‘ಉರಿಗೌಡನೂ ಇಲ್ಲ.. ನಂಜೇಗೌಡನೂ ಇಲ್ಲ.. ಡಿಜಿಪಿ ನಾಲಾಯಕ್’ – ಬಿಜೆಪಿ ವಿರುದ್ಧ ಡಿಕೆಶಿ ಕೆಂಡ..!

‘ಉರಿಗೌಡನೂ ಇಲ್ಲ.. ನಂಜೇಗೌಡನೂ ಇಲ್ಲ.. ಡಿಜಿಪಿ ನಾಲಾಯಕ್’ – ಬಿಜೆಪಿ ವಿರುದ್ಧ ಡಿಕೆಶಿ ಕೆಂಡ..!

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಆಗಮಿಸಿದ್ದ ವೇಳೆ ರೋಡ್ ಶೋ ನಡೆಸಿದ್ರು. 1.8 ಕಿಲೋಮೀಟರ್​ಗಳ ರೋಡ್ ಶೋನಲ್ಲಿ ನಾಲ್ಕು ಮಹಾದ್ವಾರಗಳನ್ನ ಹಾಕಲಾಗಿತ್ತು. ಆದ್ರೆ ನಾಲ್ಕನೇ ದ್ವಾರ ಚರ್ಚೆಗೆ ಗ್ರಾಸವಾಗಿದೆ. ಯಾಕಂದ್ರೆ ‘ಉರಿಗೌಡ ಮತ್ತು ನಂಜೇಗೌಡ’ ಹೆಸರಿನಲ್ಲಿ ಹಾಕಲಾಗಿದ್ದ ದ್ವಾರರ ಬಗ್ಗೆ ಪರ ವಿರೋಧ ವ್ಯಕ್ತವಾಗುತ್ತಿದೆ.

ಅಷ್ಟಕ್ಕೂ ಈ ‘ಉರಿಗೌಡ ಮತ್ತು ನಂಜೇಗೌಡ’ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಟಿಪ್ಪುವನ್ನ ಕೊಂದಿದ್ದು ಇವರೇ ಎಂದು ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ವಾದಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್ ಬಳಿ ನಡೆದ ತಿಗಳ ಸಮುದಾಯದ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ರು. ಉರಿಗೌಡ ಮತ್ತು ನಂಜೇಗೌಡ ಪಾತ್ರ ಸೃಷ್ಟಿಯ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು.

ಇದನ್ನೂ ಓದಿ : ಧ್ರುವನಾರಾಯಣ ಪಾರ್ಥಿವ ಶರೀರ ಕಂಡು ಮೌನವಾದ ಸಿದ್ದರಾಮಯ್ಯ – ಬಿಕ್ಕಿ ಬಿಕ್ಕಿ ಅತ್ತ ಬೆಂಬಲಿಗರು!

‘ಉರಿಗೌಡನೂ ಇಲ್ಲ ನಂಜೇಗೌಡನೂ ಇಲ್ಲ. ಬಿಜೆಪಿಯವರು ಇತಿಹಾಸ ತಿರುಚಲು ಯತ್ನಿಸುತ್ತಿದ್ದಾರೆ. ಕುವೆಂಪು, ಬಸವಣ್ಣ, ಕೆಂಪೇಗೌಡ, ಶ್ರೀ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರನಾಥ ಶ್ರೀಗಳನ್ನೂ ಬಿಟ್ಟಿಲ್ಲ. ಎಲ್ಲರ ಇತಿಹಾಸ ತಿರುಚಲು ಯತ್ನಿಸುತ್ತಿದ್ದಾರೆ. ಈ ಹಿಂದೆ ನಂಜೇಗೌಡ-ಉರಿಗೌಡರ ಹೆಸರನ್ನ ಎಲ್ಲಿ ಕೇಳಿದ್ದೆವು. ಇದೆಲ್ಲಾ ಒಕ್ಕಲಿಗ ಸಮುದಾಯಕ್ಕೆ ಮೋಸ ಮಾಡುವ ತಂತ್ರ. ಜಾತಿ ಜಾತಿ ಮಧ್ಯೆ ವಿಷಬೀಜ ತುಂಬಲು ಬಿಜೆಪಿ ಯತ್ನಿಸುತ್ತಿದೆ. ಹೀಗಾಗಿ ಬಿಜೆಪಿಯವರ ವಿರುದ್ಧ ಕೇಸ್ ದಾಖಲಿಸಬೇಕು. ಆದ್ರೆ ಡಿಜಿಪಿ ಪ್ರವೀಣ್ ಸೂದ್ ನಾಲಾಯಕ್. ಚುನಾವಣಾ ಆಯೋಗದವರು ಕೂಡಲೇ ಪ್ರವೀಣ್ ಸೂದ್​ರನ್ನ ಶಿಫ್ಟ್ ಮಾಡಬೇಕು. ಪ್ರವೀಣ್ ಸೂದ್ ಡಿಜಿ & ಐಜಿ ಆಗಿ 3 ವರ್ಷ ಆಯ್ತು. ಇನ್ನೂ ಎಷ್ಟು ವರ್ಷ ಇಟ್ಕೊಂಡು ಕೂರ್ತಾರೆ. ಹೋರಾಟ ಮಾಡಿದ್ರೆ ಕಾಂಗ್ರೆಸ್​ನವರ ಮೇಲೆ ಕೇಸ್ ಹಾಕ್ತಾರೆ ನನ್ನ ಮೇಲೆಯೇ 25 ಕೇಸ್ ಹಾಕಿದ್ದಾರೆ. ಆದ್ರೆ ಬಿಜೆಪಿಯವರ ಮೇಲೆ 1 ಕೇಸ್ ಹಾಕಲು ಆಗಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಬಿಜೆಪಿ ಹೇಳಿದಂಗೆ ಕೇಳುವವರ ಮೇಲೆಲ್ಲಾ ಕ್ರಮ ಕೈಗೊಳ್ಳುತ್ತೇವೆ’ ಎಂದರು.

suddiyaana