ಸ್ಯಾಂಡಲ್‌ವುಡ್‌ಗೆ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯಾ ಎಂಟ್ರಿ ?

ಸ್ಯಾಂಡಲ್‌ವುಡ್‌ಗೆ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯಾ ಎಂಟ್ರಿ ?

ಗಾಂಧಿನಗರದಲ್ಲಿ ಈಗ ಸ್ಟಾರ್ ಮಕ್ಕಳ ಹವಾ ಜೋರಾಗಿದೆ. ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ, ಟಗರು ಪಲ್ಯ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಗೆ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮೊದಲು ಗುರು ಶಿಷ್ಯರು ಸಿನಿಮಾ ಮೂಲಕ ನಟರ ಪುತ್ರರು ಭರ್ಜರಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಮಗಳು ಐಶ್ವರ್ಯಾ ಸ್ಯಾಂಡಲ್‌ವುಡ್ ಗೆ ಎಂಟ್ರಿಯಾಗ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ :  ಡಿಸೆಂಬರ್ 11ರಂದು ನೆರವೇರಲಿದೆ ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥ ?

ಪ್ರತಿಷ್ಠಿತ ಸಂಸ್ಥೆ ಹೊಂಬಾಳೆ ಬ್ಯಾನರ್ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವರಾಜ್‌ಕುಮಾರ್ ಅವರನ್ನ ಲಾಂಚ್ ಮಾಡ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನದ ಹೊಸ ಚಿತ್ರದಲ್ಲಿ ಯುವಗೆ ನಾಯಕಿಯಾಗಿ ಐಶ್ವರ್ಯ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಹೊಂಬಾಳೆ ಸಂಸ್ಥೆಯಡಿ ನಾಯಕಿಯಾಗಿ ನಟಿಸುವಂತೆ ಉಪ್ಪಿ ಪುತ್ರಿಗೆ ಆಫರ್ ನೀಡಲಾಗಿದೆಯಂತೆ. ಮಗಳ ಸಿನಿ ಜರ್ನಿಗೆ ಉಪ್ಪಿ ಕುಟುಂಬ ಗ್ರೀನ್ ಸಿಗ್ನಲ್ ನೀಡುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

suddiyaana