ಅರೆ ಬರೆ ಬಟ್ಟೆ, ಡಿಫ್ರೆಂಟ್ ದಿರಿಸಿನಲ್ಲಿ ಕಾಣಿಸಿಕೊಳ್ತಿದ್ದ ಉರ್ಫಿ ಕುತ್ತಿಗೆಗೆ ಏನಾಯ್ತು – ಅಯ್ಯೋ ಪಾಪ ಎಂದಿದ್ದೇಕೆ ನೆಟ್ಟಿಗರು..?

ಅರೆ ಬರೆ ಬಟ್ಟೆ, ಡಿಫ್ರೆಂಟ್ ದಿರಿಸಿನಲ್ಲಿ ಕಾಣಿಸಿಕೊಳ್ತಿದ್ದ ಉರ್ಫಿ ಕುತ್ತಿಗೆಗೆ ಏನಾಯ್ತು – ಅಯ್ಯೋ ಪಾಪ ಎಂದಿದ್ದೇಕೆ ನೆಟ್ಟಿಗರು..?

ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಉರ್ಫಿ ಜಾವೇದ್ ಯಾರು ಅಂತಾ ಗೊತ್ತೇ ಇರುತ್ತೆ ಬಿಡಿ. ಚಿತ್ರ ವಿಚಿತ್ರ ಬಟ್ಟೆ ಹಾಕಿಕೊಂಡು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿಗೆ ಉರ್ಫಿಯೇ ಸಾಟಿ. ಟ್ರೋಲ್ ಗಳ ಮೂಲಕವೇ ಬಾಲಿವುಡ್‌ ನಟಿಯರಿಗಿಂತಲೂ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ತನ್ನ ಚಿತ್ರ ವಿಚಿತ್ರ ಫ್ಯಾಷನ್ ಸ್ಟೇಟ್‌ಮೆಂಟ್‌ನಿಂದಾಗಿ ಸದಾ ಇಂಟರ್‌ನೆಟ್‌ನಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿರುವ ಈ ಉರ್ಫಿಗೀಗ ಕತ್ತು ಉಳುಕಿದೆ.

ಇದನ್ನೂ ಓದಿ : ಬಾಳೆಹಣ್ಣಿನ ಸಿಪ್ಪೆಯಲ್ಲಿ ಮೈಮುಚ್ಚಿಕೊಂಡ ಉರ್ಫಿ! – ಪಡ್ಡೆಹುಡುಗರ ನಿದ್ದೆಗೆಡೆಸಿದ ಬಿಚ್ಚಮ್ಮಳ ಅವತಾರ!

ಬಟ್ಟೆ ಹಾಕಿಕೊಂಡು ಜನರ ಗಮನ ಸೆಳೆಯುತ್ತಿದ್ದ ಉರ್ಫಿ ಈಗ ಕತ್ತಿಗೆ ಪಟ್ಟಿ ಹಾಕಿಕೊಂಡು ಓಡಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಪಪಾರಾಜಿ ವೈರಲ್‌ ಭಯಾನಿ ವಿಡಿಯೋ ಪೋಸ್ಟ್ ಮಾಡಿದ್ದು ಬೇಗ ಗುಣಮುಖರಾಗುವಂತೆ ವಿಶ್ ಮಾಡಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಸುಮ್ಮನೇ ಕೂತಿಲ್ಲ, ಆಕೆಗೆ ಇದೂ ಕೂಡ ಏನಾದ್ರೂ ಫ್ಯಾಷನ್ನೋ ಹೇಗೆ ಅಂತ ಆಕೆಯನ್ನು ಆಕೆಯನ್ನ ಕೆಣಕಿದ್ದಾರೆ. ಆದರೆ ಉರ್ಫಿ ಜಿಮ್‌ಗೆ ಧರಿಸುವ ಧಿರಿಸಿನಲ್ಲಿ ಕತ್ತಿಗೆ ಪಟ್ಟಿಯೊಂದನ್ನು ಹಾಕಿಕೊಂಡು ಕಾಣ ಸಿಕ್ಕಿದ್ದು, ಇದನ್ನು ನೋಡಿದ ಕೆಲವರು ಈಕೆಗೆ ಕತ್ತು ಉಳುಕಿದ್ರು ಜಿಮ್ ಮಾಡ್ಬೇಕಾ, ಇದ್ರಲ್ಲೇ ಈಕೆ ದೊಡ್ಡ ಫೇಕ್ ಅಂತ ಗೊತ್ತಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈಕೆಯನ್ನು ಸಾಮಾನ್ಯವೆನಿಸುವ ಧಿರಿಸಿನಲ್ಲಿ ಇವತ್ತೇ ನೋಡಿದ್ದು, ಅಂತ ಕಾಮೆಂಟ್ ಮಾಡಿದ್ದಾರೆ.

ಹೀಗೆ ಕತ್ತು ಉಳುಕಿದ ರೀತಿ ಓಡಾಡ್ತಿದ್ದ ಉರ್ಫಿ ಎರಡೇ ದಿನಕ್ಕೆ ನವರಾತ್ರಿಯ ಧಿರಿಸು ಅಂತ ಸಂಪ್ರದಾಯಿಕ ಉದ್ದ ಲಂಗ ಹಾಗೂ ಭುಜ ಹಾಗೂ ಕೈಗಳಿಲ್ಲದ ಮೇಲ್ದಿರಿಸನ್ನು ತೊಟ್ಟು ತಲೆಗೊಂದು ಶಾಲನ್ನು ಸುತ್ತಿಕೊಂಡು ದೇವ ಕನ್ನಿಕೆಯಂತೆ ಕಾಣಿಸಿಕೊಂಡಿದ್ದಾಳೆ. ಏರ್‌ಪೋರ್ಟ್‌ನಲ್ಲಿ ಈ ಅವತಾರದಲ್ಲಿ ಈಕೆಯನ್ನು ನೋಡಿದ ಜನ ಮತ್ತೆ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಈಕೆ ನಿಜವಾಗಿಯೂ ದಿನ ಎಲ್ಲಾದರೂ ಹೋಗುತ್ತಾಳೋ ಅಥವಾ ಫ್ಯಾಷನ್‌ ಶೋ ಮಾಡುವುದಕ್ಕೆಯೇ ಏರ್‌ಪೋರ್ಟ್‌ಗೆ ಬರುತ್ತಾಳೋ, ಯಾರಾದರೂ ಈ ಅವತಾರದಲ್ಲಿ ಹೋಗುತ್ತಾರೆಯೇ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಒಬ್ಬರು ಇಲ್ಲ ಆಕೆ ಫೋಟೋಗಾಗಿಯೇ ಬರುವುದು ಎಂದು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋವನ್ನು ಕೂಡ ವೈರಲ್ ಭಯಾನಿ ಶೇರ್ ಮಾಡಿದ್ದು,  ಸದಾ ಆಕೆಯ ಧಿರಿಸಿನ ಕಾರಣಕ್ಕೆ ಆಕೆಯನ್ನು ಬೈಯುತ್ತಿದ್ದ ಕಾಮೆಂಟಿಗರು, ಇಂದು ಆಕೆಯ ಡ್ರೆಸ್ ಬಹಳ ಚೆನ್ನಾಗಿದೆ. ಮೊದಲ ಬಾರಿ ಆಕೆಯನ್ನು ಹೊಗಳುವ ಮನಸ್ಸಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈಕೆ ಈ ಧಿರಿಸು ಧರಿಸಿ ದಾಂಡಿಯಾ ಆಡಲು ಬಂದಿದ್ದಾಳೆಯೇ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಕೆಲ ದಿನಗಳ ಹಿಂದೆ ಉರ್ಫಿ ಬರೀ ಬಾಳೆಹಣ್ಣಿನ ಸಿಪ್ಪೆಯ ಧಿರಿಸು ಧರಿಸಿ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದ್ದಳು, ಈಕೆಯ ಧಿರಿಸು ನೋಡಿದ ನೆಟ್ಟಿಗರು ಉರ್ಫಿ ಮುಂದೆ ಹಸು ಮೇಕೆಗಳು ಬಂದರೆ ಕಷ್ಟ ಎಂದು ಕಾಮೆಂಟ್ ಮಾಡಿದ್ದರು.  ಬರೀ ಇಷ್ಟೇ ಅಲ್ಲದೇ ಉರ್ಫಿ ಬಾಚಾಣಿಕೆ ಕಬ್ಬಿಣದ ಸರಳು, ನಟ್ಟು ಬೋಲ್ಟ್‌ , ಕುರು ಕುರೆಯ ಸ್ಯಾಚೆಟ್ ಮುಂತಾದವುಗಳಿಂದ ತಯಾರಿಸಿದ ವಿಭಿನ್ನ ಫ್ಯಾಷನ್‌ನಿಂದ ಗಮನ ಸೆಳೆದಿದ್ದರು.

Shantha Kumari