‘2024ರ ಚುನಾವಣೆ ಬಳಿಕ ಭಾರತದಲ್ಲಿ ಸರ್ವಾಧಿಕಾರ’ – ಮಾಜಿ ಮುಖ್ಯಮಂತ್ರಿ ಕೊಟ್ಟ ಎಚ್ಚರಿಕೆ ಏನು..?
ಏಕತೆ ಇಲ್ಲದಿದ್ದಕ್ಕೆ 2024ರ ಚುನಾವಣೆ ಬಳಿಕ ಭಾರತ ಸರ್ವಾಧಿಕಾರ ನೋಡಬೇಕಾಗುತ್ತದೆ ಎಂದು ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಹೇಳಿದ್ದಾರೆ. ತಮ್ಮ ನೇತೃತ್ವದ ಬಣ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸೇರಿದಂತೆ ಮಹಾ ವಿಕಾಸ್ ಅಘಾಡಿ ಘಟಕಗಳು ತಳಮಟ್ಟದಲ್ಲಿ ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ಬಿಜೆಪಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ ಠಾಕ್ರೆ ಪ್ರತಿಪಕ್ಷಗಳಿಗೆ ತಮ್ಮೊಂದಿಗೆ ಸೇರಲು ಅಥವಾ ಜೈಲಿಗೆ ಹೋಗಲು ಆಯ್ಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ‘ಶಿವಸೇನೆ ಒಂದೇ’ ಎಂದು ಒಗ್ಗಟ್ಟಿನ ಮಂತ್ರ ಜಪಿಸಿದ ಶಿಂಧೆ ಬಣ – 2 ವಾರಗಳ ಡೆಡ್ ಲೈನ್ ನೀಡಿದ್ದೇಕೆ..?
ಮುಂಬೈನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಮಹಾ ವಿಕಾಸ್ ಅಘಾಡಿ ಮುಖಂಡರು ಮತ್ತು ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ನಮ್ಮ ಒಗ್ಗಟ್ಟು ಸರ್ಕಾರ ರಚನೆಗಾಗಿ ಅಲ್ಲ, ಪ್ರಜಾಪ್ರಭುತ್ವವನ್ನು ಉಳಿಸಲು ಎಂದಿದ್ದಾರೆ.
ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಧಾನಸಭೆಗಳು ಅಥವಾ ಲೋಕಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿಮಗೆ ಟಿಕೆಟ್ ಸಿಗುತ್ತದೆಯೇ ಎಂಬುದನ್ನು ಲೆಕ್ಕಿಸದೆ ಎಲ್ಲಾ ಪಕ್ಷಗಳು ಒಗ್ಗೂಡಿ ಕೆಲಸ ಮಾಡಲು ನಾನು ಮನವಿ ಮಾಡುತ್ತೇನೆ. ನಾವು ತಳಮಟ್ಟದಲ್ಲಿ ಒಂದಾಗದಿದ್ದರೆ, 2024 ಕೊನೆಯ ಚುನಾವಣೆ ಮತ್ತು ನಾವು ಸರ್ವಾಧಿಕಾರದ ಕಡೆಗೆ ಹೋಗುತ್ತೇವೆ. ಇಷ್ಟು ದಿನ ನಾವು ಪರಸ್ಪರರ ವಿರುದ್ಧ ಹೋರಾಡಿದ್ದೇವೆ. ಆದ್ದರಿಂದ ಸ್ಥಳೀಯ ಮಟ್ಟದಲ್ಲಿ ಒಂದಾಗುವುದು ಕಷ್ಟ. ಆದರೂ ನಾವು ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.