿ ಹೊತ್ತಿಕೊಂಡ ಕದನದ ಕಿಚ್ಚು – ಹೌತಿ ಬಂಡುಕೋರರ ವಿರುದ್ಧ ಅಮೆರಿಕ ಸೇನೆ ಆಪರೇಷನ್

ಮಧ್ಯಪ್ರಾಚ್ಯದಲ್ಲಿರೋ ಕೆಂಪು ಸಮುದ್ರ ಜಾಗತಿಕ ವ್ಯಾಪಾರ ವಹಿವಾಟಿನ ಪ್ರಮುಖ ಕೊಂಡಿ ಇದ್ದಂತೆ. ಭಾರತ ಸೇರಿದಂತೆ ಇಡೀ ಜಗತ್ತಿನ ಆರ್ಥಿಕತೆಯೇ ಕೆಂಪು ಸಮುದ್ರದ ಮೇಲೆ ನಿಂತಿದೆ. ರೆಡ್ ಸೀನಲ್ಲಿ ಅದೇನೇ ಹೆಚ್ಚು ಕಡಿಮೆಯಾದ್ರೂ ಅದು ಇಡೀ ಜಗತ್ತಿನ ಮೇಲೆ ಎಫೆಕ್ಟ್ ಆಗುತ್ತೆ. ಇಂಥಾ ಕೆಂಪು ಸಮುದ್ರದಲ್ಲಿ ಈಗ ಮಿನಿ ಯುದ್ಧವೇ ಶುರುವಾಗಿದೆ. ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ಸಮರ ನಡೆಯುತ್ತಿರುವಾಗಲೇ ಕೆಂಪು ಸಮುದ್ರದಲ್ಲಿ ಕದನದ ಕಿಚ್ಚು ಹೊತ್ತಿಕೊಂಡಿದೆ.

ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಆರ್ಭಟ – ಇಂಧನದ ಬೆಲೆ ಏರಿಕೆಯಾಗುವ ಆತಂಕ

ಜೋರ್ಡಾನ್, ಈಜಿಪ್ಟ್, ಸೌದಿ ಅರೇಬಿಯಾ, ಸೂಡಾನ್, ಯೆಮನ್, ಒಮನ್, ಯುಎಇ ಹೀಗೆ ಮುಸ್ಲಿಂ ರಾಷ್ಟ್ರಗಳ ಮಧ್ಯೆಯೇ ಕೆಂಪು ಸಮುದ್ರ ಹಾದು ಹೋಗುತ್ತೆ. ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳನ್ನ ಕನೆಕ್ಟ್ ಮಾಡೋದೆ ಈ ಕೆಂಪು ಸಮುದ್ರ. ಭಾರತಕ್ಕೆ ತೈಲ ಸರಬರಾಜಾಗೋದು ಕೂಡ ಇದೇ ಕೆಂಪು ಸಮುದ್ರದ ಮೂಲಕ. ನಮ್ಮಲ್ಲಿಂದಲೂ ರಫ್ತಾಗೋ ಹಲವಾರು ವಸ್ತುಗಳು ಕೆಂಪು ಸಮುದ್ರದ ಮೂಲಕವೇ ಮಧ್ಯಪ್ರಾಚ್ಯ ರಾಷ್ಟ್ರಗಳನ್ನ ತಲುಪುತ್ತೆ. ಭಾರತದ ಅತ್ಯಾಪ್ತ ರಾಷ್ಟ್ರ ಇಸ್ರೇಲ್​ನ್ನ ಕೂಡ ಸೇರಿಸಿ. ಜೊತೆಗೆ ಯುರೋಪಿಯನ್​​ ರಾಷ್ಟ್ರಗಳ ಜೊತೆಗೆ ವ್ಯಾಪಾರ-ವಹಿವಾಟು ಮಾಡೋಕೂ ಕೆಂಪು ಸಮುದ್ರ ಬೇಕೇಬೇಕು. ಆದ್ರೆ ಯಾವಾಗ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ತಾರಕಕ್ಕೇರಿತೋ ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರು ಬಾಲ ಬಿಚ್ಚಿದ್ದಾರೆ.

ಹೌತಿಗಳು ಅಂದರೆ ಯೆಮನ್​​ನಲ್ಲಿ ಬೀಡುಬಿಟ್ಟಿರುವ ಬಂಡುಕೋರ ಸಂಘಟನೆ. ಹೇಗೆ ಈ ಹಿಂದೆ ಇರಾಕ್ ಮತ್ತು ಸಿರಿಯಾದ ಪ್ರಮುಖ ಭಾಗಗಳನ್ನ ಐಸಿಸ್​ ಉಗ್ರ ಸಂಘಟನೆ ತನ್ನ ವಶಕ್ಕೆ ಪಡೆದುಕೊಂಡಿತ್ತೋ, ಅದೇ ರೀತಿ ಹೌತಿಗಳು ಯೆಮನ್​ನ ಪ್ರಮುಖ ಭಾಗಗಳನ್ನ ತಮ್ಮ ಕಂಟ್ರೋಲ್​​ನಲ್ಲಿಟ್ಟುಕೊಂಡಿದ್ದಾರೆ.  ಆದ್ರೆ ಈ ಹೌತಿಗಳ ಬೆನ್ನಿಗಿ ನಿಂತಿರೋದು ಇರಾನ್. ಇಸ್ರೇಲ್​ ಮತ್ತು ಇರಾನ್ ಬದ್ಧ ವೈರಿ ರಾಷ್ಟ್ರಗಳು. ಇದೀಗ ಇರಾನ್ ಹೌತಿಗಳ ಮೂಲಕ ಕೆಂಪು ಸಮುದ್ರದಲ್ಲಿ ಸಾಗೋ ಇಸ್ರೇಲ್​ ಹಡಗುಗಳನ್ನ ಟಾರ್ಗೆಟ್ ಮಾಡ್ತಿದೆ. ಸಾಲದ್ದಕ್ಕೆ ಇಸ್ರೇಲ್​ಗೆ ತೆರಳೋ ವಿದೇಶಿ ಹಡಗುಗಳ ಮೇಲೆಯೂ ಅಟ್ಯಾಕ್ ಮಾಡ್ತಿದ್ದಾರೆ. ಹಡಗುಗಳನ್ನ ವಶಪಡಿಸಿಕೊಳ್ಳೋಕೆ ಪ್ರಯತ್ನಿಸ್ತಿದ್ದಾರೆ. ಕೇವಲ ಹಡಗುಗಳಷ್ಟೇ ಅಲ್ಲ, ಕೆಂಪು ಸಮುದ್ರದಿಂದ ಇಸ್ರೇಲ್​​ನತ್ತ ಮಿಸೈಲ್​ಗಳ ಮೂಲಕವೂ ದಾಳಿ ನಡೆಸ್ತಿದ್ದಾರೆ.

ಯುದ್ಧಪೀಡಿತ ಗಾಜಾಗೆ ಇಸ್ರೇಲ್​ ಯಾವುದೇ ಆಹಾರ ಸಾಮಗ್ರಿಗಳನ್ನ, ಮೆಡಿಸಿನ್​ಗಳನ್ನ ಪೂರೈಕೆ ಮಾಡ್ತಾ ಇಲ್ಲ. ಆದ್ರೆ ಇಸ್ರೇಲ್​​ ವಿದೇಶಗಳಿಂದ ಆಮದು ಮಾಡಿಕೊಳ್ಳೋ ವಸ್ತುಗಳು ಅದ್ರಲ್ಲೂ, ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳಿಂದ, ಆಸ್ಟ್ರೇಲಿಯಾದಿಂದ, ಆಫ್ರಿಕಾದಿಂದ ಸಾಗಾಣೆಯಾಗೋದೆಲ್ಲವೂ ಕೆಂಪು ಸಮುದ್ರದ ಮೂಲಕವೂ ಸಾಗುತ್ತೆ. ಕೆಂಪು ಸಮುದ್ರದ ಎಂಟ್ರಿ ಪಾಯಿಂಟ್​​ನಲ್ಲಿರೋದೆ ಯೆಮನ್. ಇಲ್ಲೇ ಬೀಡುಬಿಟ್ಟಿರುವ ಹೌತಿಗಳು ಸುಲಭವಾಗಿ ಇಸ್ರೇಲ್​​​ ತೆರಳೋ ಹಡಗುಗಳ ಮೇಲೆ ಅಟ್ಯಾಕ್ ಮಾಡ್ತಾ ಇದ್ದಾರೆ. ನೀವು ಎಲ್ಲಿವರೆಗೆ ಗಾಜಾಗೆ ಆಹಾರ, ಮೆಡಿಸಿನ್ ಸಪ್ಲೈನ್ನ ತಡೀತೀರೋ ಅಲ್ಲಿವರೆಗೂ ನಾವು ಇಸ್ರೇಲ್​ ಬಂದರಿಗೆ ತೆರಳೋ ಎಲ್ಲಾ ಹಡಗುಗಳನ್ನ ಕೂಡ ಟಾರ್ಗೆಟ್ ಮಾಡ್ತೀವಿ. ಅದು ಯಾವುದೇ ದೇಶಕ್ಕೆ ಸೇರಿದ ಹಡಗೇ ಆಗಿರಲಿ, ನಾವು ಬಿಡೋದಿಲ್ಲ ಅಂತಾ ಹೌತಿಗಳು ಹೇಳಿದ್ದಾರೆ. ದಾಳಿಗೆ ಬೇಕಾದ ಎಲ್ಲಾ ಶಸ್ತ್ರಾಸ್ತ್ರಗಳನ್ನ ಕೂಡ ಇರಾನ್ ಪೂರೈಕೆ ಮಾಡ್ತಿದೆ ಅನ್ನೋದು ಓಪನ್ ಸೀಕ್ರೆಟ್. ಟೋಟಲಿ ಇದು ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಇರಾನ್ ನಡೆಸ್ತಾ ಇರುವಂಥಾ ಪ್ರಾಕ್ಸಿ ವಾರ್. ಹೌತಿಗಳು ಎಷ್ಟರ ಮಟ್ಟಿಗೆ ಬೆಳೆದಿದ್ದಾರೆ ಅಂದ್ರೆ ಬಲ್ಯಾಸ್ಟಿಕ್ ಮಿಸೈಲ್ ಅಂದ್ರೆ ಖಂಡಾಂತರ ಕ್ಷಿಪಣಿ, ರಾಕೆಟ್ ಅಟ್ಯಾಕ್ ಮಾಡಬಲ್ಲ ಡ್ರೋನ್ ಕೂಡ ಹೌತಿಗಳ ಬಳಿ ಇವೆ. ಸುಮಾರು 2000 ಕಿಲೋ ಮೀಟರ್​ ದೂರದ ಟಾರ್ಗೆಟ್​ಗೆ ಅಟ್ಯಾಕ್ ಮಾಡುವಂಥಾ ಮಿಸೈಲ್​ಗಳು ಹೌತಿಗಳ ಬಳಿ ಇವೆ. ಈ ಹಿಂದೆ ಯೆಮನ್ ಯುದ್ಧದ ಸಂದರ್ಭದಲ್ಲಿ ಹೌತಿಗಳು ಇದೇ ರಾಕೆಟ್​​ಗಳ ಮೂಲಕ ಸೌದಿ ಅರೇಬಿಯಾ ಮೇಲೂ ದಾಳಿ ನಡೆಸಿದ್ರು. ಅಷ್ಟೇ ಅಲ್ಲ, ಇತ್ತೀಚಿಗೆ ಮಿಗ್-29 ಫೈಟರ್ ಜೆಟ್ ಮತ್ತು ಹೆಲಿಕಾಪ್ಟರ್​​ನ್ನ ಕೂಡ ಪ್ರದರ್ಶಿಸಿದರು.

ಇಸ್ರೇಲ್​ ಮೇಲಿನ ಈ ಸಮರಕ್ಕೆ ಹೌತಿಗಳು ಭಾರತದ ಕಮರ್ಶಿಯಲ್ ಶಿಪ್​ನ್ನ ಕೂಡ ಟಾರ್ಗೆಟ್ ಮಾಡಿದ್ರು. ಕಳೆದ ಡಿಸೆಂಬರ್​​ನಲ್ಲಿ ಅರೆಬಿಯನ್ ಸಮುದ್ರದಲ್ಲಿ ಭಾರತದ ಶಿಪ್ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಲಾಗಿತ್ತು. ಅದೃಷ್ಟಕ್ಕೆ ಭಾರತೀಯ ಸಿಬ್ಬಂದಿಗೆ ಯಾವುದೇ ಹಾನಿಯಾಗಿರಲಿಲ್ಲ. ಈ ಘಟನೆ ಬಳಿಕ ಭಾರತೀಯ ನೌಕಾಪಡೆ ನಮ್ಮ ಕಮರ್ಶಿಯಲ್​ ಶಿಪ್​ಗಳಿಗೆ ಎಸ್ಕಾರ್ಟ್ ನೀಡ್ತಾ ಇದೆ.

ಇನ್ನು ಇಸ್ರೇಲ್​​ಗೆ ಯಾವುದೇ ರೀತಿಯ ಸಮಸ್ಯೆ ಆದ್ರೂ ಮೊದಲಿಗೆ ರಕ್ಷಣೆಗೆ ನಿಲ್ಲೋದೆ ಅಮೆರಿಕ. ಈಗ ಕೆಂಪು ಸಮುದ್ರದಲ್ಲೂ ಅಮೆರಿಕ ಸೇನೆ ಆಪರೇಷನ್ ಆರಂಭಿಸಿದೆ. ಕೆಂಪು ಸಮುದ್ರದಲ್ಲಿ ಹೌತಿಗಳ ವಿರುದ್ಧ ಕೌಂಟರ್ ಆಪರೇಷನ್ ಆರಂಭಿಸಿದೆ. ಹೌತಿಗಳಿಗೆ ಸೇರಿದ ಶಿಪ್​​ಗಳ ಮೇಲೆ ಅಮೆರಿಕ ಅಟ್ಯಾಕ್ ಮಾಡಿದ್ದು, ಬಂಡುಕೋರರಿಗೆ ಸೇರಿದ ಮೂರು ಹಡಗುಗಳು ಮುಳುಗಿಯೇ ಹೋಗಿದೆ. ಅಷ್ಟೇ ಅಲ್ಲ, 10 ಹೌತಿ ಬಂಡುಕೋರರು ಸಾವನ್ನಪ್ಪಿದ್ದಾರೆ. ಸದ್ಯ ಕೆಂಪು ಸಮುದ್ರದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಹಡಗುಗಳ ಸಂಚಾರವೇ ಅಸ್ತವ್ಯಸ್ತವಾಗಿದೆ. ಹಲವು ದೇಶಗಳು ಕೆಂಪು ಸಮುದ್ರದಲ್ಲಿ ಸಂಚಾರವನ್ನ ಸ್ಥಗಿತಗೊಳಿಸಿವೆ. ಇನ್ನು ಕೆಂಪು ಸಮುದ್ರದ ರಕ್ಷಣೆಗಾಗಿ ಅಮೆರಿಕ ಹಲವು ರಾಷ್ಟ್ರಗಳ ಜೊತೆ ಸೇರಿ ಮಿಲಿಟರಿ ಒಕ್ಕೂಟ ರಚಿಸೋಕೆ ತೀರ್ಮಾನಿಸಿತ್ತು. ಅಂದ್ರೆ ಕೆಂಪು ಸಮುದ್ರ ಭಾಗದಲ್ಲಿ ವಿವಿಧ ದೇಶಗಳ ಸೇನೆಯನ್ನ ನಿಯೋಜಿಸಿ, ಹಡಗುಗಳು ಸೇಫ್ ಸಂಚರಿಸುವಂತೆ ನೋಡಿಕೊಳ್ಳೋಕೆ ಅಮೆರಿಕ ಪ್ಲ್ಯಾನ್ ಮಾಡಿತ್ತು. ಆರಂಭದಲ್ಲಿ ಬ್ರಿಟನ್, ಬಹ್ರೈನ್, ಕೆನಡಾ, ಫ್ರಾನ್ಸ್, ಇಟಲಿ, ನೆದರ್​​ಲ್ಯಾಂಡ್, ನಾರ್ವೆ, ಸ್ಪೇನ್ ಸೇರಿ ಸುಮಾರು 9 ದೇಶಗಳು ಈ ಒಕ್ಕೂಟವನ್ನ ಸೇರಿಕೊಳ್ಳಲಿವೆ ಅಂತಾ ಹೇಳಲಾಗಿತ್ತು. ಆದ್ರೆ ಅಮೆರಿಕದ ಮಿತ್ರ ರಾಷ್ಟ್ರಗಳಾದ ಆಸ್ಟ್ರೇಲಿಯಾ ಮತ್ತು ಜಪಾನ್ ಈ ಒಕ್ಕೂಟ ಸೇರಿಕೊಳ್ಳೋಕೆ ಹಿಂದೇಟು ಹಾಕಿತ್ತು. ಹೀಗಾಗಿ ಸದ್ಯಕ್ಕೆ ಅಮೆರಿಕದ ಪ್ಲ್ಯಾನ್ ಹಳ್ಳ ಹಿಡಿದಂತೆ ಕಾಣ್ತಿದೆ. ಹೀಗಾಗಿ ಏಕಾಂಗಿಯಾಗಿಯೇ ಕೆಂಪು ಸಮುದ್ರದಲ್ಲಿ ಹೌತಿಗಳನ್ನ ಮಟ್ಟ ಹಾಕೋಕೆ ಮುಂದಾಗಿದೆ. ಆದ್ರೆ, ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್, ಬ್ರಿಟನ್ ಮತ್ತು ಸೌದಿ ಅರೇಬಿಯಾ ತನ್ನ ಹಡಗುಗಳಲ್ಲಿ ಸೇನೆಯನ್ನ ನಿಯೋಜಿಸುವ ಹಕ್ಕನ್ನು ಹೊಂದಿದ್ದು, ಹೌತಿಗಳು ಸೇರಿದಂತೆ ಯಾರೇ ಹಡಗಿಗೆ ಮುತ್ತಿಗ ಹಾಕೋಕೆ ಬಂದ್ರೋ ಓಪನ್ ಆಗಿ ಫೈರಿಂಗ್ ಮಾಡುವ ಹಕ್ಕನ್ನ ಹೊಂದಿದೆ. ಒಟ್ಟು 39 ದೇಶಗಳು ಕೆಂಪು ಸಮುದ್ರದ ರಕ್ಷಣೆಯ ಹೊಣೆ ಹೊತ್ತುಕೊಂಡಿದ್ದು, ಅದರಲ್ಲಿ ಭಾರತ ಕೂಡ ಒಂದು.

Sulekha