ಊರ್ವಶಿ ಥಿಯೇಟರ್ ನೆಲಸಮ! – ನೆಚ್ಚಿನ ಚಿತ್ರಮಂದಿರ ಇನ್ನು ನೆನಪು ಮಾತ್ರ!

ಊರ್ವಶಿ ಥಿಯೇಟರ್ ನೆಲಸಮ! – ನೆಚ್ಚಿನ ಚಿತ್ರಮಂದಿರ ಇನ್ನು ನೆನಪು ಮಾತ್ರ!

ಸಿನಿಮಾ ಪ್ರೇಮಿಗಳಿಗೆ ಊರ್ವಶಿ ಚಿತ್ರಮಂದಿರ ಅಂದರೆ ಅದೊಂಥರಾ ಎಮೋಷನಲ್ ಬಾಂಡಿಂಗ್. ಅದೆಷ್ಟೋ ಸಿನಿಮಾ ಪ್ರಿಯರ ನೆಚ್ಚಿನ ಚಿತ್ರಮಂದಿರವೆಂದರೆ ಅದು ಊರ್ವಶಿ ಥಿಯೇಟರ್.  ಇದೀಗ ಊರ್ವಶಿ ಥಿಯೇಟರ್ ಇನ್ನು ಕೇವಲ ನೆನಪಾಗಿ ಉಳಿಯಲಿದೆ.

ಇದನ್ನೂ ಓದಿ:ಸ್ವರ ಪುತ್ರ ಮಂಗಳೂರಿನ ಅಶ್ಮಿತ್ – ಸರಿಗಮಪ ಲಿಟಲ್ ಚಾಂಪ್ಸ್‌ನಲ್ಲಿ ಗೆದ್ದ ಕರಾವಳಿ ಪ್ರತಿಭೆ

ಬೆಂಗಳೂರಿನ ಐಕಾನಿಕ್ ಥಿಯೇಟರ್ ಅಂದರೆ ಊರ್ವಶಿ ಚಿತ್ರಮಂದಿರ. ಲಾಲ್ ಬಾಗ್ ಮುಖ್ಯರಸ್ತೆಯಲ್ಲಿದ್ದ ಊರ್ವಶಿ ಥಿಯೇಟರ್‌ ನಲ್ಲಿ ಸಿನಿಮಾ ನೋಡೋವುದೇ ವೀಕ್ಷಕರಿಗೆ ಸಂಭ್ರಮ. ಅದೆಷ್ಟೋ ಸಿನಿ ಪ್ರೇಮಿಗಳ ಫೇವರೇಟ್ ಚಿತ್ರಮಂದಿರವಿದು. 5 ಭಾಷೆಗಳ 5,000ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಕ್ಷಿಯಾಗಿದ್ದ ಈ ಥಿಯೇಟರ್‌ ಇನ್ನು ನೆನಪು ಮಾತ್ರ. 55 ವರ್ಷಗಳ ಇತಿಹಾಸವಿರುವ ಊರ್ವಶಿ ಥಿಯೇಟರ್‌ 1970ರಲ್ಲಿ ಅಣ್ಣಾವ್ರಿಂದ ಉದ್ಘಾಟನೆಗೊಂಡಿತ್ತು. ಅದರಲ್ಲೂ ಶಿವರಾಜ್ ಕುಮಾರ್ ಅಭಿನಯದ AK47 ಸಿನಿಮಾ 100ದಿನಗಳ ಪ್ರದರ್ಶನ ಕಂಡಿದ್ದು ಕೂಡಾ ಇದೇ ಥಿಯೇಟರ್‌ನಲ್ಲಿ. ಜೊತೆಗೆ ಕೆಜಿಎಫ್ 2, ಕಾಂತಾರ, ಕಬಾಲಿ, ಜೈಲರ್, ಬಾಹುಬಲಿ 2, ಸು ಫ್ರಂ ಸೋ, ಗರುಡಗಮನ‌ ವೃಷಭವಾಹನ ,ಭೀಮ ಹೀಗೆ ಅನೇಕ ಸಿನಿಮಾಗಳು ಇಲ್ಲಿ ತೆರೆಕಂಡು ಹೌಸ್ ಫುಲ್ ಶೋ ಗಳು ಆಗಿವೆ.

ಇದೀಗ ಈ ಚಿತ್ರಮಂದಿರ ಸಿನಿ ಪ್ರೇಮಿಗಳಿಗೆ ಬರೀ ನೆನಪಾಗಿ ಉಳಿಯಲಿದೆ. ಲಾಲ್ ಬಾಗ್ ಮುಖ್ಯರಸ್ತೆಯಲ್ಲಿದ್ದ ಊರ್ವಶಿ ಥಿಯೇಟರ್‌ ನೆಲಸಮ ಆಗಲಿದೆ. ಊರ್ವಶಿ ಥಿಯೇಟರ್ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಆರ್ಡರ್‌ನಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲ್ಯಾಂಡ್ ಲಾರ್ಡ್ ಜೊತೆ ಪೊಲೀಸರ ಮಾತುಕತೆ ನಡೆದಿದ್ದು ಊರ್ವಶಿ ಥಿಯೇಟರ್ ಭವಿಷ್ಯ ಅಂತ್ಯವಾಗಲಿದೆ. ಈ ಥಿಯೇಟರ್ ಬಸಟ್ಟಿ ಶೆಟ್ಟಿ ಗುತ್ತಿಗೆಗೆ ಪಡೆದಿದ್ದರು. 2018 ಏಪ್ರಿಲ್​ಗೆ ಇದರ ಅವಧಿ ಮುಕ್ತಾಯವಾಗಿದೆ. ನೆಲಸಮ ಕಾರ್ಯ ಆರಂಭವಾಗಿದ್ದು ಟಾಕ್ಸಿಕ್ ರಿಲೀಸ್‌ಗೆ ಮುನ್ನವೇ ಊರ್ವಶಿ ಥಿಯೇಟರ್‌ ನೆಲಸಮವಾಗುತ್ತಿದೆ. ಊರ್ವಶಿ ನೆಲಸಮ ಆಗದಿದ್ದರೆ ಟಾಕ್ಸಿಕ್ ರಿಲೀಸ್ ಆಗುವ ಸಾಧ್ಯತೆ ಇತ್ತು.

Sulekha