ಎದೆಯ ಮೇಲೆ ಡಿಜಿಟಲ್​ ಬೋರ್ಡ್! – ಉರ್ಫಿ ಮಾನ ಮುಚ್ಚಲು ಎಲ್ಇಡಿ ಡಿಸ್‌ಪ್ಲೇ ಬೇಕಾಯ್ತಾ?

ಎದೆಯ ಮೇಲೆ ಡಿಜಿಟಲ್​ ಬೋರ್ಡ್! – ಉರ್ಫಿ ಮಾನ ಮುಚ್ಚಲು ಎಲ್ಇಡಿ ಡಿಸ್‌ಪ್ಲೇ ಬೇಕಾಯ್ತಾ?

ನಟಿ, ಮಾಡೆಲ್ ಉರ್ಫಿ ಜಾವೇದ್‌ ಚಿತ್ರ, ವಿಚಿತ್ರ ಡ್ರೆಸ್‌ಗಳನ್ನು ಧರಿಸಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಗೈ ಅಗಲದ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸುತ್ತಾರೆ. ಇದೀಗ ಬಿಚ್ಚಮ್ಮ ಮತ್ತೊಂದು ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಬಿಚ್ಚಮ್ಮ ಬಸ್​, ಮಳಿಗೆಗಳಿಗೆ ಅಳವಡಿಸಿ ಡಿಜಿಟಲ್​ ನಾಮಫಲಕವನ್ನು ಎದೆಗೆ ಅಳವಡಿಸಿಕೊಂಡು ಹೋಗಿದ್ದಾರೆ. ಉರ್ಫಿ ಹೊಸ ಅವತಾರ ಕಂಡು ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಇಂಡಿಯಾ ಮತ್ತು ಬಾಂಗ್ಲಾ ಸರಣಿಗೆ ಬ್ರಹ್ಮಾಸ್ತ್ರ – ಶಮಿ & ಬುಮ್ರಾ ಕಮ್‌ ಬ್ಯಾಕ್‌ ಫಿಕ್ಸ್‌

ಉರ್ಫಿ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳೋದು ಹೊಸತೇನಲ್ಲ. ಇದೀಗ ಬಸ್​, ಮಳಿಗೆಗಳಿಗೆ ಅಳವಡಿಸಿ ಡಿಜಿಟಲ್​ ನಾಮಫಲಕವನ್ನು ಎದೆಗೆ ಅಳವಡಿಸಿಕೊಂಡು ಹೋಗಿದ್ದಾರೆ. ಇದನ್ನು ನೋಡಿ, ನಿಮ್ಮದು ನೋಡಿದ್ರೆ ತಿಳಿಯುತ್ತದೆ, ಇನ್ನು ಫ್ಲ್ಯಾಟ್ ಚೆಸ್ಟ್​ ಎಂದು ನೀವು ಹೇಳುವುದು ಏಕೆ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಉರ್ಫಿ ಮಾನ ಮುಚ್ಚಲು ಎಲ್‌ಇಡಿ ಡಿಸ್‌ ಪ್ಲೇ ಬೇಕಾಯ್ತಾ ಅಂತಾ ಕೇಳ್ತಾ ಇದ್ದಾರೆ.

ಕೆಲದಿನಗಳ ಹಿಂದೆ ಮೈಮೇಲಿಂದಲೇ ಉದುರುವ ಹೂವು-ಎಲೆ ಹಾರಾಡುವ ಚಿಟ್ಟೆಗಳ ಬಟ್ಟೆ ತೊಟ್ಟು ಅಭಿಮಾನಿಗಳ ಹುಬ್ಬೇರಿಸಿದ್ದರು.  ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು,  ಇಂಥ ಐಡಿಯಾ ಬೇರೆ ಯಾರಿಗೂ ಹೊಳೆಯಲು ಸಾಧ್ಯವೇ ಇಲ್ಲ ಬಿಡಿ ಎಂದು ಉರ್ಫಿ ಅಭಿಮಾನಿಗಳು ದೊಡ್ಡ ನಮಸ್ಕಾರ ಹಾಕಿದ್ದರು.  ಇದಕ್ಕೂ ಮುಂಚೆ ಯೂನಿವರ್ಸ್-ಪ್ರೇರಿತ ಉಡುಗೆ ತೊಟ್ಟು ಪೋಸ್‌ ಕೊಟ್ಟಿದ್ದರು. ಉಡುಪಿನೊಳಗೇ ಬ್ರಹ್ಮಾಂಡ ತೋರಿಸಿದ್ದರು ನಟಿ ಉರ್ಫಿ. ಉರ್ಫಿ ಅವರನ್ನು ಆಧುನಿಕ ಶ್ರೀಕೃಷ್ಣ ಎನ್ನುತ್ತಿದ್ದರು ಫ್ಯಾನ್ಸ್​. ತಮ್ಮ ಸ್ಕರ್ಟ್‌ನಲ್ಲಿ ಬ್ರಹ್ಮಾಂಡ ತಿರುಗುವ ರೀತಿಯಲ್ಲಿ ತೋರಿಸಿದ್ದರು. ಇಡೀ ಗ್ರಹಗಳನ್ನು ಸ್ಕರ್ಟ್‌ನಲ್ಲಿ ನೋಡಬಹುದಾಗಿತ್ತು. ʻಕೆಲವರು ಶ್ರೀಕೃಷ್ಣ ಪರಮಾತ್ಮ ಬಾಯಲ್ಲಿ ಬ್ರಹ್ಮಾಂಡ ತೋರಿದರೆ, ನೀವು ಉಡುಪಿನೊಳಗೇ ಬ್ರಹ್ಮಾಂಡ ತೋರಿದ್ದೀರಿ, ಆಧುನಿಕ ಕೃಷ್ಣ ನೀವುʼ ಎನ್ನುತ್ತಿದ್ದರು.

Shwetha M

Leave a Reply

Your email address will not be published. Required fields are marked *