ಚೀಪ್‌ ಸಾಂಗ್ ನಲ್ಲಿ ಏನ್‌ ಮಾಡಿದ್ರು ಉಪ್ಪಿ? – ಫ್ಯಾನ್ಸ್‌ ತಲೆಗೆ ಮತ್ತೆ ಹುಳಬಿಟ್ಟಿದ್ದೇಕೆ?

ಚೀಪ್‌ ಸಾಂಗ್ ನಲ್ಲಿ ಏನ್‌ ಮಾಡಿದ್ರು ಉಪ್ಪಿ? – ಫ್ಯಾನ್ಸ್‌ ತಲೆಗೆ ಮತ್ತೆ ಹುಳಬಿಟ್ಟಿದ್ದೇಕೆ?

ಎಲ್ಲಾ ಚೀಪ್ ಚೀಪ್‌ ಅಂತ ಉಪ್ಪಿ‌ಸರ್‌ ಹೇಳಿದ್ಮೇಲೆ ಜನ ಯಾವುದು ಚೀಪ್.. ಅಂತಾ ಯೋಚಿಸ್ತಿದ್ದಾರೆ. ಅಷ್ಟರೊಳಗೆ ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಅಭಿಮಾನಿಗಳ ತಲೆಗೆ ಹುಳ ಬಿಡಲು ರೆಡಿಯಾಗಿದ್ದಾರೆ.. ಇದೀಗ ಯುಐ ಸಿನಿಮಾ ಬಗ್ಗೆ ಉಪ್ಪಿದಾದ ಮತ್ತೊಂದು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾ ನಿರ್ದೇಶಿಸ್ತಾರೆ ಎಂದರೆ ಅದರಲ್ಲಿ ಏನೋ ಸ್ಪೆಷಲ್ ಇರಲೇಬೇಕು ಎಂದು ಅಭಿಮಾನಿಗಳು ಕಾದಿರುತ್ತಾರೆ. ಅವರ ಸಿನಿಮಾ ಹಾಡುಗಳೂ, ಅದರ ಸಾಹಿತ್ಯವೂ ಅಷ್ಟೇ. ವಿಶೇಷವಾಗಿಯೇ ಇರುತ್ತದೆ. ಇದೀಗ ಉಪ್ಪಿ ದಾದ ಯುಐ ಸಿನಿಮಾ ಮೂಲಕ ಸಿನಿಪ್ರೇಕ್ಷಕರಿಗೆ ರಸದೌತಣ ನೀಡಲು ಮುಂದಾಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಒಂದೊಂದೇ ಸರ್ಪ್ರೈಸ್ಗಳನ್ನ ಉಪ್ಪಿ ನೀಡ್ತಾ ಇದ್ದಾರೆ. ಇದೀಗ ಉಪೇಂದ್ರ ಈ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಮಾಡಲು ಸಿದ್ಧತೆ ಮಾಡ್ಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಸಾಂಗ್ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: ಸೆಲೆಬ್ರಿಟಿಗಳನ್ನೂ ಕಾಡಿದ ಕರಿಮಣಿ ಮಾಲೀಕ.. – ಎಲ್ಲೆಲ್ಲೂ ನಲ್ಲನ ಗುಂಗು!

ಯುಐ ಸಿನಿಮಾದ ಚೀಪ್ ಸಾಂಗ್ ಪ್ರೋಮೋ ಈಗಾಗಲೇ ವೈರಲ್ ಆಗಿತ್ತು. ಎಲ್ಲಾ ಚೀಪ್ ಚೀಪ್ ಎನ್ನುವ ವಿಶಿಷ್ಟ ಸಾಲುಗಳಿರುವ ಪೂರ್ತಿ ಹಾಡಿನ ವೀಡಿಯೋ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಈಗ ಉಪೇಂದ್ರ ಮತ್ತೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಮಾರ್ಚ್ 4 ರಂದು ಯುಐ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಲಿದೆ.

ತಮ್ಮದೇ ಶೈಲಿಯಲ್ಲಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಚೀಪ್ ಚೀಪ್ ಏನದು? ದೊಡ್ಡದು.. ಚಿಕ್ಕದು..ಯಾರದ್ದು? ಇದು ಬಹಳ ಸೂಕ್ಷ್ಮವಾದ ವಿಷಯ. ಯಾರದ್ದು ಚಿಕ್ಕದು? ಯಾರದ್ದು ದೊಡ್ಡದು? ಎಂಬ ವಿಷಯ ಬಹಿರಂಗವಾದರೆ ಅದಾಗಿ ಹೋಗುತ್ತದೆ.. ಏನು ಅದು? ಅದು ಏನಾಗುತ್ತದೆ? ಏನಾಗುತ್ತದೆ ಎಂದು ಮಾರ್ಚ್ 4 ನೇ ತಾರಿಕು ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾದಾಗ ನಿಮಗೆ ಗೊತ್ತಾಗುತ್ತದೆ ಅಂತಾ ಹೇಳಿದ್ದಾರೆ.

ಟೀಸರ್ ಪ್ರೋಮೋದಿಂದ ಹಿಡಿದು ಯುಐ ಸಿನಿಮಾದ ಎಲ್ಲಾ ಅಪ್ ಡೇಟ್ ವಿಚಾರದಲ್ಲೂ ಉಪೇಂದ್ರ ತಮ್ಮದೇ ಶೈಲಿಯಲ್ಲಿ ಅಪ್ಡೇಟ್ ನೀಡುತ್ತಾ ಬಂದಿದ್ದಾರೆ. ಇದ್ರಿಂದಾಗಿ ಜನರ ತಲೆ ಕೆರೆದುಕೊಳ್ಳುವಂತೆ ಆಗಿದೆ. ಹೀಗಾಗಿಯೇ ಉಪೇಂದ್ರ ಅವರ ಈ ಸಂದೇಶ ನೋಡಿದ ಅಭಿಮಾನಿಗಳು ಈ ಥರಾ ಜನರ ತಲೆಗೆ ಹುಳ ಬಿಡಬೇಡಿ. ಮೊದಲು ವಿಷಯ ಏನಂತ ಹೇಳಿ ಅಂತಾ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ರಿಯಲ್‌ ಸ್ಟಾರ್ ಉಪ್ಪಿ ಸರ್ ಯಾವತ್ತಿದ್ರೂ ಸಮ್ ಥಿಂಗ್ ಸ್ಪೆಷಲ್ ಅನ್ನೋದು ಇದ್ರಿಂದ ಗೊತ್ತಾಗುತ್ತೆ.

Shwetha M