ಅಣ್ಣನಿಗೆ ತಂಗಿಯೇ ಹೆಂಡತಿ! – ಈ ಕಾಲದಲ್ಲೂ ಇಂಥ ಮದುವೆನಾ?
ಭಾರತ ವೈವಿಧ್ಯಮಯ ರಾಷ್ಟ್ರ. ಇಲ್ಲಿನ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಸಂಪ್ರದಾಯ, ಆಚರಣೆಗಳಿವೆ. ಕೆಲವೊಂದು ಸಾಮಾನ್ಯ ಜನರು ನಂಬೋಕು ಸಾಧ್ಯವಾಗದ ಆಚರಣೆಗಳಿವೆ. ಹಾಗಿದ್ದರೂ ಮದುವೆಯಾಗುವ ಹುಡುಗ- ಹುಡುಗಿಯ ವಿಚಾರದಲ್ಲಿ ದೇಶದ ಬಹುತೇಕ ಎಲ್ಲಾ ಕಡೆ ಒಂದೇ ರೀತಿಯ ಪದ್ಧತಿ ಅನುಸರಣೆಯಲ್ಲಿದೆ. ಆದರೆ ಇದೊಂದು ಊರಲ್ಲಿ ವಿಚಿತ್ರವಾದ ಮದುವೆ ಪದ್ಧತಿ ಆಚರಣೆಯಲ್ಲಿದೆ. ಈ ಬುಡಕಟ್ಟು ಜನಾಂಗದಲ್ಲಿ ಒಡಹುಟ್ಟಿದ ಸಹೋದರನನ್ನೇ ಸಹೋದರಿ ಮದುವೆಯಾಗಬೇಕು.. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಹುಡುಗ ಹುಡುಗಿಯರು ದೊಡ್ಡವರಾದ ಮೇಲೆ ಗಂಡ -ಹೆಂಡತಿಯಾಗುತ್ತಾರೆ. ಈ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.
ಇದನ್ನೂ ಓದಿ: ಹೆತ್ತವರ ಜೊತೆ ರಾಂಚಿ ಟೆಸ್ಟ್ ಹೀರೋ ಧ್ರುವ್ ಜುರೆಲ್ – ತಂದೆ ತಾಯಿಗೆ ಪ್ರಶಸ್ತಿ ಅರ್ಪಣೆ
ಛತ್ತೀಸ್‌ಗಢ ಅತಿಹೆಚ್ಚು ಬುಡಕಟ್ಟು ಜನರನ್ನು ಹೊಂದಿರುವ ರಾಜ್ಯ. ಇದರಲ್ಲಿ ‘ಧುರ್ವಾ’ ಎಂಬ ಬುಡಕಟ್ಟು ಕೂಡ ಒಂದು. ಈ ಬುಡಕಟ್ಟು ಜನಾಂಗದವರು, ಹೊರಗಿನ ಜನರು ಮತ್ತು ಅವರ ಪದ್ಧತಿಗಳಿಂದ ದೂರವಿದ್ದಾರೆ. ಆದ್ದರಿಂದಲೇ ಧುರ್ವಾ ಬುಡಕಟ್ಟಿನ ಆಚಾರ- ವಿಚಾರಗಳೂ ವಿಚಿತ್ರವಾಗಿವೆ. ‘ಧುರ್ವಾ’ ಬುಡಕಟ್ಟು ಸಂಪ್ರದಾಯಗಳ ಪ್ರಕಾರ.. ಇಲ್ಲಿ ಪೋಷಕರು ತಮ್ಮ ಇಬ್ಬರು ಮಕ್ಕಳಿಗೆ ಮದುವೆ ಮಾಡುತ್ತಾರೆ. ಅಂದರೆ ಅಣ್ಣ ತಂಗಿಯರಿಗೆ ಮದುವೆ ಮಾಡುವ ಪದ್ಧತಿ ಇದೆ. ಮಗಳನ್ನು ಸ್ವಂತ ಮಗನಿಗೆ ಮದುವೆ ಮಾಡುವ ಪದ್ಧತಿ ಇಲ್ಲಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ.
ಇಲ್ಲಿನವರು ಯಾಕೆ ಇಂತಹ ವಿಚಿತ್ರ ಪದ್ಧತಿ ಅನುಸರಿಸುತ್ತಿದ್ದಾರೆ ಎಂಬ ವಿವರ ಹೊರಜಗತ್ತಿಗೆ ಗೊತ್ತಿಲ್ಲ. ಆದರೆ ಸಹೋದರ ಸಹೋದರಿಯರಲ್ಲಿ ಯಾರಾದರೂ ಮದುವೆಯಾಗಲು ನಿರಾಕರಿಸಿದರೆ. ಭಾರೀ ದಂಡ ತೆರಬೇಕಾಗುತ್ತದೆ. ಛತ್ತೀಸ್ಗಢದ ಬುಡಕಟ್ಟಿನಲ್ಲಿರುವ ಈ ಪದ್ಧತಿಯ ಬಗ್ಗೆ ಅನೇಕ ವಾದಗಳಿವೆ. ‘ಧುರ್ವಾ’ ಬುಡಕಟ್ಟಿನಲ್ಲಿ ಕಡಿಮೆ ಜನಸಂಖ್ಯೆಯಿರೋದ್ರಿಂದಲೇ ಮದುವೆಗೆ ಹೆಣ್ಣು ಸಿಗದೆ ಈ ರೀತಿಯಲ್ಲಿ ಮದುವೆ ಮಾಡಿಕೊಳ್ಳುತ್ತಾರಂತೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಇದುವರೆಗೆ ಯಾರೂ ಖಾತ್ರಿಪಡಿಸಿಲ್ಲ.. ಏನೇ ಆದರೂ ನಾಗರಿಕ ಸಮಾಜದಲ್ಲಿ ಇಂತಹ ಪದ್ದತಿಗಳು ಆಚರಣೆ ಯಲ್ಲಿ ಇರೋದು ಮಾತ್ತ ಅಚ್ಚರಿಗೆ ಕಾರಣವಾಗಿದೆ.