ಒಂದು ಕೈಯಲ್ಲಿ ಟೊಮ್ಯಾಟೊ.. ಮತ್ತೊಂದು ಕೈಯಲ್ಲಿ ʼಅದನ್ನʼ ಮುಚ್ಚಿಕೊಂಡ ಉರ್ಫಿ! – ಬಿಚ್ಚಮ್ಮಳ ಹೊಸ ಅವತಾರ

ಒಂದು ಕೈಯಲ್ಲಿ ಟೊಮ್ಯಾಟೊ.. ಮತ್ತೊಂದು ಕೈಯಲ್ಲಿ ʼಅದನ್ನʼ ಮುಚ್ಚಿಕೊಂಡ ಉರ್ಫಿ! – ಬಿಚ್ಚಮ್ಮಳ ಹೊಸ ಅವತಾರ

ನಟಿ, ಮಾಡೆಲ್ ಉರ್ಫಿ ಜಾವೇದ್‌ ಯಾರಿಗೆ ಗೊತ್ತಿಲ್ಲಾ? ಚಿತ್ರ, ವಿಚಿತ್ರ ಡ್ರೆಸ್‌ಗಳನ್ನು ಧರಿಸಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಗೈ ಅಗಲದ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸುತ್ತಾರೆ. ಇದೀಗ ಬಿಚ್ಚಮ್ಮ ಮತ್ತೊಂದು ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ದುಬಾರಿ ಕಿವಿಯೋಲೆಯನ್ನು ಧರಿಸಿ ತನ್ನ ಮೈಮಾಟ ಪ್ರದರ್ಶಿಸಿದ್ದಾರೆ!

ಉರ್ಫಿ ಸದಾ ತುಂಡುಡುಗೆ ಬಟ್ಟೆಗಳನ್ನು ಧರಿಸಿ ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ಇದೀಗ ಉರ್ಫಿ ದುಬಾರಿ ಕಿವಿಯೋಲೆಯನ್ನು ಧರಿಸಿ ಸುದ್ದಿಯಾಗಿದ್ದಾರೆ. ಆಕೆ ಧರಿಸಿರುವ ಕಿವಿಯೋಲೆ ಸಾಮಾನ್ಯ ಕಿವಿಯೋಲೆಯಲ್ಲ.. ಈ ಬಾರಿ ಉರ್ಫಿ ಟೊಮ್ಯಾಟೊವನ್ನೇ ಕಿವಿಯೋಲೆಯಾಗಿ ಮಾಡಿ ಧರಿಸಿದ್ದಾರೆ. ತಮ್ಮ ವಿಭಿನ್ನ ಕಿವಿಯೋಲೆ ಧರಿಸಿ ತಮ್ಮ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ.

ಇದನ್ನೂ ಓದಿ: ಮೈ ತುಂಬಾ ಬಟ್ಟೆ ಹಾಕಿಕೊಂಡ ʼಬಿಚ್ಚಮ್ಮʼ! – ಉರ್ಫಿ ಏಲಿಯನ್​ ಅವತಾರಕ್ಕೆ ಫ್ಯಾನ್ಸ್ ಶಾಕ್‌ 

ಟೊಮ್ಯಾಟೊ ದುಬಾರಿಯಾಗಿದೆ. ಒಂದು ಕೆಜಿ ಟೊಮ್ಯಾಟೊ ಬೆಲೆ ಸುಮಾರು 120 ರೂಪಾಯಿಗೂ ಹೆಚ್ಚಾಗಿದ್ದು, ಟೊಮ್ಯಾಟೊ ಇಲ್ಲದೆ ಗೃಹಿಣಿಯರು ಸಾಂಬಾರು ಮಾಡುವಂತಾಗಿದೆ. ಜನ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದರೆ ಉರ್ಫಿ ಟೊಮ್ಯಾಟೊ ಬಳಸಿ ಫ್ಯಾಷನ್ ಮಾಡುತ್ತಿದ್ದಾರೆ. ಟೊಮ್ಯಾಟೊ ಬೆಲೆ ಗಗನಕ್ಕೇರಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ಟೊಮ್ಯಾಟೊದಿಂದ ಮಾಡಿದ ಕಿವಿಯೋಲೆಯನ್ನು ಅವರು ಧರಿಸಿದ್ದಾರೆ. ಅವರ ಫೋಟೋಸ್ ವೈರಲ್ ಆಗಿವೆ. ಧರಿಸಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ನೆಟ್ಟಿಗರಿಂದ ಟ್ರೋಲ್‌ಗೊಳಗಾಗಿದ್ದಾರೆ.

ಊರ್ಫಿ ಪೊಸ್ಟ್‌ ಮಾಡಿರುವ ವಿಡಿಯೋ ಹಾಗೂ ಫೋಟೋಗೆ ‘ಟೊಮ್ಯಾಟೊನೇ ಈಗಿನ ಹೊಸ ಬಂಗಾರʼ ಎಂಬ ಕ್ಯಾಪ್ಷನ್​ ನೀಡಿದ್ದಾರೆ. ಆಕೆ ಪೊಸ್ಟ್‌ ಮಾಡಿರುವ ವಿಡಿಯೋದಲ್ಲಿ ಕಪ್ಪು ಬಣ್ಣದ ತುಂಡುಡುಗೆಯನ್ನು ಉರ್ಫಿ ಧರಿಸಿದ್ದಾರೆ. ಈ ಬಟ್ಟೆಯಲ್ಲೂ ಉರ್ಫಿ ತನ್ನ ದೇಹದ ಪ್ರದರ್ಶನ ಮಾಡಿದ್ದಾರೆ. ಆಕೆ ಧರಿಸಿರುವ ಬಟ್ಟೆ, ಎದೆಯ ಭಾಗದಲ್ಲಿ ಒಂದು ಸೈಡ್‌ ಕವರ್‌ ಆಗಿದ್ದರೆ, ಇನ್ನೊಂದು ಸೈಡ್‌ ಪೂರ್ತಿ ಓಪನ್‌ ಆಗಿದೆ. ಒಂದು ಕೈಯಲ್ಲಿ ತನ್ನ ಖಾಸಗಿ ಭಾಗವನ್ನ ಮುಚ್ಚಿಕೊಂಡಿರುವ ಆಕೆ ಇನ್ನೊಂದು ಕೈಯಲ್ಲಿ ಟೊಮ್ಯಾಟೊವನ್ನು ತಿನ್ನುತ್ತಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಯ್ಯೋ ಉರ್ಫಿ ಸಖತ್​​ ದುಬಾರಿ.. ನಿಮ್ಮ ಇಯರಿಂಗ್ಸ್ ನಿಮಗೆ ಭಾರವಾಗ್ತಿಲ್ವಾ? ಮೇಡಂ ಕಿವಿ ಹರಿದೋಗುತ್ತದೆ, ಟೊಮ್ಯಾಟೊ ಕೊಟ್ಟಿದ್ರೆ ಸಾಂಬಾರ್​​ ಮಾಡಬಹುದು ಇತ್ತು ಎಂದು ಕಾಮೆಂಟ್​ ಮಾಡಿದ್ದಾರೆ.

 

View this post on Instagram

 

A post shared by Uorfi Javed (@urf7i)

suddiyaana