ಪ್ರೀತಿಯಲ್ಲಿ ಬಿದ್ದ ಉರ್ಫಿ.. ಮದುವೆಗೂ ಮುಹೂರ್ತ ಫಿಕ್ಸ್? – ಉರ್ಫಿ ಮನ ಗೆದ್ದ ಹುಡ್ಗ ಯಾರು?

ಉರ್ಫಿ ಜಾವೇದ್.. ನಟಿ.. ಮಾಡೆಲ್.. ಯಾರಿಗೆ ಗೊತ್ತಿಲ್ಲ ಹೇಳಿ.. ಸೋಶಿಯಲ್ ಮೀಡಿಯಾ ಬಳಸೋರಿಗೆ ಈಕೆಯ ಪರಿಚಯ ಇದ್ದೇ ಇದೆ.. ಸದಾ ಚಿತ್ರ ವಿಚಿತ್ರ ಡ್ರೆಸ್ ಹಾಕಿಕೊಂಡು ಎಲ್ಲರ ಮುಂದೆ ಕಾಣಿಸಿಕೊಳ್ಳೋದೆ ಈಕೆಯ ಕಾಯಕ.. ಆದ್ರೀಗ ಉರ್ಫಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಉರ್ಫಿ ಸುದ್ದಿಯಲ್ಲಿರೋದು ಬೇರೆ ಕಾರಣಕ್ಕೆ. ಉರ್ಫಿ ಈಗ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಇದೀಗ ಹುಡುಗ ಯಾರು ಅನ್ನೋದನ್ನ ಕೂಡ ನಟಿ ರಿವೀಲ್ ಮಾಡಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್ನಲ್ಲಿ ಕೈ ಕೈ ಹಿಡಿದು ನಡೆದ ರಶ್ಮಿಕಾ, ವಿಜಯ್ ದೇವರಕೊಂಡ! – ಮದುವೆ ಆಗ್ತಾರಾ ಸ್ಟಾರ್ ಜೋಡಿ?
ಉರ್ಫಿ ಜಾವೇದ್ ವಿಚಿತ್ರ ಫ್ಯಾಷನ್ ಸೆನ್ಸ್ ನಿಂದಲೇ ಸಿಕ್ಕಾಪಟ್ಟೆ ಫೇಮಸ್.. ಯಾವಾಗ ಯಾವ ಡ್ರೆಸ್ನಲ್ಲಿ ಈಕೆ ಕಾಣಿಸಿಕೊಳ್ತಾರೆ ಅಂತಾ ಊಹೆ ಮಾಡೋದಿಕ್ಕೂ ಸಾಧ್ಯವಿಲ್ಲ.. ಅಷ್ಟರ ಮಟ್ಟಿಗೆ ಉರ್ಫಿ ಫ್ಯಾಷನ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ. ಇದೀಗ ಉರ್ಫಿ ತನ್ನ ಜೀವನದ ಹೊಸ ಇನ್ನಿಂಗ್ಸ್ ಶುರುಮಾಡೋದಿಕ್ಕೆ ಮುಂದಾಗಿದ್ದಾರೆ. ಇದೀಗ ನಾನು ಪ್ರೀತಿಯಲ್ಲಿ ಬಿದ್ದೀದ್ದೀನಿ ಅಂತಾ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಆಕೆ ಪ್ರೀತಿಸಿದ ಹುಡುಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಹೌದು.. ಬರೀ ವಿಚಿತ್ರ ಡ್ರೆಸ್ಗಳ ಮೂಲಕ ಕಾಣಿಸಿಕೊಳ್ಳೋ ಉರ್ಫಿ ತನ್ನ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದ್ರಲ್ಲಿ ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ.. ಆದ್ರೆ ಆತ ನನ್ನತರ ಅಲ್ಲ.. ತುಂಬಾ ಸಿಂಪಲ್ ಹಾಗೇ ಸೈಲೆಂಟ್ ಹುಡುಗ.. ನಾನು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ರೆ, ನನ್ ಹುಡುಗ ಅನ್ಲೈನ್ನಲ್ಲೇ ಇರಲ್ಲ.. ಇನ್ಸ್ಟಾಗ್ರಾಮ್ನಲ್ಲಿ ಒಂದೇ ಒಂದು ಪೋಸ್ಟ್ ಅನ್ನು ಹಾಕಲ್ಲ.. ಆತ ಡಿಜಿಟಲ್ ಜಗತ್ತಿನಲ್ಲಿ ಆಕ್ಟಿವ್ ಆಗಿಲ್ಲ ಅಂತಾ ಉರ್ಫಿ ಹೇಳಿದ್ದಾರೆ.
ಇನ್ನು ಹುಡುಗ ಯಾರು ಅಂತಾ ಉರ್ಫಿ ಬಳಿ ಕೇಳಿದಾಗ, ಆತ ದೆಹಲಿ ಮೂಲದವರು. ಹೈಟ್ 6. 4.. ಆತ ತುಂಬಾ ಖಾಸಗಿಯಾಗಿರುವುದರಿಂದ, ಉರ್ಫಿ ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ಅವರನ್ನ ಮೀಟ್ ಮಾಡಲು ದೆಹಲಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.. ಆದ್ರೆ ಮನಸ್ಸು ಕದ್ದ ಹುಡುಗ ಯಾರು ಅಂತಾ ಉರ್ಫಿ ರಿವೀಲ್ ಮಾಡಿಲ್ಲ..
ಇನ್ನು ಉರ್ಫಿ ಆ ಹುಡುಗನನ್ನ ಮೀಟ್ ಆಗಿದ್ದು ಎಲ್ಲಿ ಅನ್ನೋದನ್ನ ಕೂಡ ಹೇಳಿದ್ದಾರೆ. ಇವರಿಬ್ಬರು ಭೇಟಿ ಆಗಿದ್ದು ಮೂವಿ ಸ್ಟೋರಿ ಹಾಗೇ ಇದ್ಯಂತೆ. ಇವರಿಬ್ರು ಫಸ್ಟ್ ಟೈಮ್ ಮೀಟ್ ಆಗಿದ್ದು ಒಂದು ಕಾರ್ಯಕ್ರಮದಲ್ಲಿ.. ಆ ಕಾರ್ಯಕ್ರಮದಲ್ಲಿ ಆಕಸ್ಮಿಕವಾಗಿ ಪರಸ್ಪರ ಡಿಕ್ಕಿ ಹೊಡೆದಿದ್ದಾರೆ. ಆಗ ಪರಿಚಯ ಆಗಿದ್ದು ಅಂತಾ ಹೇಳಿದ್ದಾರೆ. ಆದ್ರೆ ಆ ಫಂಕ್ಷನ್ನಲ್ಲಿ ಆ ಹುಡುಗ ಬೇರೆ ಹುಡುಗಿಗೆ ಪ್ರಪೋಸ್ ಮಾಡಲು ಅಲ್ಲಿಗೆ ಬಂದಿದ್ದ.. ಆದ್ರೆ ನಮ್ಮಿಬ್ರ ಮಧ್ಯೆ ಪ್ರೀತಿ ಚಿಗುರಿತು. ಆದ್ರೆ ಈ ಇನ್ನು ಈ ಸಂಬಂಧ ಮದುವೆ ಹಂತಕ್ಕೆ ಹೋಗಿಲ್ಲ.. ಅಂತಾ ಉರ್ಫಿ ಸಂದರ್ಶನವೊಂದ್ರಲ್ಲಿ ಹೇಳಿದ್ದಾರೆ.
ಅಂದ್ಹಾಗೆ ಉರ್ಫಿ ಪ್ರೀತಿಯಲ್ಲಿ ಬಿಳೋದು ಇದೇ ಮೊದಲಲ್ಲ.. ಇದಕ್ಕೂ ಮುನ್ನ ಉರ್ಫಿ ಟಿವಿ ನಟ ಪರಾಸ್ ಕಲ್ನಾವತ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ರು. ಐದು ತಿಂಗಳ ಕಾಲ ಒಟ್ಟಿಗೆ ಇದ್ದ ಇವರು ಆಮೇಲೆ ಬ್ರೇಕ್ಅಪ್ ಮಾಡಿಕೊಂಡ್ರು.. ಪರಾಸ್ ತನ್ನ ಹೆಸರನ್ನು ಹಚ್ಚೆ ಹಾಕಿಸಿಕೊಂಡರೂ, ಉರ್ಫಿ ಹಿಂದೆ ಸರಿಯಲಿಲ್ಲ. ‘ಅವನು ನನ್ನ ಹೆಸರನ್ನು ತನ್ನ ದೇಹದಾದ್ಯಂತ ಹಚ್ಚೆ ಹಾಕಿಸಿಕೊಂಡರೂ, ನಾನು ಹಿಂತಿರುಗುವುದಿಲ್ಲ ಎಂದು ಹೇಳಿದ್ರು. ಇದೀಗ ಉರ್ಫಿ ಮತ್ತೊಮ್ಮೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಆ ಹುಡುಗ ಯಾರು ಆನ್ನೋದನ್ನ ರಿವೀಲ್ ಮಾಡ್ತಾರಾ ಅಂತಾ ಕಾದು ನೋಡ್ಬೇಕು.

ನೋಡಿರಿ

