ವೇದಿಕೆ ಮೇಲೆಯೇ ನಾಲ್ಕೈದು ಸಲ ಗುಂಡು ಹಾರಿಸಿದ ವಧು – ವರ ಕಂಗಾಲು.. ಮದುವೆ ಮನೆಯಲ್ಲಿ ಆಗಿದ್ದೇನು?

ವೇದಿಕೆ ಮೇಲೆಯೇ ನಾಲ್ಕೈದು ಸಲ ಗುಂಡು ಹಾರಿಸಿದ ವಧು – ವರ ಕಂಗಾಲು.. ಮದುವೆ ಮನೆಯಲ್ಲಿ ಆಗಿದ್ದೇನು?

ಅಲ್ಲಿ ಧಾಂ ಧೂಂ ಅಂತಾ ಮದುವೆ ನಡೆಯುತ್ತಿತ್ತು. ವಧು ವರ ಇಬ್ಬರು ಭರ್ಜರಿಯಾಗಿ ಅಲಂಕಾರ ಮಾಡಿಕೊಂಡು ವೇದಿಕೆ ಮೇಲೆ ಕುಳಿತಿದ್ರು. ಬಂಧು ಬಳಗ, ಸ್ನೇಹಿತರು, ಸಂಬಂಧಿಗಳು ಅಂತಾ ಸಾವಿರಾರು ಜನ ಮದುವೆಗೆ ಸಾಕ್ಷಿಯಾಗಿದ್ರು. ಇದೇ ವೇಳೆ ಮದುವೆ ಮನೆಯಲ್ಲೇ ನಾಲ್ಕೈದು ಬಾರಿ ಗುಂಡು ಹಾರಿದ ಸದ್ದು ಕೇಳಿತ್ತು. ಇಡೀ ಕಲ್ಯಾಣ ಮಂಟಪ ಒಂದು ಕ್ಷಣ ದಂಗಾಗಿತ್ತು. ಅಯ್ಯಯ್ಯೋ ಅನಾಹುತ ನಡೆದೋಯ್ತು ಅಂತಾ ಎಲ್ಲರೂ ವೇದಿಕೆಯತ್ತ ದೌಡಾಯಿಸಿ ಬಂದಿದ್ರು. ಹೀಗೆ ಬಂದವರೆಲ್ಲಾ ಆತಂಕಗೊಂಡಿದ್ರು. ಯಾಕಂದ್ರೆ ವಧುವಿನ ಕೈಯಲ್ಲಿ ರಿವಾಲ್ವರ್ ಇತ್ತು.

ಅರೆ ಮದುವೆ ಮನೆಯಲ್ಲಿ ವಧು ಫೈರಿಂಗ್ ಮಾಡಿದ್ಲಾ? ಹಾಗಾದ್ರೆ ಏನೋ ಅನಾಹುತ ನಡೆದಿದೆ ಅಂತಾ ನೀವು ಗಾಬರಿಯಾಗಬಹುದು. ಹೌದು ವಧುವಿನ ಕೈಯಲ್ಲಿ ರಿವಾಲ್ವರ್ ಇದ್ದಿದ್ದು ನಿಜ, ಫೈರಿಂಗ್ ನಡೆದಿದ್ದೂ ನಿಜ. ಆದರೆ ಅದು ಜಸ್ಟ್ ಬಿಲ್ಡಪ್​ಗಾಗಿ. ಉತ್ತರ ಪ್ರದೇಶದ (Uttar Pradesh) ಹತ್ರಾಸ್‌ನಲ್ಲಿ (Hathras) ವೇದಿಕೆಯ ಮೇಲಿದ್ದ ವಧು ರಿವಾಲ್ವರ್‌ನಿಂದ ಐದು ಸೆಕೆಂಡ್‌ಗಳಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದಾಳೆ. ವ್ಯಕ್ತಿಯೊಬ್ಬ ವಧುವಿಗೆ ಲೋಡ್ ಮಾಡಿದ ರಿವಾಲ್ವರ್​​ನ್ನು ಕೊಟ್ಟಿದ್ದಾನೆ. ವರನ ಜತೆ ವೇದಿಕೆಯಲ್ಲಿ ಕುಳಿತಿದ್ದ ವಧು ಮೇಲೆ ನೋಡಿ ನಾಲ್ಕು ಬಾರಿ ಗನ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಅಲ್ಲಿ ಏನು ನಡೆಯಿತು ಎಂಬುದನ್ನು ತಿಳಿಯದಂತೆ ವರ ದಿಗ್ಭ್ರಮೆಗೊಂಡಿದ್ದಾನೆ. ನಂತರ ವಧು ರಿವಾಲ್ವರ್ ಅನ್ನು ಆ ವ್ಯಕ್ತಿಗೆ ಹಿಂತಿರುಗಿಸಿದ್ದಾಳೆ. ಕಳೆದ ಶುಕ್ರವಾರ ರಾತ್ರಿ ಹತ್ರಾಸ್ ಜಂಕ್ಷನ್ ಪ್ರದೇಶದ ಸೇಲಂಪುರ ಗ್ರಾಮದ ಅತಿಥಿ ಗೃಹದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಇಂಥಾದ್ದೊಂದು ಘಟನೆ ನಡೆದಿದೆ.

ಇದನ್ನೂ ಓದಿ : ಈ ಮೊಟ್ಟೆ ತಿಂದ್ರೆ ಆಯಸ್ಸು ಹೆಚ್ಚಾಗುತ್ತೆ? – ಬ್ಲಾಕ್ ಎಗ್ ಬಗ್ಗೆ ನಿಮ್ಗೆ ಗೊತ್ತಾ?

ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ವಧುವಿನ ಕುಟುಂಬದವರು ಎಂದು ಕಪ್ಪು ಶರ್ಟ್‌ ಧರಿಸಿದ ವ್ಯಕ್ತಿಯೊಬ್ಬ ವೇದಿಕೆ ಮೇಲೆ ಹತ್ತಿ ವಧುವಿನ ಬಳಿ ನಿಂತಿದ್ದಾನೆ. ಸ್ವಲ್ಪ ಹೊತ್ತು ಅಲ್ಲಿಯೇ ನಿಂತಿದ್ದ ಆತ ಸೊಂಟದಿಂದ ಬಂದೂಕು ಹೊರತೆಗೆದು ಆಕೆಯ ಕೈಗೆ ಕೊಟ್ಟಿದ್ದಾನೆ. ಸಮಾರಂಭದ ನಂತರ ಗುಂಡು ಹಾರಿಸಲಾಗಿದೆ. ವಿಡಿಯೋ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಾಗುವುದು ಎಂದು ಹತ್ರಾಸ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಅಶೋಕ್ ಕುಮಾರ್ ಸಿಂಗ್ ಹೇಳಿದ್ದಾರೆ.

ವಿವಾಹ ಸಂಭ್ರಮಾಚರಣೆಯಲ್ಲಿ ಗುಂಡು ಹಾರಿಸುವುದು ಉತ್ತರ ಭಾರತದಲ್ಲಿ ಸಾಮಾನ್ಯವಾಗಿದ್ದರೂ, ಇದರಿಂದಾಗಿ ಸಾವು, ನೋವುಗಳು ಸಂಭವಿಸುವುದರಿಂದ ಇದಕ್ಕೆ ಕಾನೂನಿನ ನಿಷೇಧವಿದೆ. ಸಾರ್ವಜನಿಕ ಸಭೆಗಳು, ಧಾರ್ಮಿಕ ಸ್ಥಳಗಳು, ಮದುವೆ ಅಥವಾ ಇತರ ಕಾರ್ಯಕ್ರಮಗಳಲ್ಲಿ ಪರವಾನಗಿ ಪಡೆದ ಬಂದೂಕುಗಳಿಂದ ಸಂಭ್ರಮಾಚರಣೆಗಾಗಿ ಗುಂಡು ಹಾರಿಸಿದರೆ ಎರಡು ವರ್ಷಗಳ ಜೈಲು ಶಿಕ್ಷೆ ಅಥವಾ ₹ 1 ಲಕ್ಷ ದಂಡ ಅಥವಾ ಎರಡನ್ನೂ ವಿಧಿಸುವ ಕ್ರಿಮಿನಲ್ ಅಪರಾಧವನ್ನಾಗಿ ಮಾಡಲು ಕೇಂದ್ರವು ಡಿಸೆಂಬರ್ 2019 ರಲ್ಲಿ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿ ತಂದಿದೆ. ಯಾರಿಗೂ ಗಾಯವಾಗದಿದ್ದರೂ ಪ್ರಕರಣ ದಾಖಲಿಸಬಹುದು.

suddiyaana