ಉಪ್ಪಿ 2 ಮುಂದುವರಿದ ಭಾಗ UI? – ರಿಲೀಸ್ ಡೇಟ್ ಹಿಂದಿದೆ ಉಪ್ಪಿ ಫಾರ್ಮುಲಾ!
ಬುದ್ದಿವಂತನ ಪ್ಲ್ಯಾನ್ ವರ್ಕ್ ಆಗುತ್ತಾ?

ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟು ಅಖಾಡಕ್ಕೆ ಇಳಿದಾಗಿದೆ. ಸುಮಾರು 9 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದಾರೆ.. ಯುಐ ಸಿನಿಮಾ ಮೂಲಕ ಪ್ರೇಕ್ಷಕರನ್ನ ಮನರಂಜಿಸಲು ಸಜ್ಜಾಗಿದ್ದಾರೆ.. ಬುದ್ಧಿವಂತ ಆಗಾಗ ತಲೆಗೆ ಹುಳ ಬಿಟ್ಟು ಕ್ಯೂರಿಯಾಸಿಟಿ ಹೆಚ್ಚು ಮಾಡ್ತಾ ಇದ್ದಾರೆ.. ಇದೀಗ ಸಿನಿರಸಿಕರು ಸಿನಿಮಾ ಯಾವಾಗ ತೆರೆಗೆ ಬರಲಿದೆ ಅಂತಾ ಕಾಯ್ತಾ ಇದ್ದಾರೆ. ಇದೀಗ ಬಿಗ್ ಅಪ್‌ಡೇಟ್ ಸಿಕ್ಕಿದೆ.. ಯುಐ ಸಿನಿಮಾ ವಿಶೇಷ ದಿನದಂದೇ ರೀಲಿಸ್ ಮಾಡಲಾಗ್ತಿದ್ಯಂತೆ..
ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆಗೆ ಕೌಂಟ್‌ಡೌನ್ – ಜೆಡಿಎಸ್ ಪಾಲಾದ ಮೈತ್ರಿ ಪಕ್ಷದ ಟಿಕೆಟ್
ಉಪ್ಪಿ ಹಲವು ವರ್ಷಗಳಿಂದ ನಟನಾಗಿ, ನಿರ್ದೇಶಕನಾಗಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ.. ಅವರು ನಿರ್ದೇಶನ ಮಾಡಿರುವ ‘ಓಂ’, ‘ಎ’, ‘ಉಪೇಂದ್ರ’ ಮೊದಲಾದ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಇದೀಗ ಉಪ್ಪಿದಾದ ಯುಐ ಮೂಲಕ ಜೋರಾಗೇ ಸದ್ದು ಮಾಡ್ತಿದ್ದಾರೆ.. ಸಿನಿಮಾದ ಒಂದೊಂದೇ ಅಪ್‌ಡೇಟ್ ನೀಡಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದಾರೆ..
ಸ್ನೇಹಿತರೇ ಉಪೇಂದ್ರ ಹೀಗೆ ಕುತೂಹಲ ಮೂಡಿಸುವುದು ಇದೇ ಮೊದಲಲ್ಲ. ಡಿಜಿಟಲ್ ತಂತ್ರಜ್ಞಾನ ಅಷ್ಟೊಂದು ಇರದ ಕಾಲದಲ್ಲೇ ಅವರು ಒಂದೇ ಒಂದು ಪೋಸ್ಟರ್ ಮೂಲಕ ತಮ್ಮ ಸಿನಿಮಾಗಾಗಿ ಜನ ಕಾದು ಕೂರವಂತೆ ಮಾಡುತ್ತಿದ್ದರು. ಈಗ ಸೋಷಿಯಲ್ ಮೀಡಿಯಾ, ಡಿಜಿಟಲ್ ತಂತ್ರಜ್ಞಾನ ಎಲ್ಲವೂ ಮುಂದುವರಿದಿದೆ. ಇಂತಹ ಟೈಮ್‌ನಲ್ಲೂ ಕೂಡ ಉಪ್ಪಿ ಒಂದು ಫೋಟೋ, ಪೋಸ್ಟರ್ ಮೂಲಕವೇ ಕ್ಯೂರಿಯಾಸಿಟಿ ಹುಟ್ಟುವಂತೆ ಮಾಡುತ್ತಿದ್ದಾರೆ.. ಟೀಸರ್‌ನಲ್ಲಿ ಕತ್ತಲೆಯಲ್ಲಿ ಬರೀ ಸಂಭಾಷಣೆ ಹಾಕಿ ತೋರಿಸಿ ಎಲ್ಲರನ್ನೂ ಬೆಪ್ಪಾಗಿಸಿಬಿಡ್ತಾರೆ..
ಹೌದು.. ಉಪೇಂದ್ರ ಏನ್ ಮಾಡಿದ್ರೂ ಸ್ಪೆಷಲ್ ಆಗೇ ಇರುತ್ತೆ.. ಟೈಟಲ್ ನಿಂದಲೇ ಸಿನಿಮಾ ಪ್ರೇಮಿಗಳ ತಲೆಗೆ ಹುಳ ಬಿಟ್ಟಿರೋ ಬುದ್ದಿವಂತ, ಟೀಸರ್ ಹಾಗೂ ಹಾಡುಗಳ ಮೂಲಕ ಆಲ್ ಇಂಡಿಯಾ ಸಿನಿ ಪ್ರೇಮಿಗಳು ಕುತೂಹಲಭರಿತರಾಗಿ ಕಾಯುವಂತೆ ಮಾಡಿದ್ದಾರೆ. ಕೊಂಬಿರೋ ಕುದುರೆಯನ್ನೇರಿ ಹೊರಟಿರೋ ಸೂಪರ್ ರಂಗ, ವಿಶೇಷ ದಿನದಂದೇ ತಮ್ಮ ಸಿನಿಮಾ ರಿಲೀಸ್ ಮಾಡಲು ಸಜ್ಜಾಗಿದ್ದಾರೆ ಅಂತಾ ಹೇಳಲಾಗ್ತಿದೆ.. ಅಷ್ಟಕ್ಕೂ, ಆ ವಿಶೇಷ ದಿನ ಯಾವುದು ಗೊತ್ತಾ? ಅಕ್ಟೋಬರ್ 22.. ಇದೇ ದಿನದಂದು ಯುಐ ಸಿನಿಮಾ ರಿಲೀಸ್ ಮಾಡಲು ಸಜ್ಜಾಗಿದ್ದಾರಂತೆ ಉಪ್ಪಿ..
ಯೆಸ್, ಅಕ್ಟೋಬರ್ 22.. ಇದೇ ದಿನದಂದು ಕಳೆದ 25 ವರ್ಷಗಳ ಹಿಂದೆ ಉಪೇಂದ್ರ ನಿರ್ದೇಶಿಸಿ, ನಟಿಸಿದ್ದ ಉಪೇಂದ್ರ ಸಿನಿಮಾ ರಿಲೀಸ್ ಆಗಿತ್ತು. ಪ್ರೇಮ, ದಾಮಿನಿ, ರವೀನಾ ಟಂಡನ್ ಜೊತೆಯಾಗಿ ಈ ಸಿನಿಮಾದಲ್ಲಿ ನಟಿಸಿದ್ರು.. ಆ ಕಾಲದಲ್ಲೇ ಉಪೇಂದ್ರ ಸಿನಿಮಾ ಮೂಲಕ ಕಮಾಲ್ ಮಾಡಿದ್ರು. ಉಪ್ಪಿ ಲೋಕದಲ್ಲಿ ಪ್ರೇಕ್ಷರೆಲ್ಲಾ ಮಿಂದೆದ್ದಿದ್ರು.. ಅದಾಗಿ 16 ವರ್ಷಗಳು ಉರುಳಿದ್ಮೇಲೆ ಇದರ ಸೀಕ್ವೆಲ್ ತಯಾರಿಸಿದ್ದರು. ಉಪ್ಪಿ 2 ಹೆಸರಲ್ಲಿ ಮೂಡಿಬಂದ ಆ ಚಿತ್ರ ಕೂಡ ಮೋಡಿ ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡಿತ್ತು. ಬಳಿಕ ಉಪ್ಪಿ ನಿರ್ದೇಶನದಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಡೈರೆಕ್ಟರ್ ಹ್ಯಾಟ್ ತೊಟ್ಟು ಯುಐ ಮೂಲಕ ಮತ್ತೆ ತೆರೆ ಮೇಲೆ ಬರ್ತಿದ್ದಾರೆ. ಉಪೇಂದ್ರ ರಿಲೀಸ್ ಆದ ದಿನದಂದೇ ಅಂದರೆ ಇದೇ ಅಕ್ಟೋಬರ್ 22 ರಂದು ‘ಯುಐ’ ರಿಲೀಸ್ ಮಾಡಲುಸಜ್ಜಾಗಿದ್ದಾರೆ ಅಂತಾ ಹೇಳಲಾಗ್ತಿದೆ. ಆದ್ರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.. ಆದರೆ ಸ್ವತಃ ಉಪ್ಪಿಯೇ ಅಕ್ಟೋಬರ್ ನಲ್ಲಿ ಯುಐ ರಿಲೀಸ್ ಮಾಡೋದಾಗಿ ವರಮಹಾಲಕ್ಷ್ಮಿ ಹಬ್ಬದಂದು ಅನೌನ್ಸ್ ಮಾಡಿದ್ದರು. ಆದೇ ರಿಲೀಸ್ ಡೇಟ್ ನ ಗುಟ್ಟಾಗಿರಿಸಿದ್ದಾರೆ. ಬಹುಷಃ ಶೀಘ್ರದಲ್ಲೇ ಅಧಿಕೃತವಾಗಿ ಅನೌನ್ಸ್ ಮಾಡೋ ಸಾಧ್ಯೆತೆ ಇದೆ.
ಇನ್ನು ಉಪೇಂದ್ರ ರಿಲೀಸ್ ಆಗಿ 25 ನೇ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗಿ ಯುಐ ರಿಲೀಸ್ ಮಾಡ್ತಿರೋದ್ರ ಹಿಂದೆ ಏನಾದರೂ ಲಿಂಕ್ ಇದೆಯಾ? ಉಪೇಂದ್ರ, ಉಪ್ಪಿ 2 ನ ಮುಂದುವರೆದ ಭಾಗವೇ ಯುಐನಾ? ಈ ಕುತೂಹಲಕ್ಕೆ ಸೂಪರ್ ರಂಗನೇ ಉತ್ತರ ಕೊಡಬೇಕು. ಅದೇನೇ ಇರ್ಲಿ.. ಇಡೀ ಜಗತ್ತನ್ನೇ ಬೆಚ್ಚಿಬೀಳಿಸ್ತಿರೋ ಎಐ ಟೆಕ್ನಾಲಜಿಗೆ ಸ್ಯಾಂಡಲ್ ವುಡ್ ನ ಬುದ್ದಿವಂತನ ಯುಐ ಸಿನಿಮಾ ಸೆಡ್ಡು ಹೊಡೆಯುತ್ತಾ? ಅಂತಾ ಕಾದು ನೋಡ್ಬೇಕಾಗಿದೆ.