ಸಿಎಂಗೆ ತಲೆನೋವಾಯ್ತು ಮುಡಾ ಕೇಸ್‌ – ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಸಿಎಂಗೆ ತಲೆನೋವಾಯ್ತು ಮುಡಾ ಕೇಸ್‌ – ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಬ್‌ ಸಿಡಿಸಿದ ಹೆಚ್‌ಡಿಕೆ

ಮುಡಾ ಪ್ರಕರಣ ಸಂಬಂಧ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಪ್ರಮುಖ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಮತ್ತಷ್ಟು ತಲೆನೋವು ತಂದಿದೆ. ಇದ್ರ ಬೆನ್ನಲ್ಲೇ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ  ಸಿದ್ದರಾಮಯ್ಯ ವಿರುದ್ಧ ಹೊಸ ಬಾಂಚ್‌ ಸಿಡಿಸಿದ್ದಾರೆ. ಮುಡಾ ಕೇಸ್‌ ಸಂಬಂಧ ಮೈಸೂರಿನ ಹಿನಕಲ್ ನಲ್ಲಿ 1986 ರಲ್ಲಿ 434 ಎಕರೆ ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತೆ. 17/4 ರಲ್ಲಿ ಎಲ್ಲ ತೆಗೆದರೆ ಗೊತ್ತಾಗುತ್ತದೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ದೊಡ್ಮನೆಯಿಂದ ಜಗದೀಶ್‌ ಔಟ್‌ – ಬಿಗ್​ಬಾಸ್​ನಿಂದ ಹೊರಬಂದು ಕ್ಷಮೆ ಕೇಳಿದ್ಯಾರಿಗೆ?

ಈ ಬಗ್ಗೆ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಎಚ್​ಡಿಕೆ, ಸಿದ್ದರಾಮಯ್ಯ ಅವರ ಇದು ಬೇರೆ. ಆದರೆ, ಇದು‌ ಕೂಡ ಮೂಡ ವಿಚಾರ. ಮೈಸೂರಿನ ಹಿನಕಲ್ ನಲ್ಲಿ 1986 ರಲ್ಲಿ 434 ಎಕರೆ ಹೊಸ ಬಡಾವಣೆ ಮಾಡಲು ನೋಟಿಫಿಕೇಷನ್ ಆಗುತ್ತೆ. 17/4 ರಲ್ಲಿ ಎಲ್ಲ ತೆಗೆದರೇ ಗೊತ್ತಾಗುತ್ತದೆ. ಸತ್ಯಾಮೇವಾ ಜಯತೆ ಅನ್ನುತ್ತಾರೆ. ಸಾಕಮ್ಮ ಎಂಬವವರ ಕೈಯಲ್ಲಿ ಅರ್ಜಿ ಹಾಕಿಸಿದ್ದಾರೆ. 20 ದಿನದಲ್ಲಿ ಡಿನೋಟಿಫಿಕೇಷನ್ ಆಗುತ್ತೆ. ಅದನ್ನ ಸಿಎಂ ಅವರು ಕೊಂಡುಕೊಂಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಈಗಾಗಲೇ ಪತ್ನಿ ಪಾರ್ವತಿ ಪಡೆದುಕೊಂಡಿದ್ದ 15 ಮುಡಾ ಸೈಟ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಕೋರ್ಟ್ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿದೆ. ಮತ್ತೊಂದೆಡೆ ಇಡಿ ಸಹ ದೂರು ದಾಖಲಿಸಿಕೊಂಡಿದೆ. ಹೀಗಾಗಿ ಸಿದ್ದರಾಮಯ್ಯನವರ 40 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಎಫ್​ಐಆರ್ ದಾಖಲಾಗಿದೆ. ಹೀಗಾಗಿ ಸಿದ್ದರಾಮಯ್ಯನವರ ಸಿಎಂ ಕುರ್ಚಿಗೆ ಕಂಟಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಏನಾಗುತ್ತೋ ಏನೋ ಎನ್ನುವ ಆತಂಕದಿಂದ ಸಿದ್ದರಾಮಯ್ಯ ತಮ್ಮ ಪತ್ನಿಯಿಂದ ಮುಡಾಗೆ ಸೈಟ್ ಹಿಂದಿರುಸಿದ್ದಾರೆ. ಆದರೂ ಸಹ ಸಿಎಂ ಟೆನ್ಷನ್​ನಲ್ಲಿ ದಿನ ದೂಡುತ್ತಿದ್ದಾರೆ. ಇದರ ಮಧ್ಯೆ ಕುಮಾರಸ್ವಾಮಿ ಸಹ ಸಿಎಂ ವಿರುದ್ಧ ಮತ್ತೊಂದು ಮುಡಾ ಹಗರಣ ಬಾಂಬ್ ಸಿಡಿಸಿದ್ದಾರೆ.

Shwetha M

Leave a Reply

Your email address will not be published. Required fields are marked *