ಟ್ರೋಲ್ ಆಗತ್ತೆ ಸಾಂಗ್ ಸಿಕ್ಕಾಪಟ್ಟೆ ವೈರಲ್  – ಉಪ್ಪಿ ಹವಾ ಹೇಗಿದೆ?

ಟ್ರೋಲ್ ಆಗತ್ತೆ ಸಾಂಗ್ ಸಿಕ್ಕಾಪಟ್ಟೆ ವೈರಲ್  – ಉಪ್ಪಿ ಹವಾ ಹೇಗಿದೆ?

ಎಲ್ಲಾ ಚೀಪ್ ಚೀಪ್ ಅಂತಾ ಉಪೇಂದ್ರ ಈಗಾಗಲೇ ಫ್ಯಾನ್ಸ್ ತಲೆಗೆ ಹುಳ ಬಿಟ್ಟಿದ್ದರು.. ಯಾವುದು ಚೀಪ್.. ಯಾವುದು ದೊಡ್ಡದು, ಯಾವುದು ಚಿಕ್ಕದು ಅಂತಾ ಜನ ಯೋಚನೆ ಮಾಡ್ತಿರುವಾಗಲೇ, ಟ್ರೋಲ್ ಆಗುತ್ತೆ ಇದು ಟ್ರೋಲ್ ಆಗುತ್ತೆ ಅಂತಾ ಉಪ್ಪಿ ಮತ್ತೊಂದು ಸಾಂಗ್ ಮೂಲಕ ವೀಕ್ಷಕರಿಗೆ ಚಮಕ್ ಕೊಟ್ಟಿದ್ದಾರೆ.. ಇದೀಗ ಈ ಸಾಂಗ್ ಕೇಳಿ ಉಪ್ಪಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಚೀಪ್ ಚೀಪ್.. ಎಲ್ಲಾ ಚೀಪ್ ಅಂತಾ ಹೇಳಿ ಯುಐ ಸಿನಿಮಾದಲ್ಲಿ ಸಾಂಗ್‌ ಮೂಲಕವೇ ಫ್ಯಾನ್ಸ್ ತಲೆಗೆ ಉಪ್ಪಿಸಾರ್‌  ಹುಳ ಬಿಟ್ಟಿದ್ರು.. ಯಾವುದು ಚೀಪ್.. ಯಾವುದು ದೊಡ್ಡದು.. ಚಿಕ್ಕದು ಅಂತಾ ಫ್ಯಾನ್ಸ್ ಯೋಚನೆ ಮಾಡುತ್ತಿರುವಾಗಲೇ ಚೀಪ್ ಸಾಂಗ್ ಅಲ್ಲ.. ಈಗ ಟ್ರೋಲ್ ಸಾಂಗ್ ಮೂಲಕ UIನಲ್ಲಿ ಫ್ಯಾನ್ಸ್‌ಗೆ ಖುಷಿ ಕೊಟ್ಟಿದ್ದಾರೆ..  ಮುಂಬೈಯಲ್ಲಿರೊ ಗೂಗಲ್ ಕಚೇರಿಯಿಂದಲೇ ಯುಐನ ಮತ್ತೊಂದು ಸಾಂಗ್ ಅನ್ನ ರಿಲೀಸ್ ಮಾಡಲಾಗಿದೆ. ಐದು ಭಾಷೆಗಳಲ್ಲಿಈ ಹಾಡನ್ನು ರಿಲೀಸ್ ಮಾಡಲಾಗಿದೆ. ನರೇಶ್ ಕುಮಾರ್ ಬರೆದಿರೋ ಈ ಹಾಡು ಸಾಕಷ್ಟು ಮಜವಾಗಿದೆ.  ಹರ್ಷಿಕಾ ದೇವನಾಥ್, ಅನೂಪ್ ಭಂಡಾರಿ, ಐಶ್ವರ್ಯಾ ರಂಗರಾಜನ್ ಹಾಗೂ ಅಜನೀಶ್ ಲೋಕನಾಥ್ ಈ ಹಾಡಿಗೆ ಜೀವ ತುಂಬಿದ್ದಾರೆ.

ಇದನ್ನೂ ಓದಿ: ರ್ಯಾಲಿ ವೇಳೆ ಮೋದಿ ಮೋದಿ ಘೋಷಣೆ – ಶೇಕ್‌ ಹ್ಯಾಂಡ್‌ ಮಾಡಲು ಬಂದ ರಾಹುಲ್‌ ಗಾಂಧಿಗೆ ಆಲೂಗಡ್ಡೆ ಕೊಟ್ಟ ಬಿಜೆಪಿ ಕಾರ್ಯಕರ್ತರು!

ಯುಐನ ಮೊದಲ ಹಾಡಿನಲ್ಲಿ ಟ್ರೋಲ್, ಇನ್ಸ್ಟಾಗ್ರಾಂ ರೀಲ್ಸ್  ಹೀಗೆ ಸದ್ಯ  ಸೋಷಿಯಲ್ ಮೀಡಿಯಾದಲ್ಲಿ ಯಾವೆಲ್ಲಾ ಟ್ರೆಂಡ್‌ಗಳಿವೆಯೋ ಅವೆಲ್ಲವನ್ನು ಸಾಂಗ್‌ನಲ್ಲಿ ಹೈಲೈಟ್ ಮಾಡಲಾಗಿದೆ. ಈ ಸಾಂಗ್‌ನ ಮೊದಲ ಸಾಲಿನಲ್ಲಿಯೇ ಇದು ಟ್ರೋಲ್ ಆಗುತ್ತೆ.. ಇದು ಟ್ರೋಲ್ ಆಗುತ್ತೆ.. ಇನ್ಸ್ಸ್ಟಾದಲ್ಲಿ ತುಂಬಾ ರೀಲ್ಸ್ ಆಗುತ್ತೆ.. ಕೆಲ್ಸ ಇಲ್ಲದವರಿಗೆ ಇದು ಟೈಮ್ ಪಾಸ್ ಆಗುತ್ತೆ ಅಂತಾ ಹಾಡು ಶುರುವಾಗುತ್ತೆ. ಆ ಮೂಲಕ ಟ್ರೋಲ್ ಮಾಡೋರು, ರೀಲ್ಸ್‌ ನೋಡ್ತಾ ಟೈಮ್‌ ಪಾಸ್‌ ಮಾಡೋರನ್ನು ಕೆಲ್ಸ ಇಲ್ದೋರು ಅಂತ ಕಾಲೆಳೆಯುತ್ತಲೇ ಸಾಂಗ್‌ ಸಾಗಿದೆ… ಅಷ್ಟೇ ಅಲ್ಲದೆ ಈ  ಸಿನಿಮಾದ  ಹಾಡಿನಲ್ಲಿ ನಿಖಿಲ್ ಎಲ್ಲಿದ್ದಿಯಪ್ಪ ಡೈಲಾಗ್ ಕೂಡ ಬಳಕೆ ಮಾಡಲಾಗಿದೆ.. ಹೀಗೆ ಈ ಹಾಡನ್ನ ಟ್ರೋಲ್ ಪ್ರಿಯರಿಗಂತನೇ ಮಾಡಿರೋದಂತೂ ಪಕ್ಕಾ.. ಹೀಗೆ ಟ್ರೋಲ್‌ ಆಗುತ್ತೆ ಅಂತ ಹೇಳ್ತಾನೆ ಮಜಾ ಕೊಡುತ್ತಿದೆ ಉಪ್ಪಿ ಸಿನಿಮಾದ ಈ ಹೊಸ ಹಾಡು.. ಜೊತೆಗೆ ಈಗಿನ ಹುಡುಗರಿಗೂ ಸುಲಭವಾಗಿ ಕನೆಕ್ಟ್ ಆಗುವಂತಹ ಲಿರಿಕ್ಸ್‌ ಇದರಲ್ಲಿದೆ.

ಟ್ರೆಂಡ್ ಆಗಿರೋ ಪ್ರತಿ ವಿಷಯವೂ ಈ ಹಾಡಿನಲ್ಲಿ ಸಾಲುಗಳಾಗಿವೆ. ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್, ನಾನು ನಂದಿನಿ ಪಿಜಿಲಿ ಇರ್ತೀನಿ, ಡೋಲೋ 650 ಮಾತ್ರೆ ಇವೆಲ್ಲಾ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಾ ಇರುವ ವೈರೆಲ್‌ ಹಾಡು, ಹಾಗೂ ಡೈಲಾಗ್‌ಗಳು.. ಇವೆಲ್ಲವನ್ನೂ ರಿಯಲ್‌ ಸ್ಟಾರ್‌ ಉಪ್ಪಿ ತಮ್ಮ ಯುಐ ಹಾಡಿನಲ್ಲಿ ಸೇರಿಸಿರುವುದು ವಿಶೇಷ.. ಇನ್ನು ರಾಜಕೀಯ ವಿಚಾರವನ್ನು ಕೂಡ ಹಾಡಿನಲ್ಲಿ ಉಲ್ಲೇಖ ಮಾಡಲಾಗಿದೆ.. ಕೆರೆಕ್ಟ್ ಆಗಿ ನಿಂತ್ರೆ  ಜೋಡೆತ್ತುಗಳ ಹಂಗೆ.. ಗೆಲುವು ಅಕ್ಕಂದೇ ಅಂತಾ ಸುಮಲತಾ ಅಂಬರೀಷ್ ಬಗ್ಗೆ ಕೂಡ ಹೇಳಲಾಗಿದೆ.. ಇದು ಖಚಿತ.. ಇದು ಉಚಿತ.. ಎಲ್ಲಾ ಫ್ರೀ.. ಫ್ರೀ ಅಂತಾ ಎಲ್ಲಾ ವೈರಲ್ ಮ್ಯಾಟರ್ಗಳನ್ನೇ ಹಾಡಿನಲ್ಲಿ ಸೇರಿಸಲಾಗಿದೆ.. ಸದ್ಯ ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆ ಎಬ್ಬಿಸುವುದಂತೂ ಪಕ್ಕಾ..

ಯುಐ ಸಿನಿಮಾ ಹಲವು ಸಪ್ಪ್ರೈಸ್‌ಗಳ ಹೂರಣ. ಒಂದೊಂದೇ ಸರ್ಪ್ರೈಸ್‌ಗಳನ್ನ ಉಪ್ಪಿ ಬಿಡುತ್ತಾ ಬರುತ್ತಿದ್ದಾರೆ. ಯುಐನಲ್ಲಿ, ಸನ್ನಿ ಲಿಯೋನ್ ಇದ್ದಾರೆ‌.  ಇದರಲ್ಲಿ ಸನ್ನಿಯ ಹಾಟ್ ಡಾನ್ಸ್ ಇರುತ್ತೆ ಅನ್ನೋದು ಉಪ್ಪಿ ಫ್ಯಾನ್ಸ್ ಊಹೆಯಾಗಿತ್ತು. ಯಾಕಂದ್ರೆ ಈ ಬ್ಯೂಟಿ ಡಾನ್ಸ್ ಮಾಡಿದ್ರೇನೆ ಅದಕ್ಕೊಂದು ಕಳೆ ಅನ್ನೋದು ಪಡ್ಡೆಗಳ ವಾದ. ಕನ್ನಡದ ಸಿನಿಮಾದಲ್ಲಿ ಸನ್ನಿ  ಹೆಜ್ಜೆ ಗುರುತು ಇರೋದೇ ಹಾಡಿನಲ್ಲಿ. ಆದ್ರೆ ಯುಐ ಸಿನಿಮಾದಲ್ಲ ಸನ್ನಿ ಲಿಯೋನ್  ಕುಣಿಯುತ್ತಿಲ್ಲ ನಿಮ್ಮನ್ನ ಕುಣಿಸುತ್ತಲೂ ಇಲ್ಲ. ಉಪೇಂದ್ರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ನಟಿಸುತ್ತಿದ್ದಾರೆ ಅಂತಾ ಸಿನಿಮಾ ಮೂಲಗಳು ಹೇಳುತ್ತಿವೆ.  ಇದಿಷ್ಟು ಯುಐ ಸಿನಿಮಾ ಬಗೆಗಿನ ಅಪ್ಡೇಟ್ಸ್‌.. ಹಾಗಿದ್ದರೂ ಈ ಟ್ರೋಲ್  ಟ್ರೋಲ್  ಹಾಡು ಇನ್ಯಾವ ರೀತಿಯಲ್ಲೆಲ್ಲಾ ಟ್ರೋಲ್‌ ಆಗುತ್ತೆ ಅಂತ ಮುಂದೆ ನೋಡಬೇಕಿದೆ.. ಏನೇ ಆದ್ರೂ ಯುಐ ಸಿನಿಮಾದ ಮೂಲಕ ಉಪ್ಪಿ ಸಾರ್‌ ಹೊಸ ಹೊಸ ಪ್ರಯೋಗ ಮಾಡ್ತಿದ್ದು ಫ್ಯಾನ್ಸ್‌ ಫುಲ್‌ ಎಂಜಾಯ್‌ ಮಾಡುವಂತಾಗಿದೆ.

Shwetha M