ಕದನ ವಿರಾಮ ಒಪ್ಪದ ಇರಾನ್‌ ಮೇಲೆ ಮತ್ತೆ ದಾಳಿ ಮಾಡಿದ ಅಮೆರಿಕ! – ಹಲವೆಡೆ ಸ್ಫೋಟ

ಕದನ ವಿರಾಮ ಒಪ್ಪದ ಇರಾನ್‌ ಮೇಲೆ ಮತ್ತೆ ದಾಳಿ ಮಾಡಿದ ಅಮೆರಿಕ! – ಹಲವೆಡೆ ಸ್ಫೋಟ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ ಯುದ್ಧಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಹೇಳಿಕೆ ಹೇಳಿಕೆ ನೀಡುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಒಮ್ಮೆ ಇರಾನ್‌ ಜೊತೆಗೆ ಕದನ ವಿರಾಮ ಒಪ್ಪಂದದ ಬಗ್ಗೆ ಮಾತನಾಡುವ ಟ್ರಂಪ್‌, ಮತ್ತೊಮ್ಮೆ ಇರಾನ್‌ ಮೇಲೆ ಭೀಕರ  ದಾಳಿಗಳನ್ನು ತೀವ್ರಗೊಳಿಸುವ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಮತ್ತೆ ಇರಾನ್‌ ಮೇಲೆ ಅಮೆರಿಕ ಭೀಕರ ದಾಳಿ ನಡೆಸಿದೆ.

ಇದನ್ನೂ ಓದಿ: CSKಯಲ್ಲಿ ಸದ್ದೇ ಮಾಡ್ತಿಲ್ಲ ಸಂಜು – 3 ಮ್ಯಾಚ್.. 22 ರನ್ಸ್.. ಏನಾಯ್ತು?

ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ,   ಒಂದೇ ರಾತ್ರಿಯಲ್ಲಿ ಇಡೀ ಇರಾನ್‌ನ ಸರ್ವನಾಶ ಮಾಡಬಹುದು, ಅದು ಮಂಗಳವಾರ ಇರಬಹುದು ಎಂದು ಟ್ರಂಪ್‌ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇರಾನ್‌ನ ಭಯೋತ್ಪಾದನಾ ಚಟುವಟಿಕೆಗಳ ಸೌಲಭ್ಯಗಳನ್ನ ಗುರಿಯಾಗಿಸಿ ಇರಾನ್‌ ವಾಯುದಾಳಿ ನಡೆಸಿದೆ. ಇದ್ರಿಂದಾಗಿ ಹಲವೆಡೆ ಭಾರೀ ಸ್ಫೋಟಗಳು ಸಂಭವಿಸಿವೆ. ರಾಜಧಾನಿ ಟೆಹ್ರಾನ್‌ ನ ಕೆಲವು ಭಾಗಗಳು ಮತ್ತು ಹತ್ತಿರದ ಕರಾಜ್‌ ನಗರ ಸೇರಿದಂತೆ ಹಲವೆಡೆ ಸ್ಫೋಟಗಳು ಸಂಭವಿಸಿದೆ ಎಂದು ಇಸ್ರೇಲ್‌ ಸೇನೆ ತನ್ನ ಅಧಿಕೃತ ಟೆಲಿಗ್ರಾಮ್‌ ಚಾನೆಲ್‌ನಲ್ಲಿ ಹೇಳಿಕೊಂಡಿದೆ. ಇರಾನ್‌ ಮಾಧ್ಯಗಳು ಸಹ ಸ್ಫೋಟಗಳ ಕುರಿತು ವರದಿ ಮಾಡಿವೆ.

ಇನ್ನು ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ, ಸೌದಿ ಅರೇಬಿಯಾ ಮಂಗಳವಾರ ತನ್ನ ವಾಯು ರಕ್ಷಣಾ ಪಡೆಗಳು ಇರಾನ್‌ನ 7 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಹಿಡಿದು ನಾಶಪಡಿಸಿವೆ ಎಂದು ಹೇಳಿಕೊಂಡಿದೆ.

Shwetha M