32 ಇನ್ನಿಂಗ್ಸ್ ಗಳಲ್ಲಿ 655 ರನ್.. 2024 ಕೊಹ್ಲಿಗೆ UN LUCKY – ಹೊಸ ವರ್ಷ.. ಹೊಸ ಅಧ್ಯಾಯನಾ?

ವಿರಾಟ್ ಕೊಹ್ಲಿ ಪಾಲಿಗೆ 2024 ಒಂದಷ್ಟು ಸಿಹಿ ಮತ್ತೊಂದಷ್ಟು ಕಹಿ ನೆನಪುಗಳನ್ನ ನೀಡಿದೆ. ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಕಿಂಗ್ ಕೊಹ್ಲಿ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ರು. ಆದ್ರೆ ಅದೇ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನೂ ಸಹ ನೀಡಿದ್ದಾರೆ. ವಿರಾಟ್ ಕೊಹ್ಲಿ 2024ರಲ್ಲಿ ಒಟ್ಟು 23 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 32 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು ಕಲೆಹಾಕಿರುವುದು ಕೇವಲ 655 ರನ್ಗಳು ಮಾತ್ರ. ಇದೇ ವೇಳೆ ಅವರ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ ಒಂದು ಸೆಂಚುರಿ. ಅಂದರೆ 2024 ರಲ್ಲಿ ಕೊಹ್ಲಿ 21.83 ಸರಾಸರಿಯಲ್ಲಿ ಮಾತ್ರ ರನ್ ಗಳಿಸಿದ್ದಾರೆ. ಇನ್ನು ಐವತ್ತರ ಗಡಿದಾಟಿದ್ದು ಕೇವಲ 2 ಬಾರಿ ಮಾತ್ರ ಎಂದರೆ ನಂಬಲೇಬೇಕು.
ಇದನ್ನೂ ಓದಿ : 7 ಇನ್ನಿಂಗ್ಸ್.. ವಿರಾಟ್ ಕೊಹ್ಲಿ ಅದೇರಾಗ ಅದೇ ಹಾಡು! – ಸತತ ಏಟು ತಿಂದು ವಿಕೆಟ್ ಕೈ ಚೆಲ್ಲಿದ ಪಂತ್!
2024ನೇ ವರ್ಷ ವಿರಾಟ್ ಕೊಹ್ಲಿ 10 ಟೆಸ್ಟ್ ಪಂದ್ಯಗಳಲ್ಲಿ 19 ಇನಿಂಗ್ಸ್ ಆಡಿದ್ದಾರೆ. ಈ ಪೈಕಿ 673 ಎಸೆತಗಳಲ್ಲಿ 417 ರನ್ ಗಳನ್ನ ಕಲೆಹಾಕಿದ್ದಾರೆ. ಅದು ಕೂಡ ಕೇವಲ 24.52 ರ ಸರಾಸರಿಯಲ್ಲಿ. ಈ ವೇಳೆ ಒಂದು ಶತಕ ಹಾಗೂ ಒಂದು ಅರ್ಧಶತಕವನ್ನು ಬಾರಿಸಲಷ್ಟೇ ಶಕ್ತರಾಗಿದ್ದಾರೆ. 2024ರಲ್ಲಿ ವಿರಾಟ್ ಕೊಹ್ಲಿ ಕೇವಲ 3 ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 58 ರನ್ಗಳು. ಅಂದರೆ 19.33 ರ ಅವರೇಜ್ನಲ್ಲಿ ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ. ಇನ್ನು ಈ ಮೂರು ಪಂದ್ಯಗಳಲ್ಲಿ ಒಂದೇ ಒಂದು ಅರ್ಧಶತಕವನ್ನೂ ಸಹ ಬಾರಿಸಿಲ್ಲ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ಈ ವರ್ಷ 10 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 9 ಪಂದ್ಯಗಳಲ್ಲೂ ಅಟ್ಟರ್ ಫ್ಲಾಪ್ ಪ್ರದರ್ಶನ ನೀಡಿದ್ದಾರೆ. ಬಟ್ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ 76 ರನ್ ಬಾರಿಸಿ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಇದಾಗ್ಯೂ ಕೊಹ್ಲಿ 10 ಟಿ20 ಪಂದ್ಯಗಳಿಂದ 18ರ ಸರಾಸರಿಯಲ್ಲಿ 180 ರನ್ಗಳಿಸಲಷ್ಟೇ ಶಕ್ತರಾಗಿದ್ದಾರೆ.
ಅಂದ್ರೆ ಇಲ್ಲಿ ನಾವು ಮೂರೂ ಮಾದರಿಗಳನ್ನ ಗಮನಿಸಿದ್ರೂ ವಿರಾಟ್ ಕೊಹ್ಲಿ ಪ್ರದರ್ಶನ ಅಷ್ಟಕ್ಕಷ್ಟೇ ಇದೆ. ಇವತ್ತು ಆಡ್ತಾರೆ ನಾಳೆ ಆಡ್ತಾರೆ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ಬರೀ ನಿರಾಸೆಯೇ ಆಗಿದೆ. ಬಟ್ ಇದೀಗ ನಾವೆಲ್ಲಾ 2025ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಆಸ್ಟ್ರೇಲಿಯಾ ನೆಲದಲ್ಲಿರೋ ಟೀಂ ಇಂಡಿಯಾ ಸಿಡ್ನಿಯಲ್ಲಿ ಕೊನೆಯ ಅಂದ್ರೆ ಐದನೇ ಪಂದ್ಯವನ್ನ ಆಡ್ತಿದೆ. ಆಸಿಸ್ ಸರಣಿಯಲ್ಲೂ ಮೊದಲ ನಾಲ್ಕು ಪಂದ್ಯಗಳಲ್ಲೂ ಮಂಕಾಗಿದ್ದ ಕೊಹ್ಲಿ ಇನ್ಮುಂದಾದ್ರೂ ಬ್ಯಾಟ್ ಬೀಸಿ ಆಡಲಿ.