ಕಲಿಯುಗದ ರಕ್ಷಾಗೆ ಶ್ರೀಕೃಷ್ಣನೇ ಬೇಕಂತೆ! – ಗೋಪಾಲನ ಮೂರ್ತಿಯನ್ನೇ ಮದುವೆಯಾದ ಯುವತಿ

ಕಲಿಯುಗದ ರಕ್ಷಾಗೆ ಶ್ರೀಕೃಷ್ಣನೇ ಬೇಕಂತೆ! – ಗೋಪಾಲನ ಮೂರ್ತಿಯನ್ನೇ ಮದುವೆಯಾದ ಯುವತಿ

ಶ್ರೀಕೃಷ್ಣನಿಗೆ ಇಬ್ಬರು ತಾಯಂದಿರು ಹಾಗೇ 16 ಸಾವಿರ ಪತ್ನಿಯರು ಇದ್ದಾರೆ ಅಂತಾ ಪುರಾಣಗಳಲ್ಲಿ ನಾವು ಕೇಳಿದ್ದೇವೆ. ಹಾಗೆ ತನ್ನ ಸರ್ವಸ್ವವನ್ನೂ ಶ್ರೀಕೃಷ್ಣನಿಗೆ ಮುಡಿಪಾಗಿಟ್ಟ ಮೀರಾಬಾಯಿ ಕಥೆಗಳನ್ನು ನಾವು ಕೇಳಿದ್ದೇವೆ. ಇದೀಗ ಕಲಿಯುಗದ ಮೀರಾಬಾಯಿಯೊಬ್ಬಳು ಸುದ್ದಿಯಾಗಿದ್ದಾಳೆ. ಆಕೆಗೆ ಕೂತರೂ ನಿಂತರೂ ಶ್ರೀಕೃಷ್ಣನದ್ದೇ ಜಪವಂತೆ. ಹಾಗಾಗಿ ತಾನು ಮದುವೆಯಾದರೆ ಶ್ರೀಕೃಷ್ಣನನ್ನೇ ಮದುವೆಯಾಗುವೆ. ನನ್ನ ಜೀವನವನ್ನೇ ಶ್ರೀಕೃಷ್ಣನಿಗೆ ಅರ್ಪಿಸುತ್ತಿರುವೆ ಎಂದು ಶ್ರೀಕೃಷ್ಣನ ವಿಗ್ರಹದೊಂದಿಗೆ ಹಸೆಮಣೆ ಏರಿದ್ದಾಳೆ.

ಇದನ್ನೂ ಓದಿ:ವಧುವಿಗೆ 12ನೇ ತರಗತಿಯಲ್ಲಿ ಕಡಿಮೆ ಮಾರ್ಕ್ಸ್ – ತಾಳಿ ಕಟ್ಟಲ್ಲ ಅಂದ ವರನಿಂದಾಗಿ ಮದುವೆ ಕ್ಯಾನ್ಸಲ್

ಈಕೆಯ ಹೆಸರು ರಕ್ಷಾ (30).  ಸ್ನಾತಕೋತ್ತರ ಪದವಿ ಮುಗಿಸಿ ಎಲ್ ಎಲ್ ಬಿ ವ್ಯಾಸಂಗ ಮಾಡುತ್ತಿದ್ದಾಳೆ. ಉತ್ತರ ಪ್ರದೇಶದ ಔರೈಯಾದ ನಿವಾಸಿ, ನಿವೃತ್ತ ಶಿಕ್ಷಕ ರಂಜಿತ್ ಸಿಂಗ್ ಸೋಲಂಕಿ ಅವರ ಪುತ್ರಿ. ಈಕೆಗೆ ಶ್ರೀಕೃಷ್ಣನೆಂದರೆ ಪಂಚಪ್ರಾಣವಂತೆ. ಹೀಗಾಗಿ ಜೀವನಪೂರ್ತಿ ಶ್ರೀಕೃಷ್ಣ ಪರಮಾತ್ಮನೊಂದಿಗೆ ಕಳೆಯುತ್ತೇನೆ. ಭಗವಂತನನ್ನೇ ನಾನು ಪತಿಯಾಗಿ ಸ್ವೀಕರಿಸಿಕೊಂಡಿದ್ದೇನೆ ಎಂದು ತನ್ನ ಪೋಷಕರಲ್ಲಿ ಹೇಳಿಕೊಂಡಿದ್ದಾಳೆ.

ಮಗಳ ಅಪಾರವಾದ ಕೃಷ್ಣ ಭಕ್ತಿಯನ್ನು ಕಂಡ ತಂದೆ ರಂಜಿತ್ ಸಿಂಗ್  ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆಕೆಯ ಆಸೆಯಂತೆ ಅದ್ದೂರಿಯಾಗಿ ನಡೆಸಿಕೊಟ್ಟಿದ್ದಾರೆ. ಮದುವೆ ಮಂಟಪವನ್ನು ವೈಭವದಿಂದ ಅಲಂಕರಿಸಿ ಶ್ರೀಕೃಷ್ಣನ ಮೂರ್ತಿಯನ್ನು ಮೆರವಣಿಗೆಯ ಮೂಲಕ ಮಂಟಪಕ್ಕೆ ತೆಗೆದುಕೊಂಡು ಬಂದಿದ್ದಾರೆ. ಬಳಿಕ ಆಕೆಯೊಂದಿಗೆ ಮದುವೆ ಮಾಡಿಸಿದ್ದಾರೆ.

ಶ್ರೀಕೃಷ್ಣ ಕಲ್ಯಾಣಕ್ಕೆ ಬಂಧು ಮಿತ್ರರನ್ನು ಆಹ್ವಾನಿಸಲಾಗಿತ್ತು. ಜೊತೆಗೆ ಶ್ರೀಕೃಷ್ಣನಿಗೆ ಪ್ರಿಯವಾದ ಭಕ್ಷ್ಯ ಭೋಜನಗಳನ್ನು ಏರ್ಪಡಿಸಲಾಗಿದೆ. ವಿವಾಹ ನಂತರ ವಧುವನ್ನು ಕೃಷ್ಣನ ಮೂರ್ತಿಯೊಂದಿಗೆ ಸುಖಚೈನ್‌ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿದೆ. ನಂತರ, ವಧು ತನ್ನ ಮಡಿಲಲ್ಲಿ ಕೃಷ್ಣನ ವಿಗ್ರಹವನ್ನು ಹೊತ್ತು ತನ್ನ ತಾಯಿಯ ಮನೆಗೆ ಮರಳಿದ್ದಾಳೆ.

suddiyaana