ಬೇಲದ ಹಣ್ಣು ಯಾಕೆ ತಿನ್ಬೇಕು ಗೊತ್ತಾ? – ಒಂದೇ ಹಣ್ಣಲ್ಲಿ ಎಷ್ಟೆಲ್ಲಾ‌ ಲಾಭವಿದೆ?

ಬೇಲದ ಹಣ್ಣು ಯಾಕೆ ತಿನ್ಬೇಕು ಗೊತ್ತಾ? – ಒಂದೇ ಹಣ್ಣಲ್ಲಿ ಎಷ್ಟೆಲ್ಲಾ‌ ಲಾಭವಿದೆ?

ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ಬಹುತೇಕ ಕಡೆಗಳಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿದೆ. ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಜನರು ಪರದಾಡುವಂತಾಗಿದೆ. ಬೇಸಿಗೆಯಲ್ಲಿ ಬಿಸಿಲಿನ ದಾಹ ಹೆಚ್ಚಾಗೋದ್ರಿಂದ ಒಂದಿಲ್ಲೊಂದು ಸಮಸ್ಯೆ ಕಾಡುತ್ತದೆ. ಸುಸ್ತು, ನಿಶಕ್ತಿ, ತಲೆಸುತ್ತು ಬರುವುದು ಕಾಮನ್.. ಬೇಸಿಗೆ ಕಾಲದಲ್ಲಿ ಈ ಹಣ್ಣನ್ನ ತಿಂದ್ರೆ, ಇದರ ಜ್ಯೂಸ್‌ ಕುಡಿದ್ರೆ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತೆ..

ಇದನ್ನೂ ಓದಿ: ಭಾರತದ ಮೊದಲ ಅಂಡರ್ ವಾಟರ್ ಮೆಟ್ರೋ ಮಾರ್ಗ ಹೇಗಿದೆ? – ಇದರಲ್ಲಿ ಪ್ರಯಾಣ ಮಾಡೊದು ಎಷ್ಟು ಸೇಫ್?

ಬೇಸಿಗೆಗಾಲದಲ್ಲಿ ಒಂದ್ಕಡೆ ಸೆಕೆಯಿಂದ ಬಳಲ್ತಾ ಇದ್ರೆ…  ಇನ್ನೊಂದ್ಕಡೆ ಬಿಸಿಲಿನ ಝಳಕ್ಕೆ ಸುಸ್ತು, ನಿಶಕ್ತಿ, ತಲೆಸುತ್ತು ಹೀಗೆ ಒಂದೊಂದೇ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬಿಸಿಲಿನ ತಾಪದಿಂದ ನಮ್ಮನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯ. ಇದಕ್ಕಾಗಿನೇ ಬೇಸಿಗೆಯಲಿ ಹಣ್ಣು, ತರಕಾರಿಗಳನ್ನ ಹೆಚ್ಚು ತಿನ್ನೋದು ಒಳ್ಳೆಯದು. ಸಾಮಾನ್ಯವಾಗಿ ನೀವು ಬೇಲದ ಹಣ್ಣನ್ನ ಕೇಳೆ ಇರ್ತೀರಾ.. ಆದ್ರೆ ಇದ್ರ ಪ್ರಯೋಜನಗಳು ಅನೇಕರಿಗೆ ಗೊತ್ತಿರಲ್ಲ.. ಬೇಲದ ಹಣ್ಣನ್ನ ವುಡ್ ಆಪಲ್ ಅಂತಾನೂ ಕರಿತಾರೆ..  ಬೇಸಿಗೆಯಲ್ಲಿ ಮಾತ್ರ ಸಿಗುವ ಈ ಹಣ್ಣು ದೇಹದ ಆರೋಗ್ಯ ಕಾಪಾಡಲು ಉತ್ತಮ ಆಹಾರ.

ಬೇಲದ ಹಣ್ಣು ಉಷ್ಣವಲಯದ ಹಣ್ಣಾಗಿದ್ದು, ಹಲವು ಆರೋಗ್ಯ ಪ್ರಯೋಜನಗಳ‌ ಕಾರಣದಿಂದ ಹೆಸರುವಾಸಿಯಾಗಿದೆ. ಈ ಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಾಟಿ ಔಷಧಗಳಲ್ಲಿ ಇದನ್ನು ಬಳಸಲಾಗುತ್ತದೆ. ಬೇಲದ ಹಣ್ಣು ನೈಸರ್ಗಿಕವಾಗಿ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹದ ಉರಿಯೂತ ಕಡಿಮೆ ಮಾಡುತ್ತದೆ.  ಇದರಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಅಂಶವಿದೆ. ಇದೇ ಕಾರಣದಿಂದ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇನ್ನು ಬೇಲದ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.  ಹೀಗಾಗಿ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳನ್ನು ಕೂಡ ಇದು ಹೊಂದಿದ್ದು, ಹಾನಿಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ರಕ್ಷಿಸುತ್ತದೆ. ಜೊತೆಗೆ ಸೂರ್ಯನ ಶಾಖದಿಂದ ಆಗುವ ಹಾನಿಯನ್ನು ತಡೆಯುತ್ತದೆ.  ಸಂಧಿವಾತದಿಂದ ಬಳಲುತ್ತಿರುವವರಿಗೆ ಇದು  ಪ್ರಯೋಜನಕಾರಿ. ಇನ್ನು ಮುಖದ  ಸುಕ್ಕು, ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಯಾಕಂದ್ರೆ ಇದರಲ್ಲಿ ಇನ್ಸುಲಿನ್ ಸ್ರವಿಸುವಿಕೆಗೆ ಸಹಾಯ ಮಾಡುವ ಸಂಯುಕ್ತಗಳಿವೆ. ಹೀಗಾಗಿ ಬೇಲದ‌ ಹಣ್ಣು ಮಧುಮೇಹದಿಂದ ಬಳಲುತ್ತಿರುವವರಿಗೆ ಪ್ರಯೋಜನಕಾರಿ.. ಅಷ್ಟೇ ಅಲ್ಲದೇ ಆಸ್ತಮಾ ಸೇರಿದಂತೆ ಉಸಿರಾಟದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬೇಲದ ಹಣ್ಣು ಪ್ರಯೋಜನಕಾರಿಯಾಗಿದೆ.

Shwetha M