ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ, ರಜೆ ಕೊಡಿ ಸಾರ್…
ಕಂಪನಿಗಳಲ್ಲಿ ರಜೆ ಪಡೆಯಲು ದೊಡ್ಡ ಸಾಹಸವೇ ಮಾಡಬೇಕಾಗುತ್ತದೆ. ಕೆಲ ಸಮಯದಲ್ಲಿ ಉದ್ಯೋಗಿಗಳು ರಜೆ ಪಡೆಯಲು ಪಡುವ ಪಾಡು ಅಷ್ಟಿಷ್ಟಲ್ಲ. ಇನ್ನೂ ಪೊಲೀಸರ ಕತೆ ಕೇಳಬೇಕೇ? ಅವರಿಗೆ ಎಂತಹ ಪರಿಸ್ಥಿತಿಗಳಿದ್ದರೂ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಹೊಸದಾಗಿ ಮದುವೆ ಆದವರು ಕೂಡ ಕೆಲವೊಮ್ಮೆ ಆದಷ್ಟು ಬೇಗ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಇದೇ ಸಮಸ್ಯೆಯಿಂದ ತೊಂದರೆಗೀಡಾದ ಪೊಲೀಸ್ ಕಾನ್ ಸ್ಟೇಬಲ್ ರಜೆ ಕೋರಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಕಿಟಕಿಯಿಂದ ಚಲಿಸುತ್ತಿರುವ ಬಸ್ ಹತ್ತಿದ ಯುವತಿ – ಸೀಟಿಗಾಗಿ ಈ ಸಾಹಸ ಬೇಕಾ?
ಉತ್ತರ ಪ್ರದೇಶದ ನಿವಾಸಿಯಾದ ಈ ಪೇದೆ, ಇಂಡೋ – ನೇಪಾಳ ಗಡಿಯಲ್ಲಿ ಕೆಲಸ ಮಾಡುವ PRB ಯಲ್ಲಿ ನಿಯೋಜಿಸಲ್ಪಟ್ಟಿದ್ದಾರೆ. ತನ್ನ ಹೆಂಡತಿ ಕೋಪ ಮಾಡಿಕೊಂಡಿದ್ದಾಳೆ. ಸಮಾಧಾನ ಮಾಡಬೇಕು ಎಂದು ಪತ್ರ ಬರೆದಿದ್ದಾರೆ.
‘ನಾನು ಕೇಲವ ಒಂದು ತಿಂಗಳ ಹಿಂದೆ ಮದುವೆಯಾಗಿದ್ದೇನೆ. ಅಂದಿನಿಂದ ನಿರಂತರವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದೇನೆ. ನನಗೆ ರಜೆ ಸಿಗದ ಕಾರಣ ಪತ್ನಿ ನನ್ನ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಫೋನ್ ಮಾಡಿದರೆ ನನ್ನ ಕರೆ ಸ್ವೀಕರಿಸುತ್ತಿಲ್ಲ. ಎಷ್ಟು ಬಾರಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ. ಆಕೆಯನ್ನು ಸಮಾಧಾನ ಮಾಡಬೇಕು. ಅದಕೋಸ್ಕರ ರಜೆ ನೀಡಿ’ ಎಂದು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಪೇದೆಯ ಪತ್ರವನ್ನು ಸ್ವೀಕರಿಸಿದ ಎಸ್ ಪಿ ಅತಿಶ್ ಕುಮಾರ್ ಸಿಂಗ್ 5 ದಿನಗಳ ಕಾಲ ರಜೆ ನೀಡಿದ್ದಾರೆ.