ಆಸ್ಪತ್ರೆಗೆ ದಾಖಲಾದ್ರಾ ಉರ್ಫಿ ಜಾವೇದ್‌! – ಫೋಟೋ ಹಿಂದಿನ ಅಸಲಿಯತ್ತೇನು?

ಆಸ್ಪತ್ರೆಗೆ ದಾಖಲಾದ್ರಾ ಉರ್ಫಿ ಜಾವೇದ್‌! – ಫೋಟೋ ಹಿಂದಿನ ಅಸಲಿಯತ್ತೇನು?

ನಟಿ, ಮಾಡೆಲ್ ಉರ್ಫಿ ಜಾವೇದ್‌ ಯಾರಿಗೆ ಗೊತ್ತಿಲ್ಲಾ? ಚಿತ್ರ, ವಿಚಿತ್ರ ಡ್ರೆಸ್‌ಗಳನ್ನು ಧರಿಸಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಗೈ ಅಗಲದ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸುತ್ತಾರೆ. ಇದೀಗ ಉರ್ಫಿ ಆಸ್ಪತ್ರೆಗೆ ದಾಖಲಾಗಿದ್ದಾರಾ ಅನ್ನೋ ಪ್ರಶ್ನೆಯೊಂದು ಎದ್ದಿದೆ. ಇದಕ್ಕೆ ಕಾರಣ ಆಕೆ  ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಹೌದು. ಉರ್ಫಿ  ಸೋಶಿಯಲ್‌ ಮೀಡಿಯಾದಲ್ಲಿ ಸಕ್ಕತ್‌ ಆಕ್ಟಿವ್‌ ಆಗಿದ್ದಾರೆ. ಕೂತ್ರೂ.. ನಿಂತ್ರೂ.. ಆಕೆ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಇದೀಗ ಉರ್ಫಿ ಜಾವೇದ್ ಆಸ್ಪತ್ರೆಗೆ ದಾಖಲಾದ್ದಾರಾ ಅನ್ನೋ ಪ್ರಶ್ನೆ ಮೂಡಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ ಎನ್ನುವಂತೆ ಅವರ ಬಾಯಿಗೆ ಮಾಸ್ಕ್ ಕೂಡ ಹಾಕಲಾಗಿದೆ. ಬೆಡ್ ಮೇಲೆ ಮಲಗಿರುವ ಸ್ಥಿತಿಯಲ್ಲೇ ಎರಡು ಕೈಗಳನ್ನು ಮೇಲಕ್ಕೆತ್ತಿ ಗೆಲ್ಲುವ ಸಿಂಬಲ್ ತೋರಿಸಿರುವ ಫೋಟೋವೊಂದನ್ನು ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಪುತ್ರಿ ಮದುವೆ – ಚಡ್ಡಿ, ಬನಿಯನ್ ಧರಿಸಿ ಮದುವೆಗೆ ಬಂದ ಇರಾ ಗಂಡ ನೂಪುರ್

ಅಷ್ಟಕ್ಕೂ ಉರ್ಫಿಗೆ ಏನಾಯಿತು? ಗೊತ್ತಿಲ್ಲ. ಆದರೆ, ಆಸ್ಪತ್ರೆಯಲ್ಲಿ ಮಲಗಿರುವ ಫೋಟೋವನ್ನು ಅವರು ಇನ್ಸ್‌ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋ ಕಂಡು ಅನೇಕರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ. ಮತ್ತೆ ಬದುಕಿ ಬರಬೇಕು ಎನ್ನುವ ಅರ್ಥದಲ್ಲೂ ಕಾಮೆಂಟ್ ಮಾಡಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಉರ್ಫಿ ಆ ಫೋಟೋವನ್ನು ಇನ್ಸ್ಟಾ ಖಾತೆಯನ್ನು ಡಿಲಿಟ್ ಮಾಡಿದ್ದಾರೆ. ಹಾಗಾಗಿ ಉರ್ಫಿ ಅಭಿಮಾನಿಗಳನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಬೇರೆ ಬೇರೆ ಕಾರಣಕ್ಕಾಗಿ ಈ ರೀತಿ ಅವರು ಮಾಡಿದ್ದಾರೆ. ಪೊಲೀಸರು ಅರೆಸ್ಟ್ ಮಾಡಿಕೊಂಡು ಹೋದರು ಎನ್ನುವಂತೆ ಈ ಹಿಂದೆ ಸೀನ್ ಕ್ರಿಯೇಟ್ ಮಾಡಿದ್ದರು. ಅದಕ್ಕಾಗಿ ಅವರ ಮೇಲೆ ದೂರು ಕೂಡ ದಾಖಲಾಗಿತ್ತು.

ಈಗ ಆಸ್ಪತ್ರೆಯಲ್ಲಿರುವ ಫೋಟೋ ಅದೇ ರೀತಿಯಲ್ಲಿ ಡ್ರಾಮಾ ಮಾಡಿರಬಹುದಾ? ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೇ ಪ್ರಚಾರಕ್ಕಾಗಿ ಉರ್ಫಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು ಎನ್ನುವುದನ್ನು ಈಗಾಗಲೇ ತೋರಿಸಿದ್ದಾರೆ. ಹಾಗಾಗಿ ಆ ಫೋಟೋ ಬಗ್ಗೆ ಅನೇಕರು ತಲೆಕೆಡಿಸಿಕೊಂಡಿಲ್ಲ.

Shwetha M