ರಿಷಬ್ ಪಂತ್ ಮತ್ತು ಊರ್ವಶಿ ರೌಟೇಲಾ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ?
ಅಂದು ಇಬ್ಬರ ನಡುವೆ ಕಿತ್ತಾಟ - ಇವತ್ತು ಪಂತ್‌ಗಾಗಿ ಊರ್ವಶಿಯ ಒದ್ದಾಟ...

ಕ್ರಿಕೆಟಿಗ ರಿಷಬ್ ಪಂತ್ ಮತ್ತು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇಬ್ಬರ ನಡುವೆಯೂ ಏನೋ ನಡೀತಿದೆ ಅಂತಾ ಕಳೆದ ಹಲವು ಸಮಯದಿಂದ ಸುದ್ದಿಯಾಗುತ್ತಲೇ ಇದೆ. ಇದೀಗ ಪಂತ್ಗೆ ಆ್ಯಕ್ಸಿಡೆಂಟ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಊರ್ವಶಿ ಮಾಡ್ತಿರೋ ಪೋಸ್ಟ್ಗಳು ಇನ್ನಷ್ಟು ಗುಮಾನಿ ಎಬ್ಬಿಸಿದೆ. ಯಾಕಂದ್ರೆ ಪಂತ್ ಅಪಘಾತಕ್ಕೊಳಗಾದ ದಿನ ಊರ್ವಶಿ, ಪ್ರಾರ್ಥಿಸುತ್ತಿದ್ದೇನೆ ಅಂತಾ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ರು. ಇದೀಗ ಪಂತ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ನಿನ್ನೆ, ನಟಿ ಊರ್ವಶಿ ರೌಟೇಲಾ ಕಾರಿನಲ್ಲಿ ಪ್ರಯಾಣಿಸ್ತಿದ್ದಾಗ ತೆಗೆದ ಆಸ್ಪತ್ರೆಯ ಹೊರ ಭಾಗದ ಫೋಟೋವನ್ನ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಊರ್ವಶಿ ಆಸ್ಪತ್ರೆಗೆ ತೆರಳಿ ರಿಷಬ್ರನ್ನ ಭೇಟಿಯಾಗಿದ್ದಾರಾ ಅನ್ನೋ ಬಗ್ಗೆ ಊಹಾಪೋಹಗಳು ಹರಿದಾಡ್ತಿವೆ.