ಡಿವೋರ್ಸ್‌ ಆದ ಮಹಿಳೆ ಜೊತೆ ಲಿವ್‌-ಇನ್‌ನಲ್ಲಿದ್ದ.. ಈಗ ಬೇರೊಬ್ಬಳ ಜೊತೆ ಮದುವೆ! – ಕಾನ್‌ಸ್ಟೇಬಲ್‌ ಕಳ್ಳಾಟಕ್ಕೆ ಮಹಿಳೆ ಬಲಿ!

ಡಿವೋರ್ಸ್‌ ಆದ ಮಹಿಳೆ ಜೊತೆ ಲಿವ್‌-ಇನ್‌ನಲ್ಲಿದ್ದ.. ಈಗ ಬೇರೊಬ್ಬಳ ಜೊತೆ ಮದುವೆ! – ಕಾನ್‌ಸ್ಟೇಬಲ್‌ ಕಳ್ಳಾಟಕ್ಕೆ ಮಹಿಳೆ ಬಲಿ!

ಪ್ರೀತಿಯ ಹೆಸರಿನಲ್ಲಿ ಮೋಸ ಹೋಗುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಇಲ್ಲೊಂದು ಕಡೆ ಮಹಿಳೆಯೊಬ್ಬ ಜೊತೆ 4 ವರ್ಷ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಆಕೆಗೆ ಕೈ ಕೊಟ್ಟು ಬೇರೊಬ್ಬಳ ಹಿಂದೆ ಹೋಗಿದ್ದಾನೆ. ಇದ್ರಿಂದ ನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: ದೇಶದ ಜನರಿಗೆ ಗುಡ್‌ನ್ಯೂಸ್‌ ಕೊಟ್ಟ ಕೇಂದ್ರ ಸರ್ಕಾರ! – ಇನ್ಮುಂದೆ ಪಡಿತರ ಅಂಗಡಿಗಳಲ್ಲಿ ಸಿಗಲಿದೆ ಸೀಮೆಎಣ್ಣೆ!

ಈ ಘಟನೆ ಆಗ್ರಾದಲ್ಲಿ ನಡೆದಿದೆ. ಸಂತ್ರಸ್ತ ಮಹಿಳೆ ಉತ್ತರ ಪ್ರದೇಶದ ಕಾಸ್ಗಂಜ್ ಜಿಲ್ಲೆಯವರು. ಸಂತ್ರಸ್ತ ಮಹಿಳೆಗೆ ಈ ಮೊದಲೇ ಮದುವೆಯಾಗಿ ವಿಚ್ಛೇದವೋ ಆಗಿತ್ತು. ಬಳಿಕ ಆಗ್ರಾದಲ್ಲಿ ಖಾಸಗಿ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದಾಗ ತಾಜ್‌ಗಂಜ್ ಪೊಲೀಸ್ ಠಾಣೆಯ ಜೆ.ವಿ. ಗೌತಮ್ ಪರಿಚಯವಾಗಿ, ಪ್ರೀತಿಸಿದ್ದರು. ಕಳೆದ ನಾಲ್ಕು ವರ್ಷಗಳಿಂದ ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವ ಭರವಸೆ ನೀಡಿ ಆತ ನನ್ನನ್ನು ಹೆಂಡತಿಯಂತೆ ಇಟ್ಟುಕೊಂಡಿದ್ದ. ನಂತರ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಅವಧಿಯಲ್ಲಿ ತಾನು ದೈಹಿಕ ಮತ್ತು ಮಾನಸಿಕ ಶೋಷಣೆಗೆ ಒಳಗಾಗಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ. ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ, ಏನೂ ಮಾಡಲು ಸಾಧ್ಯವಿಲ್ಲ ಮತ್ತು ಕಾನ್‌ಸ್ಟೆಬಲ್ ಕ್ರಮದಿಂದ ಬಚಾವ್‌ ಆಗ್ತಾರೆ ಎಂದು ಹೇಳಲಾಗಿತ್ತು.

ಕಾನ್‌ಸ್ಟೆಬಲ್ ತನ್ನ ಕುಟುಂಬದವರು ತಮ್ಮ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಗೌತಮ್ ಮತ್ತು ಅವನ ಕುಟುಂಬವು ನನಗೆ ಹಿಂಸೆ ನೀಡಿದೆ. ಮಾನಸಿಕವಾಗಿ ತೊಂದರೆ ನೀಡಿದೆ. ನಾಲ್ಕು ವರ್ಷಗಳ ಕಾಲ ನನ್ನೊಂದಿಗೆ ವಾಸಿಸಿದ್ದ. ಅವನು ಈಗ ಇನ್ನೊಬ್ಬಳನ್ನು ಮದುವೆಯಾಗಲು ತಯಾರಿ ನಡೆಸುತ್ತಿದ್ದಾನೆ ಎಂದು ಆತ್ಮಹತ್ಯೆಗೂ ಮುನ್ನ ಮಹಿಳಾ ವಿಡಿಯೋ ಮಾಡಿಟ್ಟಿದ್ದಾರೆ.

ವಿಡಿಯೋದಲ್ಲಿ ಮಹಿಳೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿಕೊಂಡಿದ್ದು, ತಾನು ಬದುಕಿದ್ದಾಗ ನ್ಯಾಯ ಸಿಕ್ಕಿಲ್ಲ. ತನ್ನ ಮರಣದ ನಂತರ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ, ಕಾನ್‌ಸ್ಟೆಬಲ್ ಜೆ.ವಿ.ಗೌತಮ್ ಅವರನ್ನು ಅಮಾನತುಗೊಳಿಸಲಾಗಿದೆ.

Shwetha M

Leave a Reply

Your email address will not be published. Required fields are marked *