ಚಿರತೆ ಸೆರೆಗೆ ಬೋನಿನಲ್ಲಿ ಕೋಳಿ ಇರಿಸಿದ್ದ ಅರಣ್ಯಾಧಿಕಾರಿಗಳು – ಚಿಕನ್ ಆಸೆಗೆ ತಾನೇ ಲಾಕ್ ಆದ ಆಸಾಮಿ!

ಚಿರತೆ ಸೆರೆಗೆ ಬೋನಿನಲ್ಲಿ ಕೋಳಿ ಇರಿಸಿದ್ದ ಅರಣ್ಯಾಧಿಕಾರಿಗಳು – ಚಿಕನ್ ಆಸೆಗೆ ತಾನೇ ಲಾಕ್ ಆದ ಆಸಾಮಿ!

ಈಗಂತೂ ಕಾಡುಪ್ರಾಣಿಗಳು ನಾಡಿಗೆ ನುಗ್ಗೋದು ತೀರಾ ಸಾಮಾನ್ಯ ಎನ್ನುವಂತಾಗಿದೆ. ಹುಲಿ, ಚಿರತೆ, ಆನೆಗಳಂತೂ ಜನ್ರನ್ನೇ ಕೊಂದು ಹಾಕುತ್ತಿವೆ. ಲಕ್ನೋದಲ್ಲೂ ಕೂಡ ಚಿರತೆ ಹಾವಳಿ ಮಿತಿ ಮೀರಿದೆ. ಹೀಗಾಗಿ ಸೆರೆ ಹಿಡಿಯೋಕೆ ಅಂತಾ ಅರಣ್ಯಾಧಿಕಾರಿಗಳು ಬೋನ್ ಇರಿಸಿದ್ರು. ಆದ್ರೆ ಅಲ್ಲಿ ಬೋನಿಗೆ ಬಿದ್ದಿದ್ದು ಚಿರತೆಯಲ್ಲ. ಮನುಷ್ಯ.

ಇದನ್ನೂ ಓದಿ : ಎಡಗಾಲಿನ ಬದಲು ಬಲಗಾಲಿಗೆ ಆಪರೇಷನ್ ಮಾಡಿದ ವೈದ್ಯ – ಮಹಿಳೆ ಎಚ್ಚರವಾದಾಗ ಆಗಿದ್ದೇನು?

ಚಿರತೆ ಸೆರೆಗಾಗಿ ಇರಿಸಿದ್ದ ಬೋನಿನಲ್ಲಿ ವ್ಯಕ್ತಿಯೊಬ್ಬ ಲಾಕ್ ಆಗಿದ್ದಾನೆ. ಉತ್ತರ ಪ್ರದೇಶದ (Uttar Pradesh) ಬುಲಂದ್‍ಶಹರ್‌ನಲ್ಲಿ (Bulandshahr) ಚಿರತೆಯನ್ನು (Leopard) ಹಿಡಿಯಲು ಬೋನಿನಲ್ಲಿ ಕೋಳಿಯನ್ನ ಇರಿಸಲಾಗಿತ್ತು. ಆದ್ರೆ ಚಿರತೆ ಸೆರೆಗೆ ಇಟ್ಟಿದ್ದ ಕೋಳಿ ಮೇಲೆ ಈತನ ಕಣ್ಣು ಬಿದ್ದಿದೆ. ಹೀಗಾಗಿ ಕೋಳಿಯನ್ನ ತೆಗೆದುಕೊಂಡು ಹೋಗಿ ಮನೆಯಲ್ಲಿ ಮಸಾಲೆ ಅರೆಯೋಣ ಅಂತಾ ಕಳ್ಳತನಕ್ಕೆ ಹೋಗಿ ತಾನೇ ತಗ್ಲಾಕ್ಕೊಂಡಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದಿ ಅರಣ್ಯ ಇಲಾಖೆ ಅಧಿಕಾರಿಗಳು ತಕ್ಷಣ ಬಿಡುಗಡೆ ಮಾಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಬೋನ್ ಇರಿಸಿದ್ದ ಜಾಗಕ್ಕೆ ತೆರಳಿದಾಗ ಒಳಗೆ ಸಿಲುಕಿದ್ದ ವ್ಯಕ್ತಿಯನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಬೋನಿನಲ್ಲಿ ಸೆರೆಯಾದ ವ್ಯಕ್ತಿಯ ವೀಡಿಯೋ ವೈರಲ್ ಆಗಿದೆ. ಬೋನಿನ ಸರಳುಗಳನ್ನು ಹಿಡಿದುಕೊಂಡು ರಕ್ಷಿಸುವಂತೆ ಕೂಗಿಕೊಳ್ಳುತ್ತಿರುವ ದೃಶ್ಯದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬೋನು ಇರಿಸಿದ್ದ ಭಾಗದಲ್ಲಿ ಚಿರತೆ ಓಡಾಡುವುದರ ಬಗ್ಗೆ ಮಾಹಿತಿ ಬಂದಿತ್ತು. ಬೋನು ಇರಿಸುವ ಮೊದಲು ಚಿರತೆಗಾಗಿ ಸ್ವಲ್ಪ ಹುಡುಕಾಟ ನಡೆಸಿದ್ದೆವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

suddiyaana