CSKಯಲ್ಲೂ ಗಾಯಕ್ವಾಡ್ ಗೆ ಶಾಕ್  – ಶಿಷ್ಯನಿಗಿಂತಾ ರಿಷಭ್ ಬೆಸ್ಟ್ ಚಾಯ್ಸ್ ಯಾಕೆ?
ರುತುರಾಜ್ ಸೈಡ್‌ ಲೈನ್ ಮಾಡಿದ್ದೇ ಧೋನಿ?

CSKಯಲ್ಲೂ ಗಾಯಕ್ವಾಡ್ ಗೆ ಶಾಕ್  – ಶಿಷ್ಯನಿಗಿಂತಾ ರಿಷಭ್ ಬೆಸ್ಟ್ ಚಾಯ್ಸ್ ಯಾಕೆ?ರುತುರಾಜ್ ಸೈಡ್‌ ಲೈನ್ ಮಾಡಿದ್ದೇ ಧೋನಿ?

ಅವಕಾಶಗಳು ಸಿಗುವ ಹೊತ್ತಿಗೆ ಕೆಲ ಕ್ರಿಕೆಟಿಗರು ನತದೃಷ್ಟ ಎಂಬ ಹಣೆಪಟ್ಟಿ ಹೊತ್ತುಕೊಂಡು ಸೈಡ್‌ಲೈನ್ ಆಗಿಬಿಡ್ತಾರೆ. ಕ್ರಿಕೆಟ್ ಲೋಕದಲ್ಲಿ ಮತ್ತೊಬ್ಬ ಹರಕೆಯ ಕುರಿ ರೆಡಿಯಾಗಿದ್ದಾರೆ. ಅವರೇ ರುತುರಾಜ್ ಗಾಯಕ್ವಾಡ್. ನಾಯಕನಿರಬೇಕಾದ ತಾಳ್ಮೆಯಿದೆ. ಸಂಯಮವಿದೆ. ಕ್ರಿಕೆಟಿಂಗ್ ಬ್ರೈನ್ ಇದೆ. ಎಲ್ಲಾ ಸಿಚುವೇಶನ್‌ಗಳಲ್ಲೂ ಹ್ಯಾಂಡಲ್ ಮಾಡಬೇಕಾದ ಕೆಪಾಸಿಟಿಯಿದೆ. ಆದರೆ… ಅವಕಾಶ ಇನ್ನೇನು ಕೈಗೆ ಸಿಗುತ್ತೆ ಎಂಬಷ್ಟರಲ್ಲಿ ಕೈ ಜಾರಿ ಹೋಗಿಯೇ ಬಿಡುತ್ತದೆ. ಆದ್ರೆ, ಇದು ಚಾನ್ಸ್ ತಪ್ಪಿದ್ದೋ, ಚಾನ್ಸ್ ತಪ್ಪಿಸಿದ್ದೋ.. ಅಂತೂ ರುತುರಾಜ್ ಗಾಯಕ್ವಾಡ್ ಎಂಬ ಸ್ಟಾಂಡರ್ಡ್ ಕ್ರಿಕೆಟರ್ ಶ್ರೀಲಂಕಾ ಸರಣಿಯಿಂದ ಔಟ್ ಆಗಿ ಆಯ್ತು. ಹೋಗ್ಲಿ ಐಪಿಎಲ್‌ನಲ್ಲಿ ಚೈನ್ನೈ ಸೂಪರ್ ಕಿಂಗ್ಸ್‌ ನ ಪಟ್ಟದರಸ ನಾನೇ ಎಂದು ಬೀಗುವ ಹಾಗೂ ಇಲ್ಲ. ಯಾಕೆಂದ್ರೆ, ಈತನ ಕ್ಯಾಪ್ಟನ್ಸಿಗೆ ಕೊಕ್ ಕೊಡಲು ಡೆಲ್ಲಿ ಹೀರೋ ರಿಷಭ್ ಪಂತ್ ಚೆನ್ನೈಗೆ ಬರೋದು ಗ್ಯಾರಂಟಿಯಾಗಿದೆ. ಹಾಗಿದ್ರೆ, ಇಲ್ಲಿ, ಗಾಯಕ್ವಾಡ್ ಏರುವ ಏಣಿಯನ್ನ ತಳ್ಳಿದ್ಯಾರು?, ರಿಷಭ್ ಪಂತ್‌ಗೆ ಆಹ್ವಾನ ನೀಡಿದ್ಯಾರು?,ಪ್ರತಿಭೆಗೆ ನೀರು ಎರೆದವರೇ ಪಟ್ಟ ಕಿತ್ತುಕೊಳ್ತಾರಾ  ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IPLಗೆ ಸಿಕ್ಸರ್ ಕಿಂಗ್ ರೀ ಎಂಟ್ರಿ – ಗುಜರಾತ್ ಟೈಟಾನ್ಸ್ ಗೆ ಯುವಿ ಕೋಚ್

ಈ ಬಾರಿ ಐಪಿಎಲ್ ಮ್ಯಾಚ್‌ನಲ್ಲಿ ಸಿಎಸ್‌ಕೆ ಟೀಮ್ ಮೇಲೆ ಸಿಕ್ಕಾಪಟ್ಟೆ ಹೋಪ್ಸ್ ಅಂತೂ ಇದ್ದೇ ಇತ್ತು. ನೀವು ಕೂಡಾ ಗಮನಿಸಿರಬಹುದು. ಇಲ್ಲಿ ರುತುರಾಜ್ ಗಾಯಕ್ವಾಡ್ ಕ್ಯಾಪ್ಟನ್ ಆದ್ರೂ ಕೂಡಾ ತಂಡವನ್ನ ಇಂಡೈರೆಕ್ಟ್ ಆಗಿ ಮುನ್ನೆಡೆಸಿದ್ದು ಒನ್ ಆಂಡ್ ಒನ್ಲಿ ಗ್ರೇಟ್ ಕ್ರಿಕಿಟರ್ ಎಂ.ಎಸ್ ಧೋನಿ. ಈ ವರ್ಷ ದೋನಿಯೇ ಟೀಮ್ ನಲ್ಲಿದ್ರು. ಹೀಗಾಗಿ ಗಾಯಕ್ವಾಡ್ ಪ್ರತಿ ಸಿಚುವೇಶನ್ ನಲ್ಲೂ ಧೋನಿ ಆಜ್ಞೆಗೆ ಕಾಯ್ತಾನೇ ಇದ್ರು. ನೆಕ್ಷ್ಟ್ ಸೀಸನ್ ಹೀಗೆ ಅಂತಾ ಹೇಳೋಕೆ ಆಗೋದೇ ಇಲ್ಲ ಬಿಡಿ. 43 ವರ್ಷದ ಮಹೇಂದ್ರ ಸಿಂಗ್ ಧೋನಿ ಮುಂದಿನ ಸೀಸನ್​ನಲ್ಲಿ ಸಿಎಸ್​ಕೆ ಪರ ಕಣಕ್ಕಿಳಿಯೋದು ಡೌಟ್. ಧೋನಿ ಟೀಮ್ ನಲ್ಲಿ ಇಲ್ಲದಿದ್ರೆ ಸಿಎಸ್‌ಕೆ ಗೆಲುವಿನ ದಡ ಮುಟ್ಟೋದು ಕೂಡಾ ಡೌಟೇ. ಹೀಗಾಗಿಯೇ ಹೊಸ ತಂಡ ಕಟ್ಟಲು ಧೋನಿ ತೆರೆಮರೆಯ ಸಿದ್ಧತೆಗಳನ್ನು ನಡೆಸ್ತಿದ್ದಾರೆ. ಇದರ ಆರಂಭವೇ ರಿಷಭ್ ಪಂತ್ ಎಂಟ್ರಿ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಈ ಬಾರಿಯ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಪಕ್ಕಾ ಆಗಿದೆ. ಆದ್ರೆ, ರಿಷಭ್ ಪಂತ್ ಡೆಲ್ಲಿ ಡೇರ್ ಡೆವಿಲ್ ಅಂತಾನೇ ಫೇಮಸ್. ಡೆಲ್ಲಿ ಟೀಮ್ ರಿಷಭ್ ಪಂತ್‌ಗೆ ಎಲ್ಲಾ ಕೊಟ್ಟಿದೆ. ಕ್ಯಾಪ್ಟನ್ಸಿ, ವಿಕೆಟ್ ಕೀಪಿಂಗ್ ಪ್ರತಿಯೊಂದು ರಿಷಭ್ ಹೇಳಿದಂಗೆ ಅಲ್ಲಿ ಆಗುತ್ತೆ. ಹೀಗಿದ್ದರೂ ಕೂಡಾ ರಿಷಭ್ ಪಂತ್ ಸಿಎಸ್‌ಕೆಗೆ ಹಾರೋದು ಗ್ಯಾರಂಟಿ ಎನ್ನಲಾಗ್ತಿದೆ. ಇದರ ಹಿಂದಿರೋ ಸೂತ್ರಧಾರಿಯೇ ಧೋನಿ. ಕ್ಯಾಪ್ಟನ್ ಕೂಲ್ ಸೂಚನೆ ಮೇರೆಗೆ ರಿಷಭ್ ಪಂತ್ ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಕೆಲವೊಂದು ಮೂಲಗಳ ಪ್ರಕಾರ, ರಿಷಭ್ ಪಂತ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಖರೀದಿಸುವ ಬಗ್ಗೆ ಪಂತ್​ಗೆ ಧೋನಿ ಮಾತುಕೊಟ್ಟಿದ್ದಾರಂತೆ. ಇದೇ ಕಾರಣದಿಂದಾಗಿ ಇದೀಗ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವವನ್ನು ತ್ಯಜಿಸಿ, ಚೆನ್ನೈ ಸೂಪರ್ ಕಿಂಗ್ಸ್​​ ತಂಡಕ್ಕೆ ಎಂಟ್ರಿಕೊಡ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ರಿಷಭ್ ಪಂತ್ ಎಂಟ್ರಿ ಕೊಟ್ಟರೆ ನಾಯಕತ್ವ ಕೂಡಾ ಇವರದ್ದೇ ಅನ್ನೋದು ಕೂಡಾ ಸತ್ಯ. ಹಾಗಾದ್ರೆ ಇಲ್ಲಿ ಬಲಿಪಶು ಯಾರು?. ಕಳೆದ ಸೀಸನ್​ನಲ್ಲಿ ರುತುರಾಜ್ ಗಾಯಕ್ವಾಡ್ ಗೆ ಧೋನಿ ಪಟ್ಟ ಕಟ್ಟಿದ್ದರು. ಶಿಷ್ಯನಿಗಾಗಿ ಧೋನಿ ನಾಯಕ ಪಟ್ಟ ಬಿಟ್ಟುಕೊಟ್ರು ಅನ್ನೋದೇ ಸಿಕ್ಕಾಪಟ್ಟೆ ಸೌಂಡ್ ಮಾಡಿರೋ ಸುದ್ದಿಯಾಗಿತ್ತು. ಧೋನಿ ನೆಕ್ಷ್ಟ್ ಐಪಿಎಲ್ ಆಡಲ್ಲ. ಇದಕ್ಕಾಗಿಯೇ ರುತುರಾಜ್ ಗೆ ಕ್ಯಾಪ್ಟನ್ಸಿ ನೀಡಿದ್ದಾರೆ ಅಂತಾನೇ ಭಾವಿಸಲಾಗಿತ್ತು.ಆದ್ರೀಗ ಕೇವಲ ಒಂದೇ ವರ್ಷದಲ್ಲಿ ಧೋನಿ ಪ್ಲಾನ್ ಚೇಂಜ್ ಆಗಿದ್ಯಾಕೆ?. ಬಹುಷಃ ರುತುರಾಶ್ ಧೋನಿ ಅವಲಂಭಿಸಿಯೇ ತಂಡವನ್ನು ಮುನ್ನಡೆಸಿದ್ದರು. ಹೀಗೆ ಆದ್ರೆ, ಸಿಎಸ್‌ಕೆಗೆ ಭವಿಷ್ಯವಿಲ್ಲ. ಧೋನಿ ಇಲ್ಲದಿದ್ದರೂ ತಂಡವನ್ನು ಮುನ್ನಡೆಸಬಲ್ಲ ಸಮರ್ಥ ನಾಯಕನ ಅವಶ್ಯಕತೆ ಸಿಎಸ್​ಕೆ ತಂಡಕ್ಕಿದೆ. ಹೀಗಾಗಿಯೇ ರಿಷಭ್ ಪಂತ್ ಅವರ ಮೇಲೆ ಸಿಎಸ್​ಕೆ ಕಣ್ಣಿಟ್ಟಿದೆ. ಇಲ್ಲಿ ಪಂತ್ ಅವರ ಆಯ್ಕೆಯಿಂದ ಸಿಎಸ್​ಕೆ ಎರಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದೆ. ಅಂದರೆ ಧೋನಿಯ ಸ್ಥಾನದಲ್ಲಿ ಹೊಸ ವಿಕೆಟ್ ಕೀಪರ್ ಹಾಗೂ ನಾಯಕನಾಗಿ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಬಹುದು. ಈ ಮೂಲಕ ಮಹೇಂದ್ರ ಸಿಂಗ್ ಧೋನಿಯ ಉತ್ತರಾಧಿಕಾರಿಯಾಗಿ ರಿಷಭ್ ಪಂತ್ ಮೆರೆಯಬಹುದು.

ಹೇಳಿಕೇಳಿ ರುತುರಾಜ್ ಗಾಯಕ್ವಾಡ್ ನಂಬಿಕಸ್ತ ಮತ್ತು ಕ್ಲಾಸಿಕ್ ಆಟಗಾರ. ಈ ಸಲ ಐಪಿಎಲ್ ಸೀಸನ್ ಮತ್ತು ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲೂ ಭರ್ಜರಿ ಫಾರ್ಮ್ ತೋರಿಸಿರೋ ಕ್ರಿಕೆಟರ್. ಆದ್ರೆ, ಲಂಕಾ ಸರಣಿಗೆ ಆಯ್ಕೆ ಮಾಡೋ ಕಮಿಟಿಗೆ ಗಾಯಕ್ವಾಡ್ ಆಟ ನೋಡಲು ಪುರುಸೊತ್ತಿಲ್ವೋ ಏನೋ. ಯಾರನ್ನ ಸೆಲೆಕ್ಟ್ ಮಾಡ್ಬೇಕು ಮಾಡಿಯಾಗಿದೆ. ಇತ್ತ ಗುರು ಧೋನಿ ಗಾಯಕ್ವಾಡ್ ಗೆ ಸಿಎಸ್‌ಕೆ ಟೀಮ್‌ನಲ್ಲಿ ಗಟ್ಟಿ ನೆಲೆ ಕಟ್ಟಿಕೊಳ್ತಾರಾ ಅನ್ನೋದು ಕೂಡಾ ಯಕ್ಷಪ್ರಶ್ನೆಯಾಗಿದೆ. ಗಾಯಕ್ವಾಡ್ ನಾಯಕರಾಗಿದ್ರೂ ಕೂಡಾ ಧೋನಿ ಗಾಯಕ್ವಾಡ್​ ಹಿಂದೆಯೇ ಇದ್ದು ಮಾರ್ಗದರ್ಶನ ನೀಡಿದ್ದು ಕೂಡಾ ಸತ್ಯವೇ. ಗಾಯಕ್ವಾಡ್ ಅವರ ನಾಯಕತ್ವದಲ್ಲಿ ಯಾವುದೇ ಲೋಪವಿಲ್ಲದಿದ್ದರೂ ಸಹಾ, ಅವರು ಧೋನಿಯಂತೆ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಮುಂದಿನ ಋತುವಿನಲ್ಲಿ ಧೋನಿಯಂತಹ ಗೇಮ್​ಪ್ಲಾನ್​ ಮತ್ತು ಕೌಶಲ್ಯಗಳನ್ನು ಹೊಂದಿರುವ ಆಟಗಾರನನ್ನು ನಾಯಕನನ್ನಾಗಿ ನೇಮಿಸೋದು ಕೂಡಾ ಸಿಎಸ್​ಕೆಗೆ ಅನಿವಾರ್ಯವೇ. ಹೀಗಾಗಿ ರಿಷಭ್ ಪಂತ್ ಸಿಎಸ್‌ಕೆ ಕ್ಯಾಪ್ಟನ್ ಪಟ್ಟಕ್ಕೇರಲಿ ಅನ್ನೋದು ಕೂಡಾ ಸಿಎಸ್‌ಕೆ ಮ್ಯಾನೇಜ್ಮೆಂಟ್ ಐಡಿಯಾ. ಹೀಗಾಗಿ ಗಾಯಕ್ವಾಡ್ ಒಬ್ಬ ಶ್ರೇಷ್ಠ ಮತ್ತು ರನ್ ಬಲ ಕೊಡೋ ಆಟಗಾರನೇ. ಹೀಗಾಗಿ ಸಿಎಸ್‌ಕೆ ಗಾಯಕ್ವಾಡ್‌ಗೆ ಕೈಕೊಡದೇ ಇದ್ರೂ ನಾಯಕತ್ವದಿಂದ ಇಳಿಸೋದು ಗ್ಯಾರಂಟಿ.

Shwetha M

Leave a Reply

Your email address will not be published. Required fields are marked *