ಮೈ ತುಂಬಾ ಬಟ್ಟೆ ಹಾಕಿಕೊಂಡ ʼಬಿಚ್ಚಮ್ಮʼ! – ಉರ್ಫಿ ಏಲಿಯನ್ ಅವತಾರಕ್ಕೆ ಫ್ಯಾನ್ಸ್ ಶಾಕ್
ನಟಿ ಉರ್ಫಿ ಜಾವೇದ್ ಯಾರಿಗೆ ಗೊತ್ತಿಲ್ಲ ಹೇಳಿ. ಬಟ್ಟೆ ಅಂದ್ರೆ ಅಲರ್ಜಿ ಎಂಬಂತೆ ಮೈ ತೋರಿಸಿಕೊಂಡು ಹೋಗುತ್ತಾರೆ. ಹೀಗಾಗಿಯೇ ಆಕೆಯನ್ನು ಬಿಚ್ಚಮ್ಮ ಎಂದು ಕರೆಯುತ್ತಾರೆ. ಇದೀಗ ಎಲ್ಲರಿಗೂ ಉರ್ಫಿ ಅವತಾರ ನೋಡಿ ಶಾಕ್ ಆಗಿದೆ. ಅಯ್ಯೋ.. ಉರ್ಫಿಗೆ ಏನಾಯ್ತಪ್ಪ ಅಂತಾ ಕೇಳುತ್ತಿದ್ದಾರೆ. ಇದಕ್ಕೆ ಕಾರಣ ಉರ್ಫಿ ಏಲಿಯನ್ ಅವತಾರ. ಮೊದಲ ಬಾರಿಗೆ ಉರ್ಫಿ ಮೈ ತುಂಬಾ ಬಟ್ಟೆ ಹಾಕಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಬಿಚ್ಚಮ್ಮನಿಗೆ ಹೋಟೆಲ್ ಒಳಗೆ ನೋ ಎಂಟ್ರಿ – ಉರ್ಫಿಗೆ ಫುಲ್ ಉರಿ ಉರಿ..!
ನಟಿ ಉರ್ಫಿ ಚಿತ್ರ ವಿಚಿತ್ರ ರೀತಿಯಲ್ಲಿ ಬಟ್ಟೆ ಕಾಣಿಸಿಕೊಳ್ಳುತ್ತಾರೆ. ಹೀಗಾಗಿ ಆಕೆ ಪಡ್ಡೆ ಹುಡುಗರ ಹಾಟ್ ಫೇವರೇಟ್. ತಾನು ಮಾಡಿದ್ದೇ ಸರಿ. ತಾನು ಹಾಕಿಕೊಳ್ಳುವ ತುಂಡು ಬಟ್ಟೆ ಎಲ್ಲರಿಗೂ ಇಷ್ಟವಾಗುತ್ತೆ ಅನ್ನೋ ರೀತಿ ತಿರುಗಾಡುತ್ತಾರೆ. ಉರ್ಫಿಈ ಬಾರಿ ಏಲಿಯನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್ನಲ್ಲಿ ಉರ್ಫಿ ಜಾವೇದ್ ಅವರ ಕಣ್ಣು ಹಾಗೂ ಬಾಯಿಯನ್ನು ಬಿಟ್ಟು ಬೇರೇನೂ ಕಾಣಿಸುತ್ತಿರಲಿಲ್ಲ. ಈ ಅವತಾರದಲ್ಲಿಯೇ ಉರ್ಫಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಉರ್ಫಿಯ ಹೊಸ ಅವತಾರವನ್ನು ಟ್ರೋಲ್ ಮಾಡುತ್ತಿದ್ದಾರೆ.
ಉರ್ಫಿ ಜಾವೇದ್ ಅವತಾರ ನೋಡಿದ ನೆಟ್ಟಿಗರು ನೀವು ದೆವ್ವದಂತೆಯೇ ಕಾಣುತ್ತಿದ್ದೀರಿ ಎಂದಿದ್ದಾರೆ. ಇನ್ನೂ ಕೆಲವರು ಏನಮ್ಮಾ ಇವತ್ತೇನೂ ಕಾಣಿಸ್ತಿಲ್ವಲ್ಲಾ? ನಿನಗೆ ಬೇಸಿಗೆ ಬಿಸಿ ತಟ್ಟುತ್ತಿಲ್ವೇ ಎಂದು ಕೇಳಿದ್ದಾರೆ. ಇನ್ನೂ ಕೆಲವರು ನೀವು ಥೇಟ್ ಏಲಿಯನ್ ರೀತಿಯೇ ಕಾಣಿಸುತ್ತಿದ್ದೀರಿ ಎಂದಿದ್ದಾರೆ.