ತುಂಡುಡುಗೆ ಧರಿಸಿ ಬಂದ ಉರ್ಫಿ ಪೊಲೀಸರ ವಶಕ್ಕೆ – ಪಾಪ.. ಈ ನಟಿಯ ದೇಹಕ್ಕೆ ಬಟ್ಟೆಯೇ ಸೆಟ್ ಆಗಲ್ವಂತೆ..!

ತುಂಡುಡುಗೆ ಧರಿಸಿ ಬಂದ ಉರ್ಫಿ ಪೊಲೀಸರ ವಶಕ್ಕೆ – ಪಾಪ.. ಈ ನಟಿಯ ದೇಹಕ್ಕೆ ಬಟ್ಟೆಯೇ ಸೆಟ್ ಆಗಲ್ವಂತೆ..!

ಚಿತ್ರ ವಿಚಿತ್ರ ಡ್ರೆಸ್ಸು. ಪ್ರಶ್ನೆ ಮಾಡಿದರೆ ಸಿಕ್ಕಾಪಟ್ಟೆ ಕಿರಿಕ್ಕು. ಬಾಲಿವುಡ್ ನಟಿ ಉರ್ಫಿ ಜಾವೇದ್ ಮೈಮೇಲೆ ಬಟ್ಟೆ ನಿಲ್ಲೋದಿಲ್ಲವೋ ಇಲ್ಲ ಬಟ್ಟೆ ಅಂದರೆ ಉರ್ಫಿಗೆ ಅಲರ್ಜಿಯೋ.. ಬಟ್ಟೆ ಕಾರಣದಿಂದಲೇ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ ಈ ನಟಿ. ಈ ಬಾರಿ ತುಂಡುಡುಗೆ ಹಾಕಿಕೊಂಡು ಓಡಾಡುವ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಇದೇ ಕಾರಣಕ್ಕೆ ಅರೆಸ್ಟ್ ಕೂಡಾ ಆಗಿದ್ದಾಳೆ.

ಇದನ್ನೂ ಓದಿ: ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೈಮುಚ್ಚಿಕೊಂಡ ಉರ್ಫಿ! – ಪಡ್ಡೆಹುಡುಗರ ನಿದ್ದೆಗೆಡೆಸಿದ ಬಿಚ್ಚಮ್ಮಳ ಅವತಾರ!

ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಅರೆಸ್ಟ್ ಆಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹೋಟೆಲ್ ಗೆ ಬಂದಿದ್ದ ಉರ್ಫಿಯನ್ನು  ಮಹಿಳಾ ಪೊಲೀಸ್ ಪೇದೆಗಳು ಕರೆದುಕೊಂಡು ಹೋಗಿ ಪೊಲೀಸ್ ವ್ಯಾನ್ ನಲ್ಲಿ ಕೂರಿಸುವ ವಿಡಿಯೋ ಇದಾಗಿದೆ. ರೆಸ್ಟೋರೆಂಟ್ ಮುಂದೆಯೇ ಮಹಿಳಾ ಪೊಲೀಸರಿಗೆ ಉರ್ಫಿ ಪ್ರಶ್ನೆ ಮಾಡುತ್ತಾರೆ. ಯಾಕಾಗಿ ನನ್ನನ್ನು ಅರೆಸ್ಟ್ ಮಾಡುತ್ತಿದ್ದೀರಿ ಎಂದು ಕೇಳುತ್ತಾರೆ. ಅರೆಬರೆ ಬಟ್ಟೆ ಹಾಕಿಕೊಂಡು ಹೀಗೆ ಬೀದಿಗೆ ಬರಬಹುದೆ? ಎಂದು ಪೊಲೀಸರು ಪ್ರಶ್ನೆ ಮಾಡುತ್ತಾರೆ. ಆನಂತರ ಪೊಲೀಸ್ ವ್ಯಾನ್ ನಲ್ಲಿ ಉರ್ಫಿಯನ್ನು ಕೂರಿಸಿಕೊಂಡು ಹೊರಡುತ್ತಾರೆ.

ನಟಿ ಉರ್ಫಿ ಜಾವೇದ್ ಸಾರ್ವಜನಿಕವಾಗಿ ಅಶ್ಲೀಲತೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಚಿತ್ರಾ ಕಿಶೋರ್ ವಾಘ್, ಈ ಹಿಂದೆಯಷ್ಟೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಮುಂಬೈ ಪೊಲೀಸರು ಉರ್ಫಿ ಜಾವೇದ್ ಗೆ ಸಮನ್ಸ್ ನೀಡಿದ್ದರು. ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ತಿಳಿಸಿದ್ದರು. ಉರ್ಫಿ ಜಾವೇದ್ ಅವರು ಕೂರ ಚಿತ್ರಾ ಕಿಶೋರ್ ವಾಘ್ ಮೇಲೆ ಆರೋಪ ಮಾಡಿದ್ದರು. ಇವರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಹಾಗೂ ಮಾನಹಾನಿ ಮಾಡುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ತಮ್ಮ ವಕೀಲರ ಮೂಲಕ ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ಉರ್ಫಿ ದೂರು ನೀಡಿದ್ದಾರೆ. ಅಲ್ಲದೇ, ತಮಗೆ ಜೀವ ಬೆದರಿಕೆ ಇರುವ ಕಾರಣದಿಂದಾಗಿ ರಕ್ಷಣೆ ನೀಡುವಂತೆ ಉರ್ಫಿ ಮನವಿ ಮಾಡಿದ್ದರು.

ಕಿರುತೆರೆಯಲ್ಲಿ ನಟಿಸಿ ಫೇಮಸ್ ಆದರು ಉರ್ಫಿ. ಆ ಬಳಿಕ ಅವರು ‘ಹಿಂದಿ ಬಿಗ್ ಬಾಸ್’ ಒಟಿಟಿ ಸೀಸನ್‌ಗೆ ಬಂದರು. ಅಲ್ಲಿಯೂ ಅವರು ಚಿತ್ರವಿಚಿತ್ರ ಬಟ್ಟೆ ಧರಿಸಿದ್ದರು. ಮೊಬೈಲ್‌ನಿಂದ ಎದೆ ಭಾಗ ಮುಚ್ಚಿಕೊಳ್ಳುವುದು, ಅಂಗಾಂಗ ಕಾಣಿಸುವಂತೆ ಬಟ್ಟೆ ಧರಿಸುವುದು. ತುಂಡುಡುಗೆಯಲ್ಲೇ ಅಶ್ಲೀಲವಾಗಿ ಫೋಸ್ ಕೊಡುತ್ತಾ ಸದಾ ವಿವಾದದಲ್ಲಿ ಇರುತ್ತಾರೆ ಈ ನಟಿ.

ಬಟ್ಟೆ ವಿಚಾರದಲ್ಲಿ ಉರ್ಫಿಯನ್ನು ವಶಕ್ಕೆ ಪಡೆದಿದ್ದು ಇದೇ ಮೊದಲೇನು ಅಲ್ಲ. ವಿದೇಶಕ್ಕೆ ತೆರಳಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅವರು ಸಣ್ಣ ಬಟ್ಟೆ ಧರಿಸಿದ್ದೇ ಇದಕ್ಕೆ ಕಾರಣ ಆಗಿತ್ತು. ಇನ್ನು, ಇವರ ವಿರುದ್ಧ ಮುಂಬೈನಲ್ಲಿ ಹಲವು ಪ್ರಕರಣ ದಾಖಲಾಗಿದೆ. ಅವರ ಬಟ್ಟೆ ಅಶ್ಲೀಲವಾಗಿರುತ್ತದೆ ಎಂದು ಅನೇಕರು ಹೇಳಿದ್ದಿದೆ. ಎಷ್ಟೇ ಕೇಸ್ ಬಿದ್ದರೂ ತಲೆಕೆಡಿಸಿಕೊಳ್ಳದೆ ಉರ್ಫಿ ನನ್ ದೇಹ, ನನ್ ಬಟ್ಟೆ.. ನನ್ನಿಷ್ಟ. ನಿಮಗ್ಯಾಕೆ ಕಷ್ಟ ಅಂತಾ ಕೇಳುತ್ತಿದ್ದಾರೆ.

Sulekha