ರಾತ್ರಿಯಾದ್ರೆ ನನ್ನ ಹೆಂಡ್ತಿ ನಾಗಿಣಿಯಾಗ್ತಾಳೆ! – ಪೊಲೀಸರಿಗೆ ದೂರು ನೀಡಿದವನಿಗೆ ಕಾದಿತ್ತು ಬಿಗ್ ಶಾಕ್!

ರಾತ್ರಿಯಾದ್ರೆ ಸಾಕು.. ನನ್ ಹೆಂಡ್ತಿ ನಾಗಿಣಿಯಾಗಿ ಬದಲಾಗ್ತಾಳೆ.. ನಿದ್ದೆ ಮಾಡಲು ಬಿಡ್ತಿಲ್ಲ ಎಂದು ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಡಿಸಿಗೆ ದೂರು ನೀಡಿದ್ದ. ದೂರು ನೀಡ್ತಿದ್ದಂತೆ ಪೊಲೀಸರು ತನಿಖೆ ನಡೆಸಿದ್ದು, ನಾಗಿಣಿ ಅಸಲಿ ವಿಚಾರ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಟಾಸ್ಕ್ ವೇಳೆಯೂ ರಾಶಿಕಾ-ಸೂರಜ್ ಪ್ರೇಮಗೀತೆ – ಕಿಚ್ಚನ ಮಾತಿಗೂ ಡೋಂಟ್‌ಕೇರ್!
ಅಷ್ಟಕ್ಕೂ ಆಗಿದ್ದೇನು?
ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದ ಪ್ರಕರಣವೊಂದು ಚರ್ಚೆಗೆ ಗ್ರಾಸವಾಗಿದೆ. ಮಹ್ಮದಾಬಾದ್ ತಹಸಿಲ್‌ನ ಲೋಧಾಸಾ ಗ್ರಾಮದ ಮೆರಾಜ್ ಎಂಬಾತ ಪತ್ನಿ ರಾತ್ರಿಯಲ್ಲಿ ಸರ್ಪವಾಗಿ ಬದಲಾಗ್ತಾಳೆ. ಸರ್ಪ”ದಂತೆ ಸಿಳ್ಳೆ ಹೊಡೆಯುತ್ತಾಳೆ, ನಾಗರನಂತೆ ವರ್ತಿಸುತ್ತಾಳೆ.. ಹೆದರಿಸುತ್ತಾಳೆ, ನಿದ್ರಿಸದಂತೆ ತಡೆಯುತ್ತಾಳೆ.. ಈ ಬಗ್ಗೆ ಕ್ರಮ ತೆಗೆದುಕೊಳ್ಳಿ, ನನ್ನ ಪತ್ನಿಯಿಂದ ನನ್ನನ್ನು ಕಾಪಾಡಿ ಎಂದು ದೂರು ಕೊಟ್ಟಿದ್ದ. ಈ ದೂರನ್ನು ಕೇಳಿದ ಪೊಲೀಸರು ಶಾಕ್ ಆಗಿದ್ದರು. ಮಾಧ್ಯಮಗಳ ಎದುರು ಕೂಡ ಪತಿ ಇದೇ ವಾದವನ್ನು ಮುಂದಿಟ್ಟಿದ್ದಾನೆ. ಇದನ್ನು ಕೇಳಿದ ಪೊಲೀಸರು ತನಿಖೆಗೆ ನಡೆಸಿದ್ದು, ದೂರು ನೀಡಿದವ ನಿಜ ಬಣ್ಣ ಬಯಲಾಗಿದೆ.
ತನಿಖೆ ವೇಳೆ ಆತನ ಪತ್ನಿಯನ್ನ ಪೊಲೀಸರು ವಿಚಾರಿಸಿದ್ದಾರೆ. ಪೊಲೀಸರು, ಪತ್ನಿಯನ್ನು ವಿಚಾರಿಸಿದಾಗ ಅಕೆ, ತನ್ನ ಪತಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದಾಳೆ. ತನಿಖೆ ವೇಳೆ ಕೂಡ ಕೆಲವು ದಿನಗಳಿಂದ ದಂಪತಿ ನಡುವೆ ಪದೇ ಪದೇ ಜಗಳ ನಡೆಯುತ್ತಿದೆ. ಪತ್ನಿಯನ್ನು ಹೆದರಿಸಲು ಮೆರಾಜ್, ತಾನು ಬೇರೆ ಮದುವೆಯಾಗುವುದಾಗಿ ಹೆದರಿಸುತ್ತಿದ್ದ. ದುಡ್ಡಿಗಾಗಿ ಪೀಡಿಸುತ್ತಿದ್ದ. ಅವಳು ಎಲ್ಲಿ ದೂರು ದಾಖಲು ಮಾಡುತ್ತಾಳೆಯೋ ಎಂದು ಮೊದಲೇ ಪತ್ನಿಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದ. ಆದರೆ ಅದನ್ನು ಪೊಲೀಸರು ಪರಿಗಣಿಸಿರಲಿಲ್ಲ. ಆದ್ದರಿಂದ ಪೊಲೀಸರು ಏನು ಮಾಡಿದರೂ ತನ್ನ ದೂರಿನ ಬಗ್ಗೆ ವಿಚಾರಣೆ ನಡೆಸುತ್ತಿಲ್ಲ ಎಂದು ಹಾವಿನ ಕಟ್ಟುಕಥೆ ಹೇಳಿರುವುದು ಬೆಳಕಿಗೆ ಬಂದಿದೆ.
ಇದೀಗ ಸಿರಾಜ್ ವಿರುದ್ಧವೇ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸುಳ್ಳು ಕಥೆಯನ್ನು ಹೆಣೆದು ಪೊಲೀಸರು ಮತ್ತು ಆಡಳಿತದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಮೆರಾಜ್ ವಿರುದ್ಧ ಮೊಕದ್ದಮೆ ಹೂಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಡಿರಿ

