ಫೈನಲ್ ಬೆಲ್ ಬಾರಿಸಿದ RCB – ಫೆಬ್ರವರಿ 5ಕ್ಕೆ 2ನೇ ಕಪ್ ನಮ್ದೇ?
ಸಿಂಹಿಣಿಯರ ಬೇಟೆ ಬಲು ಜೋರು

ಫೈನಲ್ ಬೆಲ್ ಬಾರಿಸಿದ RCB – ಫೆಬ್ರವರಿ 5ಕ್ಕೆ 2ನೇ ಕಪ್ ನಮ್ದೇ?ಸಿಂಹಿಣಿಯರ ಬೇಟೆ ಬಲು ಜೋರು

2026ರ ಡಬ್ಲ್ಯೂಪಿಎಲ್​ನಲ್ಲಿ ನೆಕ್ಸ್​ಟ್ ಲೆವೆಲ್ ಪರ್ಫಾಮೆನ್ಸ್ ನೀಡಿರೋ ಸಿಂಹಿಣಿಯರ ಸೇನೆ ಈಗ ಡೈರೆಕ್ಟ್ ಆಗಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಗುರುವಾರ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಭರ್ಜರಿಯಾಗಿ ಗೆದ್ದು ಫೈನಲ್ ಟಿಕೆಟ್ ಪಡೆದಿದೆ. ಅತ್ತ ಯುಪಿ ಟೀಂ ಟೂರ್ನಿಯಿಂದಲೇ ಹೊರ ಬಿದ್ದಿದೆ.  4ನೇ ಸೀಸನ್ ಡಬ್ಪ್ಯೂಪಿಎಲ್​ನಲ್ಲಿ ಸತತ 5 ಪಂದ್ಯಗಳನ್ನ ಗೆದ್ದು ಪ್ಲೇಆಫ್​ಗೆ ಲಗ್ಗೆ ಇಟ್ಟಿದ್ದ ಆರ್​ಸಿಬಿ 6ನೇ ಮತ್ತು 7ನೇ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲು ಕಂಡಿತ್ತು. ಇದ್ರಿಂದ ಎಲ್ಲಿ ಡೈರೆಕ್ಟ್ ಫೈನಲ್ ಟಿಕೆಟ್ ಮಿಸ್ ಆಗುತ್ತೋ, ಗೆಲುವಿನ ಹಳಿ ತಪ್ಪಿತಾ ಅನ್ನೋ ಆತಂಕ ಶುರುವಾಗಿತ್ತು. ಬಟ್ ಲೀಗ್ ಹಂತದ ಕೊನೇ ಮ್ಯಾಚಲ್ಲಿ ಭರ್ಜರಿಯಾಗೇ ಕಂ ಬ್ಯಾಕ್ ಮಾಡಿದ್ದಾರೆ. ಸಿಂಹಿಣಿಯರ ಬೇಟೆ ಬಲು ಜೋರು ಎನ್ನುವಂತೆ ಗರ್ಜಿಸಿದ್ದಾರೆ. ಯುಪಿ ವಾರಿಯರ್ಸ್ ಮೇಲೆ ಸವಾರಿ ಮಾಡಿ ಡೈರೆಕ್ಟ್ ಆಗಿ ಫೈನಲ್​ಗೆ ಧುಮುಕಿದ್ದಾರೆ. ಇನ್ನೇನಿದ್ರೂ ಎದುರಾಳಿ ಯಾರು ಅಂತಾ ಕಾಯೋದಷ್ಟೇ ಬಾಕಿ.

ಇದನ್ನೂ ಓದಿ : 4ನೇ T20I ಪಂದ್ಯದಲ್ಲಿ ಗೆದ್ದ ಕಿವೀಸ್ – ಟೀಂ IND ಸೋಲಿಗೆ ಕಾರಣವೇನು?

ಟಾಸ್ ಗೆದ್ದು ಭರ್ಜರಿಯಾಗೇ ಮ್ಯಾಚ್ ಗೆದ್ದ ಬೆಂಗಳೂರು!

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಳ್ತು.. ಓಪನರ್​ಗಳಾಗಿ ಕಣಕ್ಕಿಳಿದ ನಾಯಕಿ ಮೆಗ್ ಲ್ಯಾನಿಂಗ್ ಹಾಗೇ ದೀಪ್ತಿ ಶರ್ಮಾ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸಿದ್ರೂ ಆ ನಂತ್ರ ಅಗ್ರೆಸ್ಸಿವ್ ಆದ್ರು. ಮೊದಲ ವಿಕೆಟ್​ಗೆ 74 ರನ್​ಗಳ ಜೊತೆಯಾಟ ಬಂತು. 41 ರನ್ ಗಳಿಸಿದ್ದ ಮೆಗ್ ಲ್ಯಾನಿಂಗ್​ಗೆ ನಡಿನ್ ಡಿ ಕ್ಲರ್ಕ್ ಪೆವಿಲಿಯನ್ ದಾರಿ ತೋರಿಸಿದ್ರು. ಮತ್ತೊಂದೆಡೆ ದೀಪ್ತಿ 55 ರನ್ ಗಳಿಸಿ ಶ್ರೇಯಾಂಕಾಗೆ ವಿಕೆಟ್ ಒಪ್ಪಿಸಿದ್ರು. ಆ ನಂತ್ರ ಬಂದ ಯಾರಿಂದಲೂ ಕೂಡ ಬ್ಯಾಟಿಂಗ್​ನಲ್ಲಿ 15ಕ್ಕಿಂತ ಜಾಸ್ತಿ ಸ್ಕೋರ್ ಬರ್ಲಿಲ್ಲ.   ಹೀಗಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 143 ರನ್‌ಗಳಿಸಲಷ್ಟೇ ಸಾಧ್ಯವಾಯ್ತು. ಇನ್ನು ಆರ್​ಸಿಬಿ ಪರ ಗ್ರೇಸ್ ಹ್ಯಾರಿಸ್ 2, ಡಿ ಕ್ಲರ್ಕ್ 4 ವಿಕೆಟ್ ತೆಗೆದು ಮಿಂಚಿದ್ರು. ಬೆಲ್ ಮತ್ತು ಶ್ರೇಯಾಂಕ ಒಂದೊಂದು ವಿಕೆಟ್ ಪಡೆದ್ರು. 144 ರನ್​ಗಳ ಗುರಿ ಬೆನ್ನತ್ತಿದ ಆರ್​ಸಿಬಿ ಯುಪಿ ಬೌಲರ್​ಗಳನ್ನ ಚೆಂಡಾಡಿದ್ರು.

ಗ್ರೇಸ್ ಹ್ಯಾರಿಸ್ ಸ್ಫೋಟಕ ಬ್ಯಾಟಿಂಗ್ ಗೆ ಯುಪಿ ಥಂಡಾ

ಯುಪಿ ನೀಡಿದ್ದ ಟಾರ್ಗೆಟ್ ಬೆನ್ನತ್ತಿದ ಆರ್​ಸಿಬಿ ಪರ ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂದಾನ ಇನ್ನಿಂಗ್ಸ್ ಆರಂಭಿಸಿದ್ರು. ಒಂದ್ಕಡೆ ಸ್ಮೃತಿ ಸ್ಲೋವಾಗಿ ಸ್ಟಾರ್ಟ್ ಮಾಡಿದ್ರೆ ಹ್ಯಾರಿಸ್ ಅಂತೂ ಯುಪಿ ಬೌಲರ್​ಗಳನ್ನ ಚೆಂಡಾಡಿದ್ರು. ಇಬ್ಬರ ಜೊತೆಯಾಟದಲ್ಲಿ 108 ಪ್ಲಸ್ ರನ್ಸ್ ಬಂತು. 37 ಎಸೆತಗಳಲ್ಲಿ 13 ಬೌಂಡರಿ ಮತ್ತು ಎರಡು ಸಿಕ್ಸರ್‌ ಸಹಿತ 75 ರನ್ ಬಾರಿಸಿ ಔಟ್ ಆದ್ರು. ಇನ್ನೊಂದ್ಕಡೆ ಸ್ಮೃತಿ ಮಂದಾನ ಕೂಡ ಅರ್ಧಶತಕ ಬಾರಿಸಿದ್ರು. ಇನ್ನೇನು ವಿನ್ನಿಂಗ್ ರನ್ ಹೊಡೀಬೇಕು ಅನ್ನುವಷ್ಟ್ರಲ್ಲಿ ಜಾರ್ಜಿಯಾ ವೋಲ್ ಔಟ್ ಆದ್ರು. ಅಂತಿಮವಾಗಿ ಸ್ಮೃತಿ ಮಂದಾನ ಬೌಂಡರಿ ಮೂಲಕ ಪಂದ್ಯ ಗೆದ್ದು ತಂಡವನ್ನ ಫೈನಲ್​ಗೆ ಕೊಂಡೊಯ್ದರು. 13.1 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ ಟಾರ್ಗೆಟ್ ರೀಚ್ ಆದ್ರು.

4ನೇ ಆವೃತ್ತಿಯಲ್ಲಿ ಸಿಂಹಿಣಿಯರ ಬೇಟೆ ಬಲು ಜೋರು

ಇನ್ನು ಈ ಸೀಸನ್​ಲ್ಲಿ ಆರ್​ಸಿಬಿ ಅದ್ಭುತ ಪ್ರದರ್ಶನಕ್ಕೆ ಕಾರಣವೇ ಕ್ವಾಲಿಟಿ ಪ್ಲೇಯರ್ಸ್. ಅದ್ರಲ್ಲೂ ವಿದೇಶಿ ಆಟಗಾರರು ಅದ್ಭುತವಾದ ಫಾರ್ಮ್​ನಲ್ಲಿದ್ದಾರೆ. ಇಂಗ್ಲಿಷ್ ಫಾಸ್ಟ್ ಬೌಲರ್ ಲಾರೆನ್ ಬೆಲ್ ಅಂತೂ ರನ್ಸ್ ಕೊಡೋದ್ರಲ್ಲಿ ತೀರಾ ಕಂಜೂಸ್.. ರನ್ಸ್ ಗಿಂತ ಜಾಸ್ತಿ ಡಾಟ್ ಬಾಲ್ಸೇ ಇರುತ್ತೆ. 90 ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಿದ ಬೆಲ್ ಈ ಸೀಸನ್​ನಲ್ಲಿ ಬೆಸ್ಟ್ ಬೌಲರ್ ಆಗಿದ್ದಾರೆ. 8 ಪಂದ್ಯಗಳಿಂದ 12 ವಿಕೆಟ್ಸ್ ಬೇಟೆಯಾಡಿದ್ದಾರೆ. ಅದಕ್ಕಿಂತ ಜಾಸ್ತಿ ಎಕಾನಮಿ ರೇಟ್ ನೆಕ್ಸ್​ಟ್ ಲೆವೆಲ್​ನಲ್ಲಿದೆ. 5.62ರ ಎಕಾಮನಿಯಲ್ಲಿ ರನ್ಸ್ ಕೊಟ್ಟಿದ್ದಾರೆ. ಅಂದ್ರೆ ಬಾಲ್​ಗೊಂದು ರನ್​ನೂ ಕೊಟ್ಟಿಲ್ಲ. ಇನ್ನು ಆಲ್​ರೌಂಡರ್ ನಡಿನ್ ಡಿ ಕ್ಲರ್ಕ್ ಕೂಡ ಅಷ್ಟೇ ಎಫೆಕ್ಟೀವ್ ಆಗಿದ್ದಾರೆ. 8 ಪಂದ್ಯಗಳಿಂದ 15 ವಿಕೆಟ್ ಕಬಳಿಸಿ ಜಾಯಿಂಟ್ಸ್ ಮೋಸ್ಟ್ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಹರಾಜಿನಲ್ಲಿ ಆರ್ ಸಿಬಿ ಇವ್ರನ್ನ 65 ಲಕ್ಷಕ್ಕೆ ಖರೀದಿ ಮಾಡಿತ್ತು. ಇನ್ನು ಓಪನರ್ ಗ್ರೇಸ್ ಹ್ಯಾರಿಸ್ ಈ ಸೀಸನ್​ನ ಬೆಸ್ಟ್ ಸ್ರೈಕ್​ರೇಟ್ ಬ್ಯಾಟರ್ ಹೊಂದಿದ್ದಾರೆ. ಌಂಡ್ ಯುಪಿ ವಿರುದ್ಧವೂ 202 ಸ್ಟ್ರೈಕ್​ನಲ್ಲಿ ಬ್ಯಾಟ್ ಬೀಸಿದ್ರು. ಹೀಗೆ ಆರ್​ಸಿಬಿ ಪ್ಲೇಯರ್​ಗಳ ಅಬ್ಬರವೇ ಈಗ ತಂಡವನ್ನ ಫೈನಲ್​ಗೇರಿಸಿದೆ.

ಫೆಬ್ರವರಿ 5ಕ್ಕೆ ಆರ್ ಸಿಬಿ ಎದುರಾಳಿ ಯಾರು?

ಲೀಗ್​ ಹಂತದಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿ ಡೈರೆಕ್ಟ್ ಫೈನಲ್​ಗೇರಿರೋ ಬೆಂಗಳೂರು ತಂಡ ಫೆಬ್ರವರಿ 5ರಂದು ಫೈನಲ್ ಪಂದ್ಯ ಆಡಲಿದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ ಯುಪಿ ಕೊನೇ ಸ್ಥಾನದಲ್ಲಿದ್ದು ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. 2ನೇ ಸ್ಥಾನದಲ್ಲಿ ಗುಜರಾತ್ ಇದ್ರೆ 3ನೇ ಸ್ಥಾನದಲ್ಲಿ ಎಂಐ ಇದೆ. ಡೆಲ್ಲಿ ಪಡೆ 4ನೇ ಸ್ಥಾನದಲ್ಲಿದೆ. ಪ್ಲೇಆಫ್​ಗೇರಲು ಜಿಜಿ, ಡಿಸಿ ಮತ್ತು ಎಂಐಗೆ ಚಾನ್ಸ್ ಇದೆ. ಲೀಗ್ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಕ್ವಾಲಿಫೈಯರ್ ಗೇಮ್ ಆಡೋದು ಯಾರು ಅನ್ನೋದು ಗೊತ್ತಾಗುತ್ತೆ. ಫೆಬ್ರವರಿ 3ಕ್ಕೆ ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಗೆದ್ದವ್ರು ಆರ್​ಸಿಬಿ ವಿರುದ್ಧ ಫೈನಲ್ ಆಡ್ತಾರೆ ಸೋತ್ರವು ಟೂರ್ನಿಯಿಂದ ಹೊರ ಬೀಳ್ತಾರೆ. ಒಟ್ನಲ್ಲಿ ಯಾರೇ ಫೈನಲ್​ಗೆ ಬಂದ್ರು ಬೇಟೆಯಾಗಿ ಕಪ್ ಗೆಲ್ತೇವೆ ಅನ್ನೋ ಕಾನ್ಫಿಡೆನ್ಸ್ ನಲ್ಲಿ ಬೆಂಗಳೂರು ಸಿಂಹಿಣಿಯರು ಇದ್ದಾರೆ. 2024ರ ಚಾಂಪಿಯನ್ಸ್ ಈಗ ಮತ್ತೆ 2ನೇ ಕಪ್ ಗೆಲ್ಲೋ ಫೆವರೆಟ್ ಟೀಂ ಆಗಿದ್ದಾರೆ.

Shantha Kumari