ಲಾಟರಿಯಲ್ಲಿ 42 ಕೋಟಿ ರೂಪಾಯಿಗೂ ಅಧಿಕ ಹಣ ಗೆದ್ದ ವೃದ್ಧ!  – ಬಂದ ಹಣದಿಂದ ಮೊದಲು ಖರೀದಿಸಿದ್ದೇನು ಗೊತ್ತಾ?

ಲಾಟರಿಯಲ್ಲಿ 42 ಕೋಟಿ ರೂಪಾಯಿಗೂ ಅಧಿಕ ಹಣ ಗೆದ್ದ ವೃದ್ಧ!  – ಬಂದ ಹಣದಿಂದ ಮೊದಲು ಖರೀದಿಸಿದ್ದೇನು ಗೊತ್ತಾ?

ಈ ಲಾಟರಿ ಟಿಕೆಟ್​ಗಳು ಯಾವಾಗ, ಯಾರನ್ನು ಶ್ರೀಮಂತರನ್ನಾಗಿ ಮಾಡುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಅದೃಷ್ಟ ಚೆನ್ನಾಗಿದ್ರೆ ಕಡು ಬಡವ ಕೂಡ ಒಂದೇ ದಿನದಲ್ಲಿ ಕೋಟ್ಯಧಿಪತಿ ಆಗಬಹುದು. ಅದೃಷ್ಟ ಕೈ ಕೊಟ್ರೆ ಶ್ರೀಮಂತ ಏಕಾಏಕಿ ಬಡವನನ್ನಾಗಿಯೂ ಮಾಡ್ಬಹುದು. ಆದರೆ ಈ ಲಾಟರಿ ಟಿಕೆಟ್‌ ಕೆಲವೊಮ್ಮೆ ವ್ಯಕ್ತಿ ಹಣೆಬರಹವನ್ನು ಬದಲಾಯಿಸುತ್ತವೆ. ಲಾಟರಿ ಟಿಕೆಟ್ ಗೆದ್ದು ಕೋಟ್ಯಾಧಿಪತಿಗಳಾದವರು ಜಗತ್ತಿನಲ್ಲಿ ಅನೇಕ ಜನರಿದ್ದಾರೆ. ವಿದೇಶದಲ್ಲಿರುವ ಜನರು ಬೃಹತ್ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಾರೆ ಮತ್ತು ರಾತ್ರೋರಾತ್ರಿ ಮಿಲಿಯನೇರ್ ಆಗುತ್ತಾರೆ. ಸದ್ಯ ಅಂತಹ ವ್ಯಕ್ತಿಯ ಕಥೆ ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಅಮೆರಿಕದ ಕೊಲೊರಾಡೊ ರಾಜ್ಯದಲ್ಲಿ ಮಾಂಟ್ರೋಸ್‌ನ 77 ವರ್ಷದ ವಾಲ್ಡೆಮಾರ್ ಟಾಸ್ಚ್ 5 ಮಿಲಿಯನ್ ಡಾಲರ್‌ (42 ಕೋಟಿ)ಗೂ ಅಧಿಕ ಮೊತ್ತದ ಲಾಟರಿ ಗೆದ್ದಿದ್ದಾನೆ. ಆ ವ್ಯಕ್ತಿ ಲಾಟರಿ ಹಣದಲ್ಲಿ ಮೊದಲ ಬಾರಿಗೆ ಆ ವ್ಯಕ್ತಿ ತನ್ನ ಮಡದಿಗೆ  ಖರೀದಿಸಿದ್ದೇನು ಅಂತಾ ಗೊತ್ತಾದ್ರೆ ಶಾಕ್‌ ಅಗೋದು ಪಕ್ಕಾ!

ಇದನ್ನೂ ಓದಿ: ಇಲಿಗಳನ್ನ ಹಿಡಿಯಲು ಬರೋಬ್ಬರಿ 69.5 ಲಕ್ಷ ರೂಪಾಯಿ ಖರ್ಚು – ರೈಲ್ವೆ ಅಧಿಕಾರಿಗಳ ಅಂಧಾದರ್ಬಾರ್

ಲಾಟರಿ ಹಣದಲ್ಲಿ ಮೊದಲು ಖರೀದಿಸಿದ್ದೇನು?

ನಿವೃತ್ತರಾಗಿರುವ ಟಾಸ್ಚ್ ಅವರು ತಮ್ಮ ಗೋಲ್ಡನ್ ರಿಟ್ರೈವರ್ ಆಗಿಯೊಂದಿಗೆ ಹೋಲಿ ಕ್ರಾಸ್ ವೈಲ್ಡರ್‌ನೆಸ್‌ನಲ್ಲಿ ಬ್ಯಾಕ್‌ಪ್ಯಾಕಿಂಗ್ ಪ್ರವಾಸದಲ್ಲಿದ್ದರು. ಸೆಪ್ಟೆಂಬರ್ 6 ರಂದು ಲಾಟರಿ ಟಿಕೆಟ್‌ ಗೆದ್ದಿದ್ದಾರೆ. ಆದರೆ ಅವರು ಪರಿಶೀಲಿಸಿರಲಿಲ್ಲ. ತಮ್ಮ ಪ್ರವಾಸದಿಂದ ಹಿಂತಿರುಗಿದಾಗ, ವೆಬ್‌ಸೈಟ್‌ನಲ್ಲಿ ಟಿಕೆಟ್ ಅನ್ನು ಪರಿಶೀಲಿಸಿದ್ದಾರೆ. ಈ ವೇಳೆ ಇವರ ಲಾಟರಿ ಟಿಕೆಟ್‌ ನಂಬರ್‌ ನಮೂದಿಸಲಾಗಿತ್ತು. ಇದನ್ನು ಕಂಡ ಅವರು “ಇದು ತಪ್ಪಾಗಿರಬೇಕು” ಅಂದುಕೊಂಡಿದ್ದಾರೆ. ಬಳಿಕ ಈ ಲಾಟರಿ ಅವರಿಗೆ ಸಿಕ್ಕಿದೆ ಎಂದು ಖಾತ್ರಿ ಮಾಡಿಕೊಂಡಿದ್ದಾರೆ. ಬಳಿಕ ಅವರು ಲಾಟರಿ ಹಣವನ್ನು ಪಡೆದಿದ್ದಾರೆ. ಲಾಟರಿ ಹಣ ಪಡೆದ ಕೂಡಲೇ ಅವರು ತಮ್ಮ ಪತ್ನಿಗೆ ಹೂವು, ಕಲ್ಲಂಗಡಿ ಖರೀದಿಸಿದ್ದಾರೆ. ಅವರು ತನ್ನ ಹೆಂಡತಿಗೆ ಕಲ್ಲಂಗಡಿ ಮತ್ತು ಹೂವಿನ ಗೊಂಚಲು ಕೊಟ್ಟು, ತನಗೆ ಇಷ್ಟು ದೊಡ್ಡ ಲಾಟರಿ ಗೆದ್ದಿದೆ ಎಂದು ಹೇಳಿದ್ದಾರೆ.  ಈ ವಿಚಾರ ತಿಳಿದ ಪತ್ನಿ ಕೂಡ ಖುಷಿಯಿಂದ ಕುಣಿದಾಡಿದ್ದಾರೆ.

ಹಣವನ್ನು ಏನು ಮಾಡುತ್ತಾರೆ ಆ ವೃದ್ಧ?

ಇನ್ನು ಈ ಗೆದ್ದ ಹಣವನ್ನು ಆ ವ್ಯಕ್ತಿ ಏನು ಮಾಡುತ್ತಾರೆ ಎಂದು ನಿಮ್ಮಲ್ಲೂ ಈಗ ಪ್ರಶ್ನೆ ಮೂಡಿರಬಹುದು. ಪತ್ನಿಯ ಆರೋಗ್ಯ ಸದಾ ಹದಗೆಟ್ಟಿರುವ ಕಾರಣ ಆಕೆಗೆ ಚಿಕಿತ್ಸೆ ಕೊಡಿಸಿ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇದಾದ ನಂತರ ಅವರು ತಮ್ಮ ಕುಟುಂಬದ ಬಗ್ಗೆ ಸ್ವಲ್ಪ ಹೆಚ್ಚು ಯೋಚಿಸುತ್ತೇನೆ ಎಂದು ಹೇಳಿದ್ದಾರೆ.

Shwetha M