ಇಂಡಿಯನ್ ಆರ್ಮಿಗೆ ಆನೆ ಬಲ – ಭಾರತೀಯ ಸೇನೆಗೆ ಸೇರಿದ ಅಮೆರಿಕದ 3 ಅಪಾಚೆ ಕಾಂಬಾಟ್ ಚಾಪರ್

ಇಂಡಿಯನ್ ಆರ್ಮಿಗೆ ಆನೆ ಬಲ – ಭಾರತೀಯ ಸೇನೆಗೆ ಸೇರಿದ ಅಮೆರಿಕದ 3 ಅಪಾಚೆ ಕಾಂಬಾಟ್ ಚಾಪರ್

ಭಾರತೀಯ ಸೇನೆಗೆ ಈಗ ಆನೆ ಬಲ ಬಂದಿದೆ.  ಅಮೆರಿಕದ ಬೋಯಿಂಗ್ ಕಂಪನಿ ತಯಾರಿಸಿರುವ ವಿಶ್ವದ ಅತ್ಯುತ್ತಮ ಅಪಾಚೆ ಕಾಂಬಾಟ್ ಚಾಪರ್  ಭಾರತೀಯ ಸೇನೆಗೆ ಸೇರ್ಪಡೆಯಾಗಿದೆ. ಭಾರತೀಯ ಸೇನೆ ಸೇರಿರುವ ಮೂರು ಅಪಾಚೆ ಚಾಪರ್‌ಗಳು ಅಮೆರಿಕದಿಂದ ಭಾರತಕ್ಕೆ ಎಂಟ್ರಿಕೊಟ್ಟಿವೆ.  ಭಾರತೀಯ ಸೇನೆಗೆ ಆರು ಅಪಾಚೆ ಕಾಂಬಾಟ್ ಚಾಪರ್​​ಗಳನ್ನು ನೀಡಬೇಕು ಎನ್ನುವ ಒಪ್ಪಂದವನ್ನು ಅಮೆರಿಕದ ಬೋಯಿಂಗ್ ಕಂಪನಿಯೊಂದಿಗೆ ಮಾಡಿಕೊಳ್ಳಲಾಗಿದೆ. ಇದರ ಪ್ರಯುಕ್ತ ಇದೀಗ ಮೊದಲ ಹಂತದಲ್ಲಿ ಮೂರು ಬೋಯಿಂಗ್​ ಎಎಚ್​-64ಇ ಅಪಾಚೆ ​ಚಾಪರ್ ಭಾರತ ಸೇನೆಗೆ ಸೇರಿವೆ. ಅಪಾಚೆ ಕಾಂಬಾಟ್ ಚಾಪರ್ ಜಗತ್ತಿನ ಶಕ್ತಿಶಾಲಿ  ಹೆಲಿಕಾಪ್ಟರ್​ ಆಗಿದೆ. ಇದನ್ನು ಈಗಾಗಲೇ ಅಮೆರಿಕ ಸೇನಾಪಡೆಗಳು ಬಳಸುತ್ತಿದ್ದು, ಈಗ ಭಾರತ ಸೇನೆಗೆ ಬಂದಿರೋದು ಇಂಡಯನ್ ಆರ್ಮಿ ಪವರ್ ಹೆಚ್ಚಾಗಿದೆ.  ಈಗಾಗಲೇ ಭಾರತೀಯ ವಾಯುಪಡೆಯು 22 ಭಾರೀ ದಾಳಿ ಹೆಲಿಕಾಪ್ಟರ್‌ಗಳನ್ನು ಹೊಂದಿದೆ.

ಇದನ್ನೂ ಓದಿ: ತೆರಿಗೆ ನೋಟಿಸ್ ವಿರುದ್ಧ ಸಣ್ಣ ವ್ಯಾಪಾರಿಗಳಿಂದ ಪ್ರತಿಭಟನೆ – ಇಂದಿನಿಂದ 2 ದಿನ ಹಾಲು ಉತ್ಪನ್ನ ಮಾರಾಟ ಬಂದ್‌

ಟ್ಯಾಂಕ್ಸ್ ಇನ್ ದಿ ಏರ್ಎಂ ದು ಕರೆಯಲ್ಪಡುವ ಈ ಹೊಸ ಚಾಪರ್‌ಗಳನ್ನು ಪಾಕಿಸ್ತಾನದ ಪಶ್ಚಿಮ ಗಡಿಯ ಬಳಿಯ ಜೋಧ್‌ಪುರದಲ್ಲಿ ನಿಯೋಜಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ. ಬೋಯಿಂಗ್​ ಕಂಪೆನಿಯು 2020ರಲ್ಲಿ ಭಾರತೀಯ ವಾಯುಪಡೆಗೆ 22 ಅಪಾಚೆ ಹೆಲಿಕಾಪ್ಟರ್‌ಗಳನ್ನು ಪೂರೈಕೆ ಮಾಡಿತ್ತು. ಇದೇ ವೇಳೆ ಆರು ಎಎಚ್​-64ಇ ಪೂರೈಕೆ ಒಪ್ಪಂದವನ್ನೂ ಮಾಡಲಾಗಿತ್ತು. ಮೂರು ಅಪಾಚೆ ಕಾಂಬಾಟ್ ಚಾಪರ್‌ಗಳು ಸೇರಿದಂತೆ ಒಟ್ಟು ಆರು ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತೀಯ ಸೇನೆಯು ಸರಿ ಸುಮಾರು 51 ಕೋಟಿ ರೂ. ವೆಚ್ಚದ ಒಪ್ಪಂದವನ್ನು ಮಾಡಿಕೊಂಡಿದೆ. ಇದನ್ನು 2020ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಅಧಿಕಾರಾವಧಿಯಲ್ಲಿ ಮಾಡಲಾಗಿತ್ತು.

ಈ ಒಪ್ಪಂದದಡಿ ಮೂರು ಹೆಲಿಕಾಪ್ಟರ್‌ಗಳ ಮೊದಲ ಬ್ಯಾಚ್ 2024ರ ಮೇ-ಜೂನ್ ವೇಳೆಗೆ ಬರಬೇಕಿತ್ತು. ಆದರೆ ಕೆಲ ಕಾರಣದಿಂದ ಇದು ತಡವಾಗಿ ಭಾರತಕ್ಕೆ ಬಂದಿದೆ.   ಈ ಅಪಾಚೆ ಹೆಲಿಕಾಪ್ಟರ್‌ ಪವರ್ ಆಗಿದ್ದು,  ಪಕ್ಕಾ ಟಾರ್ಗೆಟ್ ಮಾಡಿ ದಾಳಿ ಮಾಡೋ ಶಕ್ತಿಯನ್ನ ಹೊಂದಿವೆ.  ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ಗುರಿಯ ಬಗ್ಗೆ ನಿಖರವಾದ ಡೇಟಾವನ್ನು ಒದಗಿಸುವ ಅತ್ಯಾಧುನಿಕ ವ್ಯವಸ್ಥೆಯನ್ನು ಹೊಂದಿದೆ.

 

Kishor KV