ವೈಭವ್ ಗೆ ಆರಂಭದಲ್ಲೇ ಅಗ್ನಿಪರೀಕ್ಷೆ – IPL ಅಸ್ತ್ರ ENGನಲ್ಲಿ ಬಳಸಿದ್ರಾ ಜೋಫ್ರಾ?
ಶಾರ್ಟ್ ಬಾಲ್ ಗೆಲ್ತಾರಾ BOSS BABY?

ವೈಭವ್ ಗೆ ಆರಂಭದಲ್ಲೇ ಅಗ್ನಿಪರೀಕ್ಷೆ – IPL ಅಸ್ತ್ರ ENGನಲ್ಲಿ ಬಳಸಿದ್ರಾ ಜೋಫ್ರಾ?ಶಾರ್ಟ್ ಬಾಲ್ ಗೆಲ್ತಾರಾ BOSS BABY?

ಪವರ್ ಹಿಟ್ಟಿಂಗ್ ಪರ್ಫಾಮೆನ್ಸ್ ಮೂಲಕವೇ ಕ್ರಿಕೆಟ್ ಜಗತ್ತಿನಲ್ಲಿ ಸೆನ್ಸೇಷನಲ್ ಕಿಡ್ ಆದವ್ರು ವೈಭವ್ ಸೂರ್ಯವಂಶಿ. ಐಪಿಎಲ್​ಗೆ ಕಾಲಿಟ್ಟಿದ್ದು ಲೇಟ್ ಆಗಿಲ್ಲ. ಅಂತಾರಾಷ್ಟ್ರೀಯ ಟೀಮ್​ಗೆ ಸೆಲೆಕ್ಟ್ ಆಗಿದ್ದೂ ತಡವಾಗಿಲ್ಲ. ಕೊನೆಗೆ ಡೆಬ್ಯೂಗಾಗಿ ತಿಂಗಳುಗಟ್ಟಲೆ ಬೆಂಚ್​ನೂ ಕಾಯಲಿಲ್ಲ. ಎಲ್ಲವೂ ಫಟಾಫಟ್ ಅಂತಾ ಆಗೋಯ್ತು. ಆದ್ರೀಗ ಇಂಗ್ಲೆಂಡ್​ನಲ್ಲಿ ಇಂಟರ್​ನ್ಯಾಷನಲ್ ಕ್ರಿಕೆಟ್ ಕರಿಯರ್ ಸ್ಟಾರ್ಟ್ ಮಾಡಿರೋ ಸೂರ್ಯವಂಶಿ ಮೂರಕ್ಕೆ ಮೂರೂ ಮ್ಯಾಚ್​ಗಳಲ್ಲೂ ಮಂಕಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಸೂರ್ಯವಂಶಿ ವೀಕ್​ನೆಸ್ ಬಗ್ಗೆ ಸುದ್ದಿಯಾಗ್ತಿದೆ.

ಇದನ್ನೂ ಓದಿ : ಸೂರ್ಯವಂಶಿಗೆ ಜೋಫ್ರಾ ವಾರ್ನಿಂಗ್ – ಸಿಕ್ಸ್ ಹೊಡೆದಿದ್ದಕ್ಕೆ OUT ಮಾಡಿ ಸೇಡು!

ಐಪಿಎಲ್​ನಲ್ಲಿ ಹೈಯೆಸ್ಟ್ ರನ್ಸ್ ಸ್ಕೋರರ್ ಆಗಿ ಟೀಂ ಇಂಡಿಯಾಗೆ ಕಾಲಿಟ್ಟಿದ್ದ ವೈಭವ್ ಸೂರ್ಯವಂಶಿ ಭಾರತದ ಪರ ಮೂರು ಪಂದ್ಯಗಳನ್ನ ಆಡಿದ್ದಾರೆ. ಬಟ್ ಬಿಗ್ ಇನ್ನಿಂಗ್ಸ್ ಅಂತಾ ಇನ್ನೂ ಬಂದಿಲ್ಲ. ಹಾಗಂತ ಪ್ರತೀ ಮ್ಯಾಚಲ್ಲೂ ಸೂರ್ಯವಂಶಿ ಅರ್ಧಶತಕ ಹೊಡೀಬೇಕು ಅಥವಾ 20 ಬಾಲಲ್ಲಿ 80 ರನ್ಸ್ ಹೊಡಿಬೇಕು ಅಂತಾ ಯಾರೂ ಹೇಳ್ತಿಲ್ಲ. ಆದ್ರೆ ಸೂರ್ಯವಂಶಿಯ ವೀಕ್​ನೆಸ್ ಎದುರಾಳಿ ಪಡೆಗೆ ಅಸ್ತ್ರವಾಗ್ತಿರೋದೇ ಆತಂಕಕ್ಕೆ ಕಾರಣವಾಗಿದೆ. ಆತನ ಫ್ಯೂಚರ್ ಕ್ರಿಕೆಟ್ ಬಗ್ಗೆ ಪ್ರಶ್ನೆಗಳನ್ನ ಮೂಡಿಸಿದೆ.

14.. 13.. 15.. ಮೂರು ಪಂದ್ಯಗಳಲ್ಲೂ ಸೇಮ್ ಪರ್ಫಾಮೆನ್ಸ್!

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಎರಡನೇ ಪಂದ್ಯದಿಂದ ವೈಭವ್ ಪ್ಲೇಯಿಂಗ್ 11ನಲ್ಲಿ ಓಪನರ್ ಆಗಿ ಆಡ್ತಿದ್ದಾರೆ. ಟಿ-20 ವಿಶ್ವಕಪ್​ನ ಟೂರ್ನಮೆಂಟ್ ಆಫ್ ದಿ ಪ್ಲೇಯರ್ ಪ್ರಶಸ್ತಿ ವಿಜೇಯ ಸಂಜು ಸ್ಯಾಮ್ಸನ್​ರನ್ನ ಕೂರಿಸಿ ವೈಭವ್​ಗೆ ಚಾನ್ಸ್ ನೀಡಲಾಗಿದೆ. ಅಭಿಷೇಕ್ ಜೊತೆ ಇನ್ನಿಂಗ್ಸ್ ಓಪನ್ ಮಾಡ್ತಿರೋ ಸೂರ್ಯವಂಶಿ ಮೂರೂ ಪಂದ್ಯಗಳಲ್ಲೂ ಬೇಗನೇ ವಿಕೆಟ್ ಒಪ್ಪಿಸಿದ್ದಾರೆ. ಅವ್ರ ಡೆಬ್ಯೂ ಮ್ಯಾಚಲ್ಲಿ 14 ರನ್, ಎರಡನೇ ಮ್ಯಾಚಲ್ಲಿ 13 ರನ್ ಹಾಗೇ ಮೂರನ್ಏ ಮ್ಯಾಚಲ್ಲಿ 15 ರನ್ ಗಳಿಸಿ ಔಟ್ ಆಗಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಐಪಿಎಲ್​ನಲ್ಲಿ ಅವ್ರ ಟೀಂ ಮೇಟ್ ಆಗಿರೋ ಜೋಫ್ರಾ ಆರ್ಚರ್ ಅವ್ರೇ ಕಳೆದ ಎರಡೂ ಪಂದ್ಯಗಳಲ್ಲೂ ಸೂರ್ಯವಂಶಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಐಪಿಎಲ್​ನಲ್ಲಿ  ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಟಾರ್ಕ್, ಭುವನೇಶ್ವರ್ ಕುಮಾರ್, ಪ್ಯಾಟ್ ಕಮ್ಮಿನ್ಸ್ ಹೀಗೆ ವರ್ಲ್ಡ್​​ಕ್ಲಾಸ್ ಬೌಲರ್​ಗಳ ವಿರುದ್ಧ ಫಿಯರ್​ಲೆಸ್ ಆಗಿ ಬ್ಯಾಟಿಂಗ್ ಮಾಡಿದ ವೈಭವ್​ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಬೇರೆ ರೀತಿಯಲ್ಲೇ ಇದೆ. ಇಂಗ್ಲೆಂಡ್‌ನಂಥ ಪೇಸ್ ಮತ್ತು ಬೌನ್ಸ್ ಇರೋ ಪಿಚ್​ಗಳಲ್ಲಿ ರನ್ಸ್ ಬರ್ತಿಲ್ಲ. ಅದ್ರಲ್ಲೂ ಜೋಫ್ರಾ ಆರ್ಚರ್ ಐಪಿಎಲ್​ನಲ್ಲಿ ಸೂರ್ಯವಂಶಿ ವೀಕ್​ನೆಸ್ ಅಸ್ತ್ರ ಬಳಸಿಕೊಂಡು ಇಂಗ್ಲೆಂಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಔಟ್ ಮಾಡಿದ್ದಾರೆ.

ಶಾರ್ಟ್ ಬಾಲ್ ಅಂದ್ರೆ ಸೂರ್ಯವಂಶಿ ಔಟ್ ಆಗೋದು ಪಕ್ಕಾ!?

ಐಪಿಎಲ್​ನಲ್ಲೇ ವೈಭವ್ ಸೂರ್ಯವಂಶಿ ವೀಕ್​ನೆಸ್ ಏನು ಅನ್ನೋದು ಸಾಕಷ್ಟು ಸದ್ದು ಮಾಡಿತ್ತು. ಬೌನ್ಸರ್ಸ್ ಅಥವಾ ಶಾರ್ಟ್ ಪಿಚ್ ಬಾಲ್​ಗಳಲ್ಲೇ ವಿಕೆಟ್ ಒಪ್ಪಿಸೋದು ಪದೇಪದೆ ಪ್ರೂವ್ ಆಗಿತ್ತು. ಈಗ ಇಂಗ್ಲೆಂಡ್​ನಲ್ಲೂ ಅದೇ ಆಗ್ತಿದೆ. ಮೊದಲ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಸ್ಪಿನ್ನರ್ ವಿಲ್ ಜ್ಯಾಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಲ್ಲಿ ಜೋಫ್ರಾ ಆರ್ಚರ್ ಸೂರ್ಯವಂಶಿಗೆ ಶಾರ್ಟ್ ಬಾಲ್​ಗಳನ್ನ ಎಸೆದು ಕಾಟ ಕೊಟ್ಟಿದ್ದಾರೆ. ಌಂಡ್ ಎರಡೂ ಪಂದ್ಯಗಳಲ್ಲಿ ಶಾರ್ಟ್ ಬಾಲ್‌ಗಳಿಂದ ವೈಭವ್ ಅವರನ್ನು ಔಟ್ ಮಾಡಿದ್ದಾರೆ. ಇದು ವೈಭವ್ ಸೂರ್ಯವಂಶಿಯ ವಿಕ್ನೇಸ್ ಎಂದು ಕ್ರಿಕೆಟ್ ಎಕ್ಸ್​ಪರ್ಟ್​​ಗಳೇ ಡಿಕ್ಲೇರ್ ಮಾಡಿಬಿಟ್ಟಿದ್ದಾರೆ. ಇಂಗ್ಲೆಂಡ್ ಮತ್ತು ಭಾರತ ನಡುವಿನ ಟಿ20 ಸರಣಿಯಲ್ಲಿ ಆರ್ಚರ್ ಇದುವರೆಗೆ ವೈಭವ್ ವಿರುದ್ಧ 13 ಎಸೆತಗಳನ್ನು ಎಸೆದಿದ್ದಾರೆ. ಆ 13 ಎಸೆತಗಳಲ್ಲಿ ಅವರು 2 ವಿಕೆಟ್ ಪಡೆದಿದ್ದಾರೆ. ಈ ಅವಧಿಯಲ್ಲಿ ವೈಭವ್ ಅವರು ಆರ್ಚರ್ ವಿರುದ್ಧ 2 ಸಿಕ್ಸರ್‌ಗಳು ಸೇರಿದಂತೆ ಕೇವಲ 18 ರನ್ ಮಾತ್ರ ಗಳಿಸಿದ್ದಾರೆ.

ಸೂರ್ಯವಂಶಿ ಬಗ್ಗೆ ಸ್ಪೆಷಲ್ ವರ್ಕ್ ಮಾಡಿರುವ ಇಂಗ್ಲೆಂಡ್!

ಐಪಿಎಲ್​ನಲ್ಲೀ ಸೂರ್ಯವಂಶಿ ಬ್ಯಾಟಿಂಗ್ ಖದರ್ ಕಂಡಿದ್ದ ಇಂಗ್ಲೆಂಡ್ ಮ್ಯಾನೇಜ್​ಮೆಂಟ್ ಯಂಗ್ ಕಿಡ್ ಔಟ್ ಮಾಡಲು ಸ್ಪೆಷಲ್ ವರ್ಕ್​ನೇ ಮಾಡಿದೆ. ಸರಣಿ ಆರಂಭಕ್ಕೂ ಮೊದ್ಲೇ ನಾಯಕ ಹ್ಯಾರಿ ಬ್ರೂಕ್ ಇದನ್ನೇ ಹೇಳಿದ್ರು. ಸೂರ್ಯವಂಶಿಯನ್ನ ಔಟ್ ಮಾಡೋ ಟೆಕ್ನಿಕ್ ನಮಗೆ ಗೊತ್ತು ಅಂದಿದ್ರು. ಅದನ್ನ ಸಾಧಿಸಿಯೂ ಇದ್ದಾರೆ. 3ನೇ ಪಂದ್ಯದ ಬಳಿಕ ಮಾತ್ನಾಡಿದ್ದ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ಸೂರ್ಯವಂಶಿಯನ್ನ ಔಟ್ ಮಾಡುವ ರಹಸ್ಯ ಚೆನ್ನಾಗೇ ಗೊತ್ತು ಎಂದಿದ್ರು. ನನ್ನ ಬೌಲ್​ಗೆ ಸಿಕ್ಸ್ ಹೊಡೆದ್ರೂ ಔಟ್ ಮಾಡಿ ಲೆಕ್ಕ ಚುಕ್ತಾ ಮಾಡಿದ್ದೇನೆ ಅಂತಾ ವ್ಯಂಗ್ಯವಾಡಿದ್ರು.. ಸೂರ್ಯವಂಶಿ ಮತ್ತು ಜೋಫ್ರಾ ಆರ್ಚರ್, ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಿದ್ದರು. ಒಂದೇ ನೆಟ್ಸ್​ನಲ್ಲಿ ಪ್ರಾಕ್ಟೀಸ್ ಮಾಡಿದ್ರಿಂದ ಸೂರ್ಯವಂಶಿ ಫುಟ್ವರ್ಕ್, ಶಾಟ್ ಪಿಚ್ ಮಿಸ್ ಜಡ್ಜ್ ಮಾಡುವುದನ್ನ ಗಮನಿಸಿದ್ದರು. ಸೋ ಅದೇ ಅಸ್ತ್ರವನ್ನ ಈಗ ತಮ್ಮ ರಾಷ್ಟ್ರೀಯ ತಂಡದ ಪರ ಜೋಫ್ರಾ ಅಪ್ಲೈ ಮಾಡಿ ಗೆದ್ದಿದ್ದಾರೆ.

ಶಾರ್ಟ್ ಬಾಲ್ ವೀಕ್ ನೆಸ್ ಗೆಲ್ಲಬೇಕು ಬಾಸ್ ಬೇಬಿ?

ಮೂರು ಪಂದ್ಯಗಳ ಸೂರ್ಯವಂಶಿ ಬೇಗ ಔಟ್ ಆಗಿದ್ರೂ ಆತನ ಟ್ಯಾಲೆಂಟ್ ಬಗ್ಗೆ ಯಾರಿಗೂ ಡೌಟ್ ಇಲ್ಲ. ಬಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಕ್ಸಸ್ ಸಿಗಬೇಕಾದರೆ, ಶಾರ್ಟ್ ಬಾಲ್ ವಿರುದ್ಧ ತಮ್ಮ ಶಾಟ್ ಸೆಲೆಕ್ಷನ್ ಮತ್ತು ಟೆಕ್ನಿಲ್​ನಲ್ಲಿ ಸ್ವಲ್ಪ ವರ್ಕ್ ಮಾಡ್ಬೇಕು. ಇಂಗ್ಲೆಂಡ್‌ನಂತಹ ಪರಿಸ್ಥಿತಿಗಳಲ್ಲಿ ಈ ಶಾರ್ಟ್ ಬಾಲ್ ಪರೀಕ್ಷೆಯು ಯುವ ಬ್ಯಾಟ್ಸ್‌ಮನ್‌ಗಳಿಗೆ ನಿಜವಾದ ಅಗ್ನಿಪರೀಕ್ಷೆ. ವೈಭವ್ ಈ ಸವಾಲನ್ನು ಗೆದ್ರೆ ಮುಂದಿನ  ಜರ್ನಿಗೂ ಹೆಲ್ಪ್ ಆಗಲಿದೆ. ಇದೇ ಕಾರಣಕ್ಕೆ ಟೀಂ ಇಂಡಿಯಾದ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಕೂಡ ವೈಭಯ್ ಸೂರ್ಯವಂಶಿ ಶಾರ್ಟ್ ಬಾಲ್ ಗಳ ಬಗ್ಗೆ ಜಾಸ್ತಿ ಕಾನ್ಸಂಟ್ರೇಟ್ ಮಾಡ್ಬೇಕು ಅಂದಿದ್ರು. ಹೀಗೆ ಒಂದ್ಕಡೆ ಸೂರ್ಯವಂಶಿಯ ವೀಕ್​ನೆಸ್ ಬಗ್ಗೆ ಚರ್ಚೆಯಾಗ್ತಿದ್ರೆ ಮತ್ತೊಂದ್ಕಡೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವೈಭವ್ ಸೂರ್ಯವಂಶಿ ಇನ್ನೂ ರೆಡಿಯಾಗಿಲ್ಲ ಅನ್ನುವಂಥ ಪೋಸ್ಟರ್​ಗಳು ಹರಿದಾಡ್ತಿವೆ. ವೈಭವ್​ಗೆ ಇನ್ನೂ 15 ವರ್ಷ. ಇಷ್ಟು ಬೇಗ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅವಕಾಶ ನೀಡಬಾರದಿತ್ತು. ಇದೇ ತಪ್ಪಾಗಿದ್ಯೇನೋ ಅಂತಾ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್​​ಗಳನ್ನ ಹಾಕ್ತಿದ್ದಾರೆ. ಒಟ್ನಲ್ಲಿ ಭಾರತ ಸತತ ಎರಡು ಸರಣಿಗಳನ್ನ ಸೋತಿದೆ. ಅಟ್​ಲೀಸ್ಟ್ ಮುಂದಿನ ಪಂದ್ಯಗಳನ್ನಾದ್ರೂ ಗೆದ್ದು ಬೌನ್ಸ್ ಬ್ಯಾಕ್ ಮಾಡಲೇಬೇಕಿದೆ.

Shantha Kumari

Leave a Reply

Your email address will not be published. Required fields are marked *