ಹೆಂಡತಿ ಐಬ್ರೋ ಮಾಡಿಸಿದ್ಳು! – ವಿಡಿಯೋ ಕಾಲ್‌ನಲ್ಲೇ ತಲಾಕ್ ನೀಡಿದ ಪತಿ!
ಗಂಡ ಹೆಂಡತಿ ನಡುವೆ ಮನಸ್ತಾಪ ಹುಟ್ಟಿಕೊಳ್ಳು ಇಂತದ್ದೇ ಕಾರಣ ಬೇಕು ಅಂತೆನೀಲ್ಲ. ಕೆಲವರು ಸಣ್ಣ ಪುಟ್ಟ ವಿಚಾರಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಈ ಮುನಿಸು ತಾರಕಕ್ಕೇರಿ ದೊಡ್ಡ ಅವಾಂತವೇ ನಡೆದುಹೋಗುತ್ತದೆ. ಕೊನೆಗೆ ಈಗ ಜಗಳ ವಿಚ್ಚೇದನ ಕೊಡುವ ಮಟ್ಟಕ್ಕೆ ಹೋಗುತ್ತದೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದೆ. ಪತ್ನಿ ಅನುಮತಿ ಕೇಳದೆ ಐಬ್ರೋ ಮಾಡಿಸಿಕೊಂಡಿದ್ದಾಳೆ ಎಂದು ಪತಿರಾಯ ಕೋಪಗೊಂಡಿದ್ದಾನೆ. ಬಳಿಕ ಆಕೆಗೆ ವಿಡಿಯೋ ಕಾಲ್‌ನಲ್ಲೇ ತಲಾಖ್ ನೀಡಿದ್ದಾನೆ.
ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪತ್ನಿ ಪಾರ್ಲರ್‌ಗೆ ಹೋಗಿ ಬಂದ ಬಳಿಕ ಆಕೆ ತನ್ನ ಗಂಡನಿಗೆ ಫೋನ್ ಮಾಡಿದ್ದಾಳೆ. ಈ ವೇಳೆ ಆಕೆ ಐಬ್ರೋ ಮಾಡಿರುವ ವಿಚಾರ ಗೊತ್ತಾಗಿದೆ. ಇದರಿಂದ ಸಿಟ್ಟಿಗೆದ್ದ ಆತ ಆಕೆಗೆ ಮೂರು ಬಾರಿ ನಿಷೇಧಿತ ತಲಾಖ್ ಹೇಳಿದ್ದಾನೆ. ಇದೀಗ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಪ್ರಯಾಗ್‌ರಾಜ್ ನಿವಾಸಿಯಾಗಿರುವ ಮಹಮ್ಮದ್ ಸಲೀಂ ಸದ್ಯ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಆತನ ಪತ್ನಿ ಗುಲ್ಸಾಬಾ ಕಾನ್ಪುರದಲ್ಲಿ ವಾಸವಿದ್ದಾಳೆ. ಹೀಗಿರುವಾಗ ಗುಲ್ಸಾಬಾ ಜತೆ ಸಲೀಂ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆ ಐಬ್ರೋ ಮಾಡಿಸಿದ್ದನ್ನು ನೋಡಿದ್ದಾನೆ. ನನ್ನ ಅನುಮತಿ ಇಲ್ಲದೇ ಐಬ್ರೋ ಮಾಡಿಸಿಕೊಂಡೆ ಏಕೆ ಎಂದು ಕೋಪಗೊಂಡ ಸಲೀಂ, ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ತಲಾಖ್ ನೀಡಿದ್ದಾನೆ. ಬಳಿಕ, ಇನ್ನು ನೀನು ಸ್ವತಂತ್ರಳು, ಏನು ಬೇಕಾದರೂ ಮಾಡಿಕೋ ಎಂದು ಹೇಳಿದ್ದಾನೆ.
ಅಕ್ಟೋಬರ್ 4 ರಂದು ಘಟನೆ ಘಟನೆ ನಡೆದಿದ್ದು, ಗುಲ್ಸಾಯಿಬಾ ಪೊಲೀಸರಿಗೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ. ತನ್ನ ಅತ್ತೆಯಂದಿರಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಸ್ಲಿಂ ವಿವಾಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಬಾ.. ಔಟಿಂಗ್ ಹೋಗೋಣ ಅಂದ್ದಿದ್ದಕ್ಕೆ ಒಲ್ಲೆ ಎಂದ ಪ್ರೇಯಸಿ.. – ಸಿಟ್ಟಿಗೆದ್ದ ಪಾಗಲ್ ಪ್ರೇಮಿ ಮಾಡಿದ್ದೇನು ಗೊತ್ತಾ?
ಗುಲ್ಸಾಯಿಬಾ ಅವರು ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಆಕೆಯ ಪತಿ ಆಗಸ್ಟ್ 30, 2023 ರಂದು ಸೌದಿ ಅರೇಬಿಯಾಕ್ಕೆ ತೆರಳಿದ್ದರು ಮತ್ತು ಆಕೆಯ ಅತ್ತೆಯಂದಿರು ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದರು. ತನ್ನ ಪತಿ ಓಲ್ಡ್ ಜನರೇಷನ್ ಆಗಿದ್ದು, ನನ್ನ ಹೊಸ ಫ್ಯಾಷನ್ ಆಯ್ಕೆಗಳ ಬಗ್ಗೆ ಆಗಾಗ ಆಕ್ಷೇಪಣೆಗಳನ್ನು ಎತ್ತುತ್ತಿದ್ದನು ಎಂದು ಗುಲ್ಸಾಯಿಬಾ ಪೊಲೀಸರಿಗೆ ವಿವರಿಸಿದ್ದಾರೆ.
ಮಹಿಳೆಯ ದೂರಿನ ಆಧಾರದ ಮೇಲೆ, ಪೊಲೀಸರು ಮುಸ್ಲಿಂ ವಿವಾಹ ಕಾಯ್ದೆಯಡಿ ತ್ವರಿತ ವಿಚ್ಛೇದನ ಮತ್ತು ವರದಕ್ಷಿಣೆ ಕಿರುಕುಳ ನೀಡಿದ್ದಕ್ಕಾಗಿ ದೂರನ್ನು ದಾಖಲಿಸಿಕೊಂಡಿದ್ದಾರೆ. ಆಕೆಯ ಪತಿ ಸಲೀಂ ಮತ್ತು ಆಕೆಯ ಅತ್ತೆ ಸೇರಿದಂತೆ ಇತರ ಐದು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.