ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೈಮುಚ್ಚಿಕೊಂಡ ಉರ್ಫಿ! – ಪಡ್ಡೆಹುಡುಗರ ನಿದ್ದೆಗೆಡೆಸಿದ ಬಿಚ್ಚಮ್ಮಳ ಅವತಾರ!

ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೈಮುಚ್ಚಿಕೊಂಡ ಉರ್ಫಿ! – ಪಡ್ಡೆಹುಡುಗರ ನಿದ್ದೆಗೆಡೆಸಿದ ಬಿಚ್ಚಮ್ಮಳ ಅವತಾರ!

ನಟಿ, ಮಾಡೆಲ್ ಉರ್ಫಿ ಜಾವೇದ್‌ ಯಾರಿಗೆ ಗೊತ್ತಿಲ್ಲಾ? ಚಿತ್ರ, ವಿಚಿತ್ರ ಡ್ರೆಸ್‌ಗಳನ್ನು ಧರಿಸಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಗೈ ಅಗಲದ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸುತ್ತಾರೆ. ಇದೀಗ ಬಿಚ್ಚಮ್ಮ ಮತ್ತೊಂದು ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಬಿಚ್ಚಮ್ಮ ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೈ ಮುಚ್ಚಿಕೊಂಡಿದ್ದಾರೆ.

ಬಾಲಿವುಡ್ ಬ್ಯೂಟಿ ಉರ್ಫಿ ಭಿನ್ನ ಭಿನ್ನ ಕಾಸ್ಟ್ಯೂಮ್ ನೊಂದಿಗೆ ಕಾಣಿಸಿಕೊಳ್ಳುತ್ತಾರೆ. ಅವರ ವಿಚಿತ್ರ ಉಡುಗೆಯೇ ಅನೇಕ ಬಾರಿ ಟ್ರೋಲ್‌ಗರ ಬಾಯಿಗೆ ಆಹಾರವಾಗಿದ್ದು ಇದೆ. ಈಗ ಬಾಳೆಹಣ್ಣಿನ ಸಿಪ್ಪೆಯಲ್ಲಿ ಉರ್ಫಿ ಮೈ ಮುಚ್ಚಿಕೊಂಡಿದ್ದಾರೆ. ಇದೇ ಅವತಾರದಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಬಾಳೆಹಣ್ಣು ತಿನ್ನುತ್ತ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗುತ್ತಿದೆ. ಉರ್ಫಿ ಅವತಾರ ನೋಡಿ ಧರಿಸೋಕೆ ಬೇರೆ ಏನು ಸಿಗಲಿಲ್ವಾ ಎಂದು ಸೋಶಿಯಲ್‌ ಮೀಡಿಯಾ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಡೈವೋರ್ಸ್? -‘ನಾವು ಬೇರೆ ಆಗಿದ್ದೇವೆ’ ಎಂದು ರಾಜ್‌ಕುಂದ್ರಾ ಪೋಸ್ಟ್

ಬಿಗ್ ಬಾಸ್ ಒಟಿಟಿಯಿಂದ ಉರ್ಫಿ ಜಾವೇದ್ ಜನಪ್ರಿಯತೆ ಗಳಿಸಿದರು. ಹೌಸ್ ಅರೆಸ್ಟ್ ಗೇಮ್ ರಿಯಾಲಿಟಿ ಶೋನ ಮೊದಲ ಸೀಸನ್‌ನಲ್ಲಿಯೂ ಅವರು ಭಾಗವಹಿಸಿದ್ದರು.  ಈ ಹಿಂದೆ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ಉರ್ಫಿ, ಬಿಗ್ ಬಾಸ್ ಒಟಿಟಿ ಸೀಸನ್ 1ರಲ್ಲಿ ಟಾಸ್ಕ್ ಗೆಲ್ಲಲು ಕಸದ ಚೀಲಗಳಿಂದ ಮಾಡಿದ ಉಡುಪನ್ನು ಧರಿಸಿ ಖ್ಯಾತಿ ಗಳಿಸಿದರು. ತಮ್ಮ ಸೃಜನಶೀಲತೆಗೆ ಮೆಚ್ಚುಗೆ ಪಡೆದರು. ಅಂದಿನಿಂದ ಉರ್ಫಿ ಸಾಮಾನ್ಯ ಉಡುಗೆಯನ್ನು ಧರಿಸಲೇ ಇಲ್ಲ. ಹಾಗಾಗಿ ನಟಿ ನಿರಂತರವಾಗಿ ಟ್ರೋಲ್ ಆಗಿದ್ದರು.

ಕೆಲವು ಜನರು ನನ್ನನ್ನು ಗೌರವಿಸುವುದಿಲ್ಲ. ನನ್ನೊಂದಿಗೆ ಕೆಲಸ ಮಾಡಲು ಯಾರೂ ಬಯಸುವುದಿಲ್ಲ. ನಾನು ಎಲ್ಲರ ಗಮನ ಸೆಳೆಯುವ ಸಲುವಾಗಿಯೇ ಈ ರೀತಿಯ ಬಟ್ಟೆಗಳನ್ನು ಧರಿಸುವುದು ಎಂದು ಉರ್ಫಿ ಒಪ್ಪಿಕೊಂಡಿದ್ದರು. ಆದರೆ ಈ ಕುರಿತು ಕಾಮೆಂಟ್ ಮಾಡಿದರೆ ನನಗೆ ಇಷ್ಟ ಆಗುವುದಿಲ್ಲ ಎಂದು ನಟಿ ಹೇಳಿದ್ದರು.

Shwetha M