ವೈದ್ಯಕೀಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಮಹತ್ವ – ಎಲ್ಲೆಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ..!?

ವೈದ್ಯಕೀಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಮಹತ್ವ – ಎಲ್ಲೆಲ್ಲಿ ನರ್ಸಿಂಗ್ ಕಾಲೇಜು ಸ್ಥಾಪನೆ..!?

ಕೊರೊನಾ ಬಳಿಕ ವೈದ್ಯಕೀಯ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಹಾಗೇ ವೈದ್ಯಲೋಕದ ಮಹತ್ವದ ಬಗ್ಗೆಯೂ ಗೊತ್ತಾಗಿದೆ. ಹೀಗಾಗಿ ಈ ಬಾರಿಯ ಬಜೆಟ್​ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಬಾರಿಯ ಬಜೆಟ್​ನಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಏನೆಲ್ಲಾ ಕೊಡುಗೆ ಸಿಕ್ಕಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಚಿನ್ನದ ಬೆಲೆ ಏರಿಕೆ.. ಸಿಗರೇಟ್ ಪ್ರಿಯರಿಗೆ ಬರೆ – ಯಾವ್ಯಾವ ಮೊಬೈಲ್ ಗಳ ದರ ಇಳಿಕೆ..!?

– 2014ರಿಂದ ಸ್ಥಾಪನೆಗೊಂಡ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜು ಸ್ಥಾಪನೆ

– ವೈದ್ಯಕೀಯ ಕಾಲೇಜು ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು

– ವೈದ್ಯಕೀಯ ಸಲಕರಣೆಗಳಿಗೂ ಹೆಚ್ಚಿನ ಅನುದಾನ

– ಭಾರತದಲ್ಲೇ ಔಷಧ ಉತ್ಪಾದನೆ ಹಾಗೂ ಸಂಶೋಧನೆಗೆ ಒತ್ತು

– ಸರ್ಕಾರಿ ಸ್ವಾಮ್ಯದ ಐಸಿಎಂಆರ್ ಜತೆ ಖಾಸಗಿ ಸಂಶೋಧನಾ ಸಂಸ್ಥೆಗಳ ಒಪ್ಪಂದ

– 2047 ರ ವೇಳೆಗೆ ಸಿಕಲ್-ಸೆಲ್ ಅನೀಮಿಯಾ ತೊಡೆದುಹಾಕಲು ಮಿಷನ್ ಸ್ಥಾಪನೆ

– ರೋಗ ಪೀಡಿತ ಬುಡಕಟ್ಟು ಪ್ರದೇಶಗಳಲ್ಲಿ 40 ವರ್ಷದೊಳಗಿನ 7 ಕೋಟಿ ಜನರಿಗೆ ತಪಾಸಣೆ

suddiyaana