ಬಾಹ್ಯಾಕಾಶದಲ್ಲಿ ಬ್ಯಾಗ್ ಕಳೆದುಕೊಂಡಿರುವ ಗಗನಯಾನಿಗಳು – ನಾಸಾ ಬಾಹ್ಯಾಕಾಶ ನಿಲ್ದಾಣಕ್ಕೆ‌ ಕಾದಿದೆದಯೇ ಆಪತ್ತು?

ಬಾಹ್ಯಾಕಾಶದಲ್ಲಿ ಬ್ಯಾಗ್ ಕಳೆದುಕೊಂಡಿರುವ ಗಗನಯಾನಿಗಳು – ನಾಸಾ ಬಾಹ್ಯಾಕಾಶ ನಿಲ್ದಾಣಕ್ಕೆ‌ ಕಾದಿದೆದಯೇ ಆಪತ್ತು?

ಗಗನ ಯಾತ್ರಿಗಳು ಎಷ್ಟೇ ತರಬೇತಿ ಪಡೆದಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ತಪ್ಪುಗಳನ್ನು ಮಾಡಿಬಿಡುತ್ತಾರೆ. ಭೂಮಿ‌ ಮೇಲೆ ಏನಾದರೂ ತಪ್ಪಾದರೆ ಸರಿಪಡಿಸಲು ಅವಕಾಶಗಳು ಜಾಸ್ತಿ ಇರುತ್ತವೆ. ಆದರೆ ಬಾಹ್ಯಾಕಾಶದಲ್ಲಿ ಹಾಗಲ್ಲ. ಅಲ್ಲಿ ಮಾಡುವ ಸಣ್ಣ ತಪ್ಪು ಕೂಡ ಒಮ್ಮೊಮ್ಮೆ ದೊಡ್ಡ  ಅಪಾಯಗಳಿಗೂ ಕಾರಣವಾಗಿರುತ್ತದೆ.

ಟೂಲ್ ಬ್ಯಾಗ್ ಕಳೆದುಕೊಂಡ ಗಗನ ಯಾತ್ರಿಗಳು

ನಾಸಾ ಗಗನಯಾತ್ರಿಗಳಾದ ಜಾಸ್ಮಿನ್ ಮೊಘ್ಬೆಲಿ ಮತ್ತು ಲೋರಲ್ ಒಹಾರಾ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ಸೌರ ಫಲಕಗಳ ದುರಸ್ತಿಯನ್ನು ನಡೆಸುತ್ತಿದ್ದಾಗ, ಅವರು ಆಕಸ್ಮಿಕವಾಗಿ ಟೂಲ್ ಬ್ಯಾಗ್ ಅನ್ನು ಬಿಟ್ಟುಬಿಟ್ಟರು. ಇದೀಗ ಈ ಟೂಲ್ ಬ್ಯಾಗ್ ಭೂಮಿಯ ಸುತ್ತ ಸುತ್ತುತ್ತಿದೆ. ಹಾಗೆಯೇ ಆಕಾಶ ವೀಕ್ಷಿಣೆ ಮಾಡುವವರು ಬೈನಾಕ್ಯುಲರ್ ಬಳಸಿಕೊಂಡು +6 ಮ್ಯಾಗ್ನಿಟ್ಯೂಡ್‌ನಲ್ಲಿ ಈ ಪರಿಕರವನ್ನು ಗುರುತಿಸಬಹುದಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಘಟನೆ ನಡೆದಿದ್ದು ಹೇಗೆ?

ಸೌರ ಫಲಕದ ಘಟಕದಲ್ಲಿ ರಿಪೇರಿ ನಡೆಸುತ್ತಿದ್ದಾಗ, ಗಗನಯಾತ್ರಿಗಳು ಅಕಸ್ಮತ್ತಾಗಿ ತಮ್ಮ ಅಜಾಗರೂಕತೆಯಿಂದ ಟೂಲ್ ಬ್ಯಾಗ್ ಅನ್ನು ಕಳೆದುಕೊಂಡರು. ಟೂಲ್‌ಬ್ಯಾಗ್ ಎಲ್ಲೋಯ್ತು ಅಂತ ಬಾಹ್ಯಕಾಶ ನಿಲ್ದಾಣದ ಕ್ಯಾಮೆರಾಗಳನ್ನು ಬಳಸಿಕೊಂಡು ನೋಡಿದಾಗ ಬ್ಯಾಗ್ ಅನ್ನು ಪತ್ತೆಹಚ್ಚಲಾಗಿದೆ. ಅದೃಷ್ಟವಶಾತ್, ದುರಸ್ತಿ ಕಾರ್ಯಾಚರಣೆಯ ಮುಂದಿನ ಹಂತಗಳಲ್ಲಿ ಈ ಟೂಲ್ ಬ್ಯಾಗ್‌ನ ಅಗತ್ಯವಿರಲಿಲ್ಲ.  ಆದರೂ ಟೂಲ್ ಬ್ಯಾಗ್ ಏನಾದರೂ ಭೀಕರವಾಗಿ ಡಿಕ್ಕಿ ಹೊಡೆದು ಅಪಾಯವನ್ನುಂಟು ಮಾಡಬಹುದೇ ಎಂಬ ಸಂದೇಹ ವಿಜ್ಞಾನಿಗಳಿಗೆ ಕಾಡುತ್ತಿತ್ತು.  ಕಡೆಗೂ NASA ವಿಜ್ಞಾನಿಗಳು ಬ್ಯಾಗ್‌ನ ಪಥವನ್ನು ಊಹಿಸಿದರು ಮತ್ತು ಇದು ISS ಅಥವಾ ಆನ್‌ಬೋರ್ಡ್ ಸಿಬ್ಬಂದಿಗೆ ಯಾವುದೇ ಅಪಾಯವನ್ನು ಉಂಟುಮಾಡುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.

ಇದನ್ನೂ ಓದಿ: ಭೂಮಿಯಿಂದ 2.1 ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿ ನಕ್ಷತ್ರ ಸ್ಫೋಟ – ಹೇಗಿದೆ ಗೊತ್ತಾ ಚಿತ್ತಾಕರ್ಷಕ ದೃಶ್ಯ?

ಟೂಲ್ ಬ್ಯಾಗ್ಗೆ ಏನು ಸಂಭವಿಸಿತು?

ಗಗನಯಾನಿಗಳು ಬಿಟ್ಟಿರುವ ಉಪಕರಣದ ಚೀಲವು ಕೆಲವು ತಿಂಗಳುಗಳ ಕಾಲ ಭೂಮಿಯ ಸುತ್ತ ಸುತ್ತುವ ನಿರೀಕ್ಷೆಯಿದೆ. ಈ ಸಮಯದಲ್ಲಿ ಅದು ಭೂಮಿಯಿಂದ 70 ಮೈಲುಗಳು ಅಥವಾ 113 ಕಿಲೋಮೀಟರ್‌ಗಳವರೆಗೆ ಇಳಿಯುವುದನ್ನು ಮುಂದುವರಿಸುತ್ತದೆ. ಅಲ್ಲಿಗೆ ತಲುಪಿದ ನಂತರ, ಅದು ಭೂಮಿಯ ವಾತಾವರಣದಲ್ಲಿ ವಿಭಜನೆಯಾಗಲು ಪ್ರಾರಂಭಿಸುತ್ತದೆ.

ಭೂಮಿಯ ಮೇಲಿಂದ ಕಾಣುತ್ತಾ?

ಬಾಹ್ಯಾಕಾಶ ನಿಲ್ದಾಣವನ್ನು ನೋಡುವ ವೀಕ್ಷಕರು ಟೂಲ್ ಬ್ಯಾಗ್ ಅನ್ನು ಸಹ ಗುರುತಿಸಬಹುದಂತೆ. ಭೂಮಿಯೊ ನೋಡುವಾಗ ಅದರ ಗಾತ್ರಕ್ಕೆ ಅತ್ಯಂತ ಪ್ರಕಾಶಮಾನವಾಗಿದೆ ಮತ್ತು ಬಾಹ್ಯಾಕಾಶ ನಿಲ್ದಾಣದ ಬಳಿ ಸುಳಿದಾಡುತ್ತದೆ. ಮುಂದಿನ ಕೆಲವು ವಾರಗಳವರೆಗೆ ಬೈನಾಕ್ಯುಲರ್‌ಗಳನ್ನು ಬಳಸಿಕೊಂಡು ಬಾಹ್ಯಾಕಾಶ ನಿಲ್ದಾಣದ ಸ್ವಲ್ಪ ಮುಂದೆ ಆಕಾಶವನ್ನು ಸ್ಕ್ಯಾನ್ ಮಾಡಬೇಕು.ಅಲ್ಲೊಂದು ಸಣ್ಣ ವಸ್ತುವು  ISS ಗಿಂತ ಕೆಲವು ಸೆಕೆಂಡುಗಳಿಗೂ ಮುಂದೆ ಚಲಿಸುತ್ತಿರುತ್ತದೆ.

Shwetha M