ಟ್ರಂಪ್ ಸರ್ಕಾರದಲ್ಲಿ ಹುಟ್ಟೋಕೂ ಅರ್ಜೆಂಟ್ – ಫೆ.20ರ ನಂತ್ರ ಜನಿಸಿದ್ರೆ ಗೋವಿಂದ!!
ತರಾತುರಿಯಲ್ಲಿ ಸಿಸೇರಿಯನ್ ಯಾಕೆ..?

ಟ್ರಂಪ್ ಸರ್ಕಾರದಲ್ಲಿ ಹುಟ್ಟೋಕೂ ಅರ್ಜೆಂಟ್ – ಫೆ.20ರ ನಂತ್ರ ಜನಿಸಿದ್ರೆ ಗೋವಿಂದ!!ತರಾತುರಿಯಲ್ಲಿ ಸಿಸೇರಿಯನ್ ಯಾಕೆ..?

ಅಮೆರಿಕದಲ್ಲಿರೋ ವಲಸಿಗರಿಗೆ ಟ್ರಂಪ್ ದೊಡ್ಡ ಮಟ್ಟದ ಪೆಟ್ಟು ಕೊಟ್ಟಿದ್ದಾರೆ.  ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಸಿಗುತ್ತಿದ್ದ ಅಮೆರಿಕ ಪೌರತ್ವದ ಹಕ್ಕನ್ನು ರದ್ದುಪಡಿಸುವುದಾಗಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಹೀಗಾಗಿ ಫೆಬ್ರವರಿ 19ರೊಳಗೆ ಮಕ್ಕಳು ಜನಿಸದಿದ್ರೆ ಅಮೆರಿದಲ್ಲಿರೋ  ನೆಲಸಿರೋ ವಲಸಿಗರ ಕತೆ ಗೋವಿಂದ ಎನ್ನುವಂತಾಗಿದೆ.. ಟ್ರಂಪ್ ಶಾಪೆ ಕಳೆಗೆ ನುಸುಳಿದ್ರೆ, ನಮ್ಮ ಭಾರತೀಯರು ರಂಗೋಲಿ ಕಳಗೆ ನೂಸುಳುತ್ತಿದ್ದಾರೆ.

ಇದನ್ನೂ ಓದಿ : PAKನಲ್ಲಿ ಅದೇ ರಾಗ ಅದೇ ಹಾಡು – 3 ಮೈದಾನಗಳಲ್ಲಿ ಮುಗಿಯುತ್ತಿಲ್ಲ ಕಾಮಗಾರಿ

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರು ಅರ್ಜೆಂಟ್ ಆಗಿ ಮಕ್ಕಳು ಮಾಡಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್‌.. ಅಮೆರಿಕದಲ್ಲಿ ಜನಿಸುವ ವಿದೇಶಿ ಪ್ರಜೆಗಳ ಮಕ್ಕಳಿಗೆ ಸ್ವಾಭಾವಿಕವಾಗಿ ದೊರೆಯುತ್ತಿದ್ದ ಅಮೆರಿಕದ ಪೌರತ್ವವನ್ನು ರದ್ದುಪಡಿಸುವ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದು, ಇದು ಫೆ.20ರಿಂದ ಜಾರಿಗೆ ಬರಲಿದೆ. ಹೀಗಾಗಿ ಫೆ.19ಕ್ಕೂ  ಮಧ್ಯರಾತ್ರಿ 12ರೊಳಗೆ ಮೊದಲೇ ಮಕ್ಕಳನ್ನು ಹೆತ್ತರೆ ಅವರು ಅಮೆರಿಕದ ಪ್ರಜೆಯಾಗುತ್ತಾರೆ ಎಂಬ ಆಸೆಯೊಂದಿಗೆ ದಂಪತಿಗಳು ಸಿಸೇರಿಯನ್ ಮೂಲಕ ಅವಧಿಗೂ ಮೊದಲೇ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾರೆ.

 ಈ ಬಗ್ಗೆ ಡಾಕ್ಟರ್‌ ಹೇಳಿದ್ದೇನು?:

 ಈ ಬಗ್ಗೆ ಮಾತನಾಡಿದ ನ್ಯೂ ಜೆರ್ಸಿಯಲ್ಲಿರುವ ಭಾರತ ಮೂದಲ ವೈದ್ಯೆ ರಮಾ, ‘ಅನೇಕ ಗರ್ಭಿಣಿಯರು 9 ತಿಂಗಳು ತುಂಬುವ ಮೊದಲೇ ಸಿಸೇರಿಯನ್ ಮಾಡಿಸಲು ಬಯಸಿದ್ದಾರೆ. ತಾಯಿ- ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತೆ ಅಂತ ಗೊತ್ತಿದ್ದರು ಈ ಸಹಾಸಕ್ಕೆ ಕೈ ಹಾಕಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಏಳು ತಿಂಗಳ ಮಹಿಳೆಯೊಬ್ಬರು ಪತಿಯ ಜೊತೆ ಅವಧಿಪೂರ್ವ ಹೆರಿಗೆಗೆ ನೋಂದಾಯಿಸಲು ಬಂದರು, ಅವರಿಗೆ ಮಾರ್ಚ್‌ವರೆಗೆ ಹೆರಿಗೆ ಮಾಡಲು ಅವಕಾಶವಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.

 ಭಯವಾಗುತ್ತಿದೆ ಎಂದ ಗರ್ಭಿಣಿಯರು 

ಇನ್ನೂ ಭಾರತ ಮೂಲದ ಗರ್ಭಿಣಿಯೊಬ್ಬರು ಈ ಬಗ್ಗೆ ಮಾತನಾಡಿ ಆತಂಕ ಹೊರ ಹಾಕುತ್ತಿದ್ದಾರೆ. ನಾವು ಕಳೆದ 6 ವರ್ಷಗಳಿಂದ ಅಮೆರಿಕದ ಶಾಶ್ವತ ಪೌರತ್ವ ನೀಡುವ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿದ್ದೇವೆ. ಈಗ ಮಗುವಿಗೆ ಅಮೆರಿಕದಲ್ಲಿ ಜನ್ಮನೀಡುವ ಮೂಲಕ ಅದನ್ನು ಸಾಧಿಸಲು ಯೋಚಿಸುತ್ತಿದ್ದೇವೆ. ಆದರೆ ಈಗ ಆಗುತ್ತಿರುವ ಬೆಳವಣಿಗೆಯಿಂದ ಭಯವಾ ಗುತ್ತಿದೆ ಅಂತ ಹೇಳಿದ್ರು.

 ಮಕ್ಕಳ ಹೆರೋಕೆ ಅರ್ಜೆಂಟ್‌ ಯಾಕೆ?

ಅಮೆರಿಕದ ಹೊಸ ನೀತಿ ಅನ್ವಯ ಫೆ.19 ರೊಳಗೆ ಅಮೆರಿಕದಲ್ಲಿ ಜನಿಸಿದ ವಿದೇಶಿಯರ ಮಕ್ಕಳಿಗೆ ಜನ್ಮಸಿದ್ದ ಪೌರತ್ವ  ಸಿಗುತ್ತೆ. ಆ ಬಳಿಕ ಜನಿಸಿದ ಮಕ್ಕಳು ಪೌರತ್ವಕ್ಕಾಗಿ ಅನೇಕ ವರ್ಷ ಕಾಯಬೇಕು. ಹೀಗಾಗಿ ಭಾರತೀಯ ಮೂಲದ ಪೋಷಕರಿಂದ ಅವಧಿಗೆ ಮೊದಲೇ ಹೆರಿಗೆ ಮಾಡಿಸಿಕೊಳ್ಳಲು ಯತ್ನಿಸಿದ್ದಾರೆ.  ವೈದ್ಯರು ಅನಾರೋಗ್ಯದ ಎಚ್ಚರಿಕೆ ನೀಡಿದರೂ ಅದ್ರ ಬಗ್ಗೆ ಪೋಷಕರು ತಲೆಕೆಡಿಸಿಕೊಳ್ಳುತ್ತಿಲ್ಲ..

ಭಾರತೀಯರಿಗೇಕೆ ಹೆಚ್ಚು ಭಯ?

ಈಗಾಗಲೇ ಅಮೆರಿಕದಲ್ಲಿ ಭಾರತ ಮೂಲದ 54 ಲಕ್ಷ ಜನರಿದ್ದಾರೆ. ಆದರೆ ಇವರಲ್ಲಿ ಶೇ.34  ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಉಳಿದ ಶೇ.66 ಜನರು ಭಾರತೀಯ ನಾಗರಿಕರಾಗಿದ್ದು, ಅಮೆರಿಕ ಪೌರರಲ್ಲ. ಕೆಲಸದ ಮೇಲೆ ಅಮೆರಿಕದಲ್ಲಿದ್ದಾರೆ. ಇವರಿಗೆ ಮಕ್ಕಳಾದರೆ, ಆ ಮಕ್ಕಳು ಅಮೆರಿಕ ಪೌರತ್ವದಿಂದ ವಂಚಿತರಾಗುವ ಭೀತಿ ಇದೆ.

ಟ್ರಂಪ್ ಆದೇಶಕ್ಕೆ ಬಿಗ್ ಬ್ರೇಕ್‌

ಅಮೆರಿಕದಲ್ಲಿ ಜನಿಸುವ ವಲಸಿಗರ ಮಕ್ಕಳು ಸ್ವಾಭಾವಿಕವಾಗಿ ಅಲ್ಲಿನ ಪ್ರಜೆಯಾಗುವ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದುಪಡಿಸುವ ಅಧ್ಯಕ್ಷ ಟ್ರಂಪ್ ಅವರ ಆದೇಶಕ್ಕೆ ಅಲ್ಲಿನ ಫೆಡೆರಲ್ ಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ. ಪೌರತ್ವ ಹಕ್ಕನ್ನು ರದ್ದುಪಡಿಸುವ ಅಧ್ಯಕ್ಷ ಟ್ರಂಪ್ ಅವರ ಆದೇಶಕ್ಕೆ ಅಲ್ಲಿನ ಫೆಡೆರಲ್ ಕೋರ್ಟ್‌ ತಾತ್ಕಾಲಿಕ ತಡೆ ನೀಡಿದೆ. ಸುಪ್ರೀಂ ಕೋರ್ಟ್ ಕಾನೂನು ಹಾಗೂ 14ನೇ ಸಾಂವಿಧಾನಿಕ ತಿದ್ದುಪಡಿಗಳು ಜನ್ಮಸಿದ್ಧ ಪೌರತ್ವ ಹಕ್ಕನ್ನು ದೃಢಪಡಿಸುತ್ತದೆ ಎಂದು ವಾದಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ  ಈ ಆದೇಶ ಹೊರಡಿಸಿದ್ದಾರೆ. ಇದರಿಂದ ಭಾರತೀಯರು ಸೇರಿದಂತೆ ಎಚ್-1ಬಿ ವೀಸಾ ಪಡೆದು ತಾತ್ಕಾಲಿಕವಾಗಿ ಅಮೆರಿಕದಲ್ಲಿ ನೆಲೆಸಿರುವವರು ನಿಟ್ಟುಸಿರು ಬಿಡುವಂತಾಗಿದೆ. ಆದ್ರೂ ಯಾಕ್ ರಿಸ್ಕ್ ಬೇಕು ಅಂತ ಹೇಳಿ ಅಮೆರಿಕದಲ್ಲಿರೋ ಭಾರತೀಯರು ಅರ್ಜೆಂಟ್‌ನಲ್ಲಿ ಸಿಸೇರಿಯನ್ ಮಾಡಿಸಿಕೊಳ್ಳುತ್ತಿದ್ದಾರೆ..

Kishor KV

Leave a Reply

Your email address will not be published. Required fields are marked *