ಉರಿ ದಾಳಿ, ಪುಲ್ವಾಮಾ ದಾಳಿ ಬಿಜೆಪಿ ಸರ್ಕಾರದ ಪ್ಲಾನ್ – ನ್ಯಾಷನಲ್ ಕಾನ್ಫರೆನ್ಸ್ ಶೇಖ್ ಮುಸ್ತಫಾ ಕಮಾಲ್ ಗಂಭೀರ ಆರೋಪ
ಶ್ರೀನಗರ: ಉರಿ ದಾಳಿ ಮತ್ತು ಪುಲ್ವಾಮಾ ದಾಳಿ ಎರಡನ್ನೂ ಕೇಂದ್ರ ಸರ್ಕಾರವೇ ಆಯೋಜಿಸಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಶೇಖ್ ಮುಸ್ತಫಾ ಕಮಾಲ್ ಸೋಮವಾರ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ದೆಹಲಿ ಚಳಿಗಾಲದ ಅಧಿವೇಶನ – ಆಮ್ಲಜನಕ ಸಿಲಿಂಡರ್ ನೊಂದಿಗೆ ಸದನಕ್ಕೆ ಆಗಮಿಸಿದ ಬಿಜೆಪಿ ಶಾಸಕರು
2016ರ ಉರಿ ಮತ್ತು 2019ರ ಪುಲ್ವಾಮಾ ದಾಳಿಯ ಕುರಿತು ಮಾತನಾಡಿದ ಶೇಖ್ ಮುಸ್ತಫಾ ಕಮಾಲ್, “ಈ ದಾಳಿಗಳನ್ನು ಬಿಜೆಪಿ ಸರ್ಕಾರದಿಂದ ಯೋಜಿಸಲಾಗಿದೆ ಎಂಬುದು ಬಹುತೇಕ ಸ್ಪಷ್ಟವಾಗಿದೆ. ಈ ದಾಳಿಯಲ್ಲಿ ಹುತಾತ್ಮರಾದ ಯಾವುದೇ ಸೈನಿಕರ ಶವಗಳು ಅಥವಾ ಚಿತ್ರಗಳು ಪತ್ತೆಯಾಗಿಲ್ಲ. ಈ ವೇಳೆ ಸಾವನ್ನಪ್ಪಿದವರೆಲ್ಲರೂ ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯಕ್ಕೆ ಸೇರಿದವರು ಎಂದು ಅವರು ಆರೋಪಿಸಿದ್ದಾರೆ.
#WATCH | Jammu:Speaking on Uri & Pulwama terror attacks, NC Addl Genl Secy Mustafa Kamal says, “Almost clear that it was planned by Govt of India.We didn’t see their photos or bodies…Until it’s clear as to who’s the killer, all fingers point toward agencies of Govt of India…” pic.twitter.com/Rori9OVEkt
— ANI (@ANI) January 16, 2023
ಕೇಂದ್ರ ಸರ್ಕಾರವೇ ಈ ದಾಳಿಗಳನ್ನು ನಡೆಸಿದೆ ಎಂಬುದು ಈಗ ಖಚಿತವಾಗಿದೆ. ಈ ದಾಳಿಯಲ್ಲಿ ಹುತಾತ್ಮರಾದವರ ದೇಹ, ಫೋಟೋಗಳನ್ನು ನೋಡಿಲ್ಲ. ಆ ದಾಳಿಯಲ್ಲಿ 30 ರಿಂದ 40 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಮಾತನಾಡಿದ ಶೇಖ್ ಮುಸ್ತಫಾ ಕಮಾಲ್ ಆರೋಪಿಸಿದ್ದಾರೆ.