ಕತ್ತಲೆಯ ಟೀಸರ್.. ಸಾಹಿತ್ಯ ಇಲ್ಲದ ಮ್ಯೂಸಿಕ್! – UI ಸಿನಿಮಾ ಕತೆ ಕೊನೆಗೂ ರಿವೀಲ್?
ಮತ್ತೆ ಫ್ಯಾನ್ಸ್ ತಲೆಗೆ ಹುಳಬಿಟ್ಟ ಉಪ್ಪಿ!!

ಉಪೇಂದ್ರ ಏನು ಮಾಡಿದ್ರು ಡಿಫ್ರೆಂಟ್ ಆಗೇ ಮಾಡ್ತಾರೆ.. ಅವ್ರು ನಿರ್ದೇಶನಕ್ಕೆ ಕೈ ಹಾಕಿದ್ರು ಅಂದ್ರೆ ಫ್ಯಾನ್ಸ್ ಫುಲ್ ಅಲರ್ಟ್ ಆಗ್ತಾರೆ. ಬುದ್ದಿವಂತನ ಸಿನಿಮಾದ ಬಗ್ಗೆ ತಿಳಿದುಕೊಳ್ಳಲು ಮೊದಲ ದಿನದಿಂದಲೇ ಕುತೂಹಲದಿಂದ ಕಾಯ್ತಾರೆ.. ಇದೀಗ ಉಪ್ಪಿದ್ದಾದ ಮತ್ತೆ ಯುಐ ಮೂಲಕ ಜನರಿಗೆ ಮನರಂಜನೆ ನೀಡಲು ಸಿದ್ಧರಾಗಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ತಮ್ಮ ಸಿನಿಮಾದ ತುಣುಕುಗಳನ್ನು ತೋರಿಸಿದಂತೆಯೂ ಇರಬೇಕು. ತೋರಿಸದಂತೆಯೂ ಇರಬೇಕು. ಸಿನಿಮಾದ ಸುಳಿವನ್ನ ಬಿಟ್ಟು ಕೊಡದೇ, ಸಿನಿಮಾ ಪ್ರಚಾರ ಕೂಡ ಮಾಡ್ಬೇಕು.. ಇದು ಉಪೇಂದ್ರ ಸ್ಪೆಷಾಲಿಟಿ.. UI ಸಿನಿಮಾ ವಿಚಾರದಲ್ಲಿ ಕೂಡ ಉಪ್ಪಿದ್ದಾದ ಬುದ್ದಿವಂತಿಕೆ ತೋರಿಸ್ತಿದ್ದಾರೆ. ಇದೀಗ UI ಸಿನಿಮಾದ ಮ್ಯೂಸಿಕ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.. ಈಗಲೂ ತಲೆಗೆ ಹುಳ ಬಿಡುವ ಕೆಲಸವನ್ನೇ ಮಾಡಿದ್ದಾರೆ. ಅಷ್ಟಕ್ಕೂ ಉಪ್ಪಿ ಮಾಡಿದ್ದಾರೂ ಏನು? ಫ್ಯಾನ್ಸ್ ತಲೆ ಕೆಡಿಸಿಕೊಂಡಿದ್ದೇಕೆ? ಯುಐ ಸಸ್ಪೆನ್ಸ್ ರಿವೀಲ್ ಆಯ್ತಾ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕ್ರಿಕೆಟ್ಗೆ ಗಬ್ಬರ್ ಸಿಂಗ್ ಗುಡ್ ಬೈ – ರೋಹಿತ್ರನ್ನೇ ಮೀರಿಸಿದ್ದೇಗೆ Mr. ICC?
ಉಪೇಂದ್ರ ತಲೆಗೆ ಹುಳ ಬಿಡೋದ್ರಲ್ಲಿ ಎಕ್ಸಪರ್ಟ್.. ಏನೇ ಮಾಡಿದ್ರು ಡಿಫ್ರೆಂಟ್ ಆಗೇ ಮಾಡ್ತಾರೆ.. ಉಪ್ಪಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ರೆ, ಸಿನಿಪ್ರಿಯರಿಗೆ ಏನೋ ಒಂಥರಾ ಸಂಕಟ. ಸಿನಿಮಾ ರಿಲೀಸ್ ಹತ್ತಿರ ಬಂದರೂ ಚಿಕ್ಕ ತುಣುಕುಗಳನ್ನು ಬಿಟ್ಟು ತಲೆಗೆ ಹುಳ ಬಿಡುತ್ತಾರೆ. ಟೀಸರ್, ಟ್ರೈಲರ್ ಅಂತ ಬಿಡುವುದು ತೀರಾ ಕಡಿಮೆ. ವಿಚಾರ ಹೇಳಿದಂತೆಯೂ ಇರ್ಬೇಕು.. ಹೇಳದಂತೆಯೂ ಇರ್ಬೇಕು.. ಆದರೆ, ಬಿಡೋ ಚೂರೇ ಚೂರು ಮ್ಯಾಟರ್ನಲ್ಲೂ ಕುತೂಹಲ ಕೆರಳಿಸುತ್ತಿದ್ದಾರೆ. ಇದು ಉಪ್ಪಿ ಸ್ಪೆಷಾಲಿಟಿ.. ಇದೀಗ ಉಪ್ಪಿ ಯುಐ ಸಿನಿಮಾದ ಬ್ಯಾಗ್ರೌಂಡ್ ಮ್ಯೂಸಿಕ್ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳಲ್ಲಿ ಹುಳ ಬಿಟ್ಟಿದ್ದಾರೆ.
ಹೌದು, ಉಪೇಂದ್ರ ಯುಐ ಸಿನಿಮಾದ ಗುಟ್ಟು ಬಿಟ್ಟುಕೊಡುತ್ತಿಲ್ಲ.. ಆವತ್ತು ಎಲ್ಲಾ ಚೀಪ್ ಚೀಪ್ ಅಂತಾ ಹೇಳಿದ್ರು.. ಅದಾದ್ಮೇಲೆ ಎಲ್ಲಾ ಟ್ರೋಲಾಗುತ್ತೆ ಅಂತಾ ಹಾಡಿನ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ರು.. ಮೊನ್ನೆ ಸಿನಿಮಾ ರಿಲೀಸ್ ಡೇಟ್ ಅನ್ನ ಆ್ಯಪಲ್ ಮೂಲಕವೇ ಹೇಳಿದ್ದರು. ಅದಾದ್ಮೇಲೆ ಮ್ಯೂಸಿಕ್ ಮಾಹಿತಿ ಕೊಡ್ತಿವಿ ಅಂತ ಹೇಳಿದ್ದರು. ಉಪ್ಪಿ ಮತ್ತೊಂದು ಸಾಂಗ್ ಅಥವಾ ಸಿನಿಮಾದ ಟ್ರೈಲರ್ ಬಿಡುತ್ತಾರೆ ಅಂತಾ ಫ್ಯಾನ್ಸ್ ಕಾಯ್ತಾ ಇದ್ರು.. ಮ್ಯೂಸಿಕ್ ಅಂದ್ರೆ ಹಾಡು ಬಿಡುತ್ತಾರೆ ಅಂದುಕೊಂಡಿದ್ರೆ ಇಲ್ಲಿ ಮ್ಯೂಸಿಕ್‌ಗೆ ಸಾಹಿತ್ಯ ನೇ ಇಲ್ಲ. ಬ್ಯಾಗ್ರೌಂಡ್ ಸ್ಕೋರ್ನ ಮೇಕಿಂಗ್ ವಿಡಿಯೋ ರಿವೀಲ್ ಮಾಡಿದ್ದಾರೆ ಉಪ್ಪಿ. ಮಧ್ಯೆ ಮಧ್ಯೆ ಒಂಚೂರು ಸಿನಿಮಾ ಕ್ಲಿಪ್ಸ್ ರಿವೀಲ್ ಮಾಡಿದ್ದಾರೆ. ಈ ಹಿಂದಿನ ಟೀಸರ್ನಲ್ಲಿ ಕೆಲವು ವಿಡಿಯೋ ಕ್ಲಿಪ್ ಇದ್ದವು. ಅದೇ ರೀತಿ ಮ್ಯೂಸಿಕಲ್ ಮೇಕಿಂಗ್ ವಿಡಿಯೋದಲ್ಲೂ ಚಿತ್ರದ ಕೆಲವು ಕ್ಲಿಪ್ ರಿವೀಲ್ ಮಾಡಲಾಗಿದೆ. ಇದನ್ನು ನೋಡಿದ ಫ್ಯಾನ್ಸ್ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದಾರೆ.. ಯಾಕಂದ್ರೆ ಇದ್ರಲ್ಲಿ ಸಿನಿಮಾ ಕ್ಲಿಪ್ಸ್ ಬಿಟ್ರೆ ಫಾರಿನರ್ಸೇ ತುಂಬ್ಕೊಂಡಿದ್ದಾರೆ..
ಅಂದ್ಹಾಗೆ UI ಸಿನಿಮಾದ ಸಂಗೀತ ಕೂಡ ಸ್ಪೆಷಲ್ ಆಗಿದೆ. ದೂರದ ಹಂಗೇರಿಯಾದಲ್ಲಿಯೇ ಚಿತ್ರಕ್ಕೆ ಸಂಗೀತ ಮಾಡಿಸಲಾಗಿದೆ. ಇಲ್ಲಿ ಸಿಗೋ ವಿಶೇಷ ಸಂಗೀತ ಸಾಧನಗಳನ್ನ ಇದಕ್ಕಾಗಿಯೇ ಬಳಸಲಾಗಿದೆ. ಭಾರತದಲ್ಲಿ ಎಲ್ಲೂ ಇವು ಸಿಗೋದೇ ಇಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿ ಬ್ಯಾಗ್ರೌಂಡ್ ಸ್ಕೋರ್ ಮಾಡಿಸಲಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ಇಂಟ್ರಡಕ್ಷನ್ಗೆ ಬಳಸಿರೋ ಸಂಗೀತ ಮತ್ತು ಸಾಧನಗಳ ಒಟ್ಟು ಮೇಕಿಂಗ್ ಇಲ್ಲಿ ರಿವೀಲ್ ಆಗಿದೆ. ಲೈವ್ ಸಂಗೀತವನ್ನೆ ಈ ಚಿತ್ರಕ್ಕೆ ಬಳಸಲಾಗಿದೆ. ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಮತ್ತು ಉಪೇಂದ್ರ ಒಟ್ಟಿಗೆ ಹಂಗೇರಿಯಾಗೆ ಹೋಗಿ ಚಿತ್ರಕ್ಕೆ ಸಂಗೀತ ಮಾಡಿಸಿದ್ದಾರೆ.
ಇದೀಗ UI ಸಿನಿಮಾದ ಕುರಿತು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಇದೆ. ಕಾರಣ ಇದು ಉಪೇಂದ್ರ ನಿರ್ದೇಶನದ ಸಿನಿಮಾ ಅನ್ನೋದೇ ಆಗಿದೆ. ಉಪೇಂದ್ರ ಡೈರೆಕ್ಷನ್ ಮಾಡಿರೋ ಸಿನಿಮಾ ಸೂಪರ್ ಹಿಟ್ ಗ್ಯಾರಂಟಿ ಅನ್ನುವ ನಂಬಿಕೆ ಇದೆ. ಯಾರೂ ನಿರೀಕ್ಷೆ ಮಾಡದೇ ಇರೋ ವಿಷಯವನ್ನೆ ಉಪೇಂದ್ರ ಸಿನಿಮಾದಲ್ಲಿ ಹೇಳ್ತಾರೆ. ಟೀಸರ್, ಮೇಕಿಂಗ್ ವಿಡಿಯೋ ನೋಡಿದಾದ UI ಚಿತ್ರದಲ್ಲಿ ಹೊಸ ಲೋಕವೇ ಇದೆ ಅನ್ನೋದು ಗೊತ್ತಾಗುತ್ತೆ.. ಕಲಿಯುಗದ ಕಥೆಯನ್ನ ಉಪ್ಪಿ ಇಲ್ಲಿ ಹೇಳ್ತಿದ್ದಾರೆ ಅನ್ನೋ ಗುಮಾನಿ ಕೂಡ ಇದೆ. ಆದರೆ, ಆ್ಯಪಲ್ ವಿಡಿಯೋ ನೋಡಿದಾಗ, ಜಗತ್ತಿನ ಸೃಷ್ಟಿಕರ್ತರಾದ ಆಡ್ಯಂ ಮತ್ತು ಈವ್ ಕಥೆಯನ್ನ ಉಪ್ಪಿ ಇಲ್ಲಿ ಹೇಳ್ತಿದ್ದಾರಾ ಅನ್ನೋ ಪ್ರಶ್ನೆ ಕೂಡ ಇದೆ. ಇದೀಗ ಅಭಿಮಾನಿಗಳಲ್ಲಿ ಉಪ್ಪಿ ಯಾವ ಕತೆ ಹೇಳ್ತಿದ್ದಾರೆ ಅನ್ನೋ ಸುಳಿವು ಇಲ್ಲಿವರೆಗೂ ಬಿಟ್ಟುಕೊಟ್ಟಿಲ್ಲ.. ಎಲ್ಲವನ್ನೂ ಥಿಯೇಟರ್‌ಗೆ ಬಂದೇ ಸಿನಿಮಾ ನೋಡಬೇಕು ಅನ್ನೋದು ಉಪ್ಪಿಯ ತಂತ್ರ. ಆದರೆ, ಅವರ ಫ್ಯಾನ್ಸ್ ಮಾತ್ರ ಈ ಮ್ಯೂಸಿಕಲ್ ಮೇಕಿಂಗ್ ನೋಡಿ ಡಿಸೈನ್ ಡಿಸೈನ್ ಆಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ನೆಟ್ಟಿಗರೊಬ್ಬರು ಸೌಂಡ್ ಆಫ್ ಯುಐ ನೋಡಿ “ಅಣ್ಣ ನಿನ್ ಇಷ್ಟೆಲ್ಲಾ ಸಸ್ಪೆನ್ಸ್ ಕೊಟ್ರೆ ಹೇಗೆ ಅಣ್ಣ.. ಏನ್ ಆದ್ರೂ ಸ್ಪಷ್ಟವಾಗಿ ಕೊಡು ಮಾರಾಯ.. ನಮ್ಮನ್ನ ಯಾಕ್ ಹಿಂಗ್ ಕಾಡ್ತಾ ಇದ್ದೀಯ” ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ಮತ್ತೊಬ್ಬರು “ಪ್ರಪಂಚಕ್ಕೆ 17ನೇ ನಿರ್ದೇಶಕ ಮಾಡುವ ಸಿನಿಮಾ ಎಂಥಾದ್ದು ಅನ್ನೋದು ಗೊತ್ತಾಗುತ್ತದೆ” ಎಂದಿದ್ದಾರೆ. ಇನ್ನೊಬ್ಬರು “ಬಾಸ್ ಬೇಗ.. ಕಾಯೋಕೆ ಆಗ್ತಿಲ್ಲ.. ಬೇಗ ಬಿಡಿ ಸಾಂಗ್” ಎಂದು ಬೇಡಿಕೆ ಇದ್ದಾರೆ. ಮತ್ತೊಬ್ಬರು “ಬೇರೆ ಪ್ರಪಂಚ ನೋಡ್ತಿವಿ ಅನ್ಸತ್ತೆ.. ಈ ಸಿನಿಮಾದಲ್ಲಿ ವಾಸ್ತವದ ಅರ್ಥ ಆಗಬಹುದು” ಎಂದು ಅವರೇ ಸಮಾಧಾನ ಮಾಡಿಕೊಂಡಿದ್ದಾರೆ. ಇನ್ನೊಬ್ಬರು “ಬುದ್ಧಿಯ ಬಿರುಗಾಳಿ” ಟೈಟಲ್ ಬೇರೆ ಕೊಟ್ಟಿದ್ದಾರೆ.
ಉಪ್ಪಿ ಈಗಾಗಲೇ ‘ಯುಐ’ ಸಿನಿಮಾ ಅಕ್ಟೋಬರ್‌ಗೆ ರಿಲೀಸ್ ಅಂತ ಹೇಳಿದ್ದಾರೆ. ಆದರೆ, ಅಲ್ಲೂ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ. ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಇನ್ನೂ ಡೇಟ್ ಫಿಕ್ಸ್ ಮಾಡುವುದರಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಬಹುತೇಕ ಈ ಸಿನಿಮಾ ಅಕ್ಟೋಬರ್ ಕೊನೆಯಲ್ಲಿ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಬಹುದೆಂಬ ನಿರೀಕ್ಷೆಯಿದೆ. ಒಟ್ಟಿನಲ್ಲಿ ಉಪ್ಪಿದಾದ ಎಲ್ಲರ ತಲೆಗೆ ಹುಳ ಬಿಡೋದ್ರಲ್ಲಿ ಯಶಸ್ವಿಯಾಗಿದ್ದಾರೆ.. ಮುಂದೆ ಉಪೇಂದ್ರ ಏನ್ ಅಪ್‌ಡೇಟ್ ಕೊಡ್ತಾರೆ ಅಂತಾ ಕಾಯ್ತಾ ಇದ್ದಾರೆ ಫ್ಯಾನ್ಸ್..