ಸಿನಿಮಾ ಸ್ಟಾರ್ಸ್, ಕ್ರಿಕೆಟರ್ಸ್, ಪೊಲಿಟೀಶಿಯನ್ಸ್ –ರೀಲ್ಸ್ ನೋಡಿದರೆ ಬರೀ ಕರಿಮಣಿ ಮಾಲೀಕನದ್ದೇ ಹವಾ..

ಸಿನಿಮಾ ಸ್ಟಾರ್ಸ್, ಕ್ರಿಕೆಟರ್ಸ್, ಪೊಲಿಟೀಶಿಯನ್ಸ್ –ರೀಲ್ಸ್ ನೋಡಿದರೆ ಬರೀ ಕರಿಮಣಿ ಮಾಲೀಕನದ್ದೇ ಹವಾ..

ಫೋನ್ ಆನ್ ಮಾಡಿದ್ರೆ ಸಾಕು.. ಮಲ್ಲಿಗೆ ಸಂಪಿಗೆ ರಾಗ.. ಓ ನಲ್ಲ.. ನೀನಲ್ಲ ಅನ್ನೋ ವೈಯ್ಯಾರ.. ಕರಿಮಣಿ ಮಾಲೀಕನ ಜೊತೆ ರಾಹುಲ್ಲನ ಅಬ್ಬರ.. ಬಹುಶಃ ಕೆಲವ್ರಿಗೆ ಕನಸು ಮನಸಲ್ಲೆಲ್ಲಾ ಈ ಹಾಡೇ ಬರ್ತಿದೆ ಅನ್ಸುತ್ತೆ. ರೀಲ್ಸ್‌ ಮಾಡೋರು, ಮಾಡದೇ ಇರೋರು ಎಲ್ರೂ ಈ ಹಾಡಿಗೆ ಲಿಪ್ ಸಿಂಕ್ ಮಾಡ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಉಪೇಂದ್ರ ಸಿನಿಮಾದ ಕರಿಮಣಿ ಮಾಲೀಕ ನೀನಲ್ಲ ಕ್ರೇಜ್‌ ಇನ್ನೂ ಕಡಿಮೆ ಆಗಿಲ್ಲ.

ಇದನ್ನೂ ಓದಿ:ಮೊಬೈಲ್ ತೆಗೆದ್ರೆ ಓ ನಲ್ಲ.. ನೀ ನಲ್ಲ.. – ಸ್ಟಾರ್ಸ್ ಬಾಯಲ್ಲೂ ಕರಿಮಣಿ ಮಾಲೀಕ, ಎಲ್ಲೆಲ್ಲೂ ಉಪ್ಪಿ ಹಾಡಿನ ಟ್ರೆಂಡ್

ಸಿನಿಮಾ ಸ್ಟಾರ್ಸ್, ಕ್ರಿಕೆಟರ್ಸ್, ಪೊಲಿಟೀಶಿಯನ್ಸ್, ಸ್ಟೂಡೆಂಟ್ಸ್, ಕಪಲ್ಸ್ ಹೀಗೆ ಎಲ್ಲರ ಬಾಯಲ್ಲೂ ಕರಿಮಣಿ ಮಾಲೀಕ ನಲಿದಾಡ್ತಿದ್ದಾನೆ. ಟ್ರೋಲರ್ಸ್ ಅಂತೂ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕ್ರಿಕೆಟರ್ ಗಳಾದ ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ರನ್ನೂ ಕರೆತಂದಿದ್ದಾರೆ. ನಮ್ಮ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಕೂಡ ಕರಿಮಣಿ ಮಾಲೀಕನ ಬಗ್ಗೆ ಮಾತನಾಡಿಕೊಂಡಿದ್ದಾರೆ. ಮಿಡ್ಲಲ್ಲಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಬಂದು ಟ್ವಿಸ್ಟ್ ಕೊಟ್ಟಿದ್ದಾರೆ.

ಅಷ್ಟೇ ಅಲ್ಲ ಮೋದಿ ಕರಿಮಣಿ ಮಾಲೀಕ ಯಾರು ಅಂತಾ ಪ್ರಶ್ನಿಸಿದ್ರೆ ಅತ್ತ ರಾಹುಲ್ ಗಾಂಧಿ ಎಂಟ್ರಿ ಕೊಡ್ತಾರೆ. ಹೆಣ್ಮಕ್ಕಳ ಜೊತೆ ಭರ್ಜರಿ ಸ್ಪೆಪ್ಟ್ ಹಾಕಿದ್ದಾರೆ.

ಈ ಟ್ರೆಂಡಿಂಗ್ ಸಾಂಗ್ ನಲ್ಲಿ ನಮ್ಮ ಸಿಎಂ ಸಿದ್ದರಾಮಯ್ಯನವ್ರು ಏನ್ ಹಿಂದೆ ಬಿದ್ದಿಲ್ಲ. ಕರಿಮಣಿ ಮಾಲೀಕ ನೀನಲ್ಲ ಅಂತಾ ಮಹಿಳೆಯೊಬ್ಬರು ಸಿದ್ದಣ್ಣನ ಕೆನ್ನೆಗೆ ಮುತ್ತೇ ಕೊಟ್ಟಿದ್ದಾರೆ. ಆಮೇಲೆ ಖುಷಿಯಲ್ಲಿ ಸಿದ್ದರಾಮಯ್ಯನವ್ರು ಕುಣಿದು ಕುಪ್ಪಳಿಸಿದ್ದಾರೆ.

ನಮ್ಮ ಟೀಂ ಇಂಡಿಯಾ ಪ್ಲೇಯರ್ಸ್ ಕೂಡ ರಾಹುಲ್ಲ ರಾಹುಲ್ಲಾ ಅಂತಾ ಕುಣಿದು ಕುಪ್ಪಳಿಸಿದ್ದಾರೆ. ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಡ್ಯಾನ್ಸ್ ಮಾಡಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಮದುವೆ ವಿಡಿಯೋ ಕೂಡ ವೈರಲ್ ಆಗಿದೆ.

ತಾಂಜೇನಿಯ ಯೂಟ್ಯೂಬರ್, ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಕೂಡ ಕರಿಮಣಿ ಮಾಲೀಕನನ್ನ ಮೆಚ್ಚಿಕೊಂಡಿದ್ದಾರೆ. ಓ ನಲ್ಲ ನೀ ನಲ್ಲ ಅಂತಾ ಲಿಪ್ ಸಿಂಕ್ ಮಾಡಿ ರೀಲ್ಸ್ ಮಾಡಿದ್ದಾರೆ.

ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ ಹಾಗೂ ಌಂಕರ್ ಅನುಶ್ರೀ ಕೂಡ ಇದೇ ಸಾಂಗ್ ಗೆ ಸ್ಟೆಪ್ಸ್ ಹಾಕಿದ್ದಾರೆ. ಪಾರು ಸೀರಿಯಲ್ ಖ್ಯಾತಿಯ ಮೋಕ್ಷಿತಾ ಕೂಡ ಕರಿಮಣಿ ಮಾಲೀಕ ನೀನಲ್ಲ ಎಂದು ಸ್ಟೈಲಾಗಿ ವಾಕ್ ಮಾಡಿದ್ದಾರೆ. ಇನ್ನು ದೊಡ್ಮನೆಯ ಕುಡಿ ವಿನಯ್‌ ರಾಜ್‌ಕುಮಾರ್‌ ಕೂಡ ರೀಲ್ಸ್‌ಗೆ ಲಿಪ್‌ ಸಿಂಕ್‌ ಮಾಡಿದ್ದಾರೆ. ಇದು ವಿನಯ್‌ ಅವರ ಮೊದಲ ರೀಲ್ಸ್‌ ಎಂದು ಸಿಂಪಲ್‌ ಸುನಿ ಪೋಸ್ಟ್‌ ಹಾಕಿಕೊಂಡಿದ್ದಾರೆ.

ಮದುವೆ ಮನೆಯಲ್ಲೂ ಕೂಡ ಇದೇ ಹಾಡು ಹಾಕಿ ಮದುಮಗನಿಗೆ ಆತನ ಗೆಳೆಯರು ಹಾವಳಿ ಇಟ್ಟಿದ್ದಾರೆ. ಕರಿಮಣಿ ಮಾಲೀಕ ನೀನಲ್ಲ ಅಂತಾ ಗೋಳಾಡ್ಸಿದ್ದಾರೆ. ಮತ್ತೊಂದು ಮದ್ವೆಯಲ್ಲಿ ಕರಿಮಣಿ ಮಾಲೀಕ ನಾನೇ ನಾನೇ ಅಂತಾ ವರಮಹಾಶಯ ಕೂಗಿಕೊಂಡಿದ್ದಾನೆ.

ಜನ್ರ ಹಾವಳಿನೇ ತಡೆಯೋಕೆ ಆಗ್ತಿಲ್ಲ ಅಂತಿದ್ರೆ ಅತ್ತ ಬೆಕ್ಕೊಂದು ನಾನೇನ್ ಕಮ್ಮಿ ಅಂತಾ ಮಲ್ಲಿಗೆ ಸಂಪಿಗೆ ಅಂತಾ ಮೈ ಬಳುಕಿಸಿದೆ.

1999ರ ಹಾಡು ಈಗ ಟ್ರೆಂಡಿಂಗ್​ಗೆ ಬರೋಕೆ ಕಾರಣ ಕಾರಣ ಆಗಿರೋ ಈ ಕನಕನ ಬಗ್ಗೆ ಹೇಳಲೇಬೇಕು.. ವಿಜಯನಗರ ಜಿಲ್ಲೆ ಹೊಸಪೇಟೆ ಮೂಲದ ಕನಕ ಹುಡುಗಿ ಕೈಕೊಟ್ಟ ಬಗ್ಗೆ ರೀಲ್ಸ್ ಮಾಡಿದ್ರು. ಹೋಗೋವಾಗ ಒಂದೇ ಒಂದು ಮಾತು ಹೇಳಿದ್ಲು ಮಗಾ. ಓ ನಲ್ಲ ನೀನಲ್ಲ ಎನ್ನುತ್ತಾ ಕರಿಮಣಿ ಮಾಲೀಕ ಸಾಂಗ್ ಫ್ಲೋ ಬಿಟ್ಟಿದ್ರು.

ಇಲ್ಲಿಂದ ಶುರುವಾದ ಕರಿಮಣಿ ಮಾಲೀಕ ಸಾಂಗ್ ಟ್ರೆಂಡ್ ಈಗ ನರೇಂದ್ರ ಮೋದಿ, ರಾಹುಲ್ ಗಾಂಧಿ, ಕ್ರಿಕೆಟಿಗ ಕೆ.ಎಲ್ ರಾಹುಲ್, ಬೆಳ್ಳುಳ್ಳಿ ಕಬಾಬ್ ರಾಹುಲ್ಲಾವರೆಗೂ ಬಂದಿದೆ. ನಾಯಿ, ಬೆಕ್ಕು, ಕೋಳಿಗಳಿಗೂ ಇದೇ ಸಾಂಗ್ ಹಾಕಿ ವೈರಲ್ ಮಾಡ್ತಿದ್ದಾರೆ. ಹಿಂದೆಲ್ಲಾ ಯಾವ್ದೇ ಸಾಂಗ್, ಡೈಲಾಗ್, ಮ್ಯೂಸಿಕ್ ಟ್ರೆಂಡ್​ಗೆ ಬಂದ್ರೂ ಒಂದೇ ವಾರದಲ್ಲಿ ಅದ್ರ ಕ್ರೇಜ್ ಕಡಿಮೆ ಆಗಿಬಿಡ್ತಿತ್ತು. ಆದ್ರೆ ಈ ಸಲ ಮಾತ್ರ ಕರಿಮಣಿ ಮಾಲೀಕನ ಕಮಾಲ್ ಕಡಿಮೆ ಆಗೋ ಲಕ್ಷಣಗಳೇ ಕಾಣ್ತಿಲ್ಲ. ಗಲ್ಲಿ ಹುಡುಗ್ರಿಂದ ಹಿಡಿದು ದಿಲ್ಲಿ ಪ್ರಧಾನಿವರೆಗೂ ಮೋಡಿ ಮಾಡ್ತಿದೆ.

Sulekha