ಯುಪಿಎಸ್ ಸಿ ಪರೀಕ್ಷೆಯಲ್ಲಿ ಹೆಣ್ಮಕ್ಕಳೇ ಟಾಪ್ 4 – ಕರ್ನಾಟಕದಿಂದ ಆಯ್ಕೆಯಾದವರೆಷ್ಟು?

ಯುಪಿಎಸ್ ಸಿ ಪರೀಕ್ಷೆಯಲ್ಲಿ ಹೆಣ್ಮಕ್ಕಳೇ ಟಾಪ್ 4 – ಕರ್ನಾಟಕದಿಂದ ಆಯ್ಕೆಯಾದವರೆಷ್ಟು?

ಯುಪಿಎಸ್ ಸಿ ರಿಸಲ್ಟ್ ಹೊರಬಿದ್ದಿದ್ದು, ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(UPSC) 2022ನೇ ಸಾಲಿನ ಸಿವಿಲ್ ಸರ್ವೀಸಸ್ ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡಿದೆ. ಇಶಿತಾ ಕಿಶೋರ್ ಮೊದಲ ಸ್ಥಾನವನ್ನು ಪಡೆದಿದ್ದು, ಗರಿಮಾ ಲೋಹಿಯಾ 2ನೇ ಸ್ಥಾನವನ್ನು ಹಾಗೂ ಉಮಾ ಹರತಿ 3ನೇ ಸ್ಥಾನವನ್ನು ಗಳಿಸಿದ್ದಾರೆ.

ಕೇಂದ್ರ ಲೋಕ ಸೇವಾ ಆಯೋಗವು(ಯುಪಿಎಸ್‌ಸಿ) 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು ದಾವಣಗೆರೆಯ ಅವಿನಾಶ್ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಬಂದಿದ್ದಾರೆ. ಆಯ್ಕೆಯಾಗಿರುವ ಒಟ್ಟು 933 ಅಭ್ಯರ್ಥಿಗಳ ಪೈಕಿ ಕರ್ನಾಟಕದ 26 ಅಭ್ಯರ್ಥಿಗಳಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ದಾವಣಗೆರೆ ಮೂಲದ ಅವಿನಾಶ್‌ ವಿ. 31ನೇ ರ‍್ಯಾಂಕ್‌ ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ. ಅವಿನಾಶ್ ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ.

ಇದನ್ನೂ ಓದಿ : ಚಾಲಕರ ಸಮಸ್ಯೆ ಆಲಿಸಲು ಟ್ರಕ್‌ನಲ್ಲಿ ಪ್ರಯಾಣಿಸಿದ ರಾಹುಲ್‌ ಗಾಂಧಿ  

ಇನ್ನುಳಿದಂತೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದವರಾದ ಶೃತಿ ಯರಗಟ್ಟಿ 362ನೇ ರ್ಯಾಂಕ್, ಬಿವಿ ಶ್ರೀದೇವಿಗೆ 525ನೇ ರ್ಯಾಂಕ್, ಆದಿನಾಥ್ ಪದ್ಮಣ್ಣಗೆ 566ನೇ ರ್ಯಾಂಕ್, ಐಎನ್ ಮೇಘನಾ 617ನೇ ರ್ಯಾಂಕ್ ಪಡೆದಿದ್ದಾರೆ. ಮೊದಲ 4 ರ್ಯಾಂಕ್ ಗಳನ್ನು ಮಹಿಳಾ ಅಭ್ಯರ್ಥಿಗಳೆ ಪಡೆದುಕೊಂಡಿದ್ದಾರೆ. ಇಶಿತಾ ಕಿಶೋರ್ ಯುಪಿಎಸ್ ಸಿ ಟಾಪರ್ ಆಗಿದ್ದಾರೆ.

ಯುಪಿಎಸ್ ಸಿ 10 ಟಾಪರ್ ಗಳು

ಇಶಿತಾ ಕಿಶೋರ್ – ಮೊದಲ ರ್ಯಾಂಕ್

ಗರಿಮಾ ಲೋಹಿಯಾ – ದ್ವಿತೀಯ ರ್ಯಾಂಕ್

ಉಮಾ ಆರತಿ – 3ನೇ ಸ್ಥಾನ

ಸ್ಮೃತಿ ಮಿಶ್ರಾ – 4 ನೇ ಸ್ಥಾನ

ಮಯೂರ್ ಹಜಾರಿಯಾ – 5ನೇ ಸ್ಥಾನ

ಗಹನ್ ನವ್ಯಾ ಜೇಮ್ಸ್ -6ನೇ ಸ್ಥಾನ

ವಾಸಿಂ ಅಹ್ಮದ್ ಭಟ್ – 7ನೇ ಸ್ಥಾನ

ಅನಿರುದ್ಧ ಯಾದವ್ – 8ನೇ ಸ್ಥಾನ

ಕನಿಕಾ ಗೋಯಲ್ -9ನೇ ಸ್ಥಾನ

ರಾಹುಲ್ ಶ್ರೀವಾಸ್ತವ್ -10ನೇ ರ್ಯಾಂಕ್

ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ https://upsc.gov.in/ ನಲ್ಲಿ ಪ್ರಕಟಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಪರೀಕ್ಷಿಸಬಹುದಾಗಿದೆ. ಇದರ ಜತೆಗೆ ಅಭ್ಯರ್ಥಿಗಳ ಮೀಸಲು ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ. 2022ರ ಯುಪಿಎಸ್​ಸಿಯ ಪೂರ್ವಭಾವಿ ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 22ರಂದು ಹಾಗೂ ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನು ಡಿಸೆಂಬರ್ 6ರಂದು ಘೋಷಣೆ ಮಾಡಿ ಅಂತಿಮ ಹಂತದ ಸಂದರ್ಶನಗಳನ್ನು ಮೇ 18ರವರೆಗೆ ನಡೆಸಲಾಗಿತ್ತು.

suddiyaana