ಕೇಂದ್ರ ಬಜೆಟ್‌ 2025 – ಯಾವ ವಸ್ತುಗಳು ಅಗ್ಗ? ಯಾವುದು ದುಬಾರಿ?

ಕೇಂದ್ರ ಬಜೆಟ್‌ 2025 – ಯಾವ ವಸ್ತುಗಳು ಅಗ್ಗ? ಯಾವುದು ದುಬಾರಿ?

ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು ಇಂದು 2025ರ ಸಾಲಿನ ಬಜೆಟ್ ಮಂಡನೆ ಮಾಡಿದರು. ಈ ಬಾರಿಯ ಬಜೆಟ್ ಯುವಕರು, ಮಹಿಳೆಯರನ್ನು ಹೆಚ್ಚು ಕೇಂದ್ರಿಕರಿಸಿದೆ. ಬಡವರು, ಮಧ್ಯಮವರ್ಗದವರು, ರೈತರಿಗೆ ಬಜೆಟ್​ನಲ್ಲಿ ವಿಶೇಷ ಉಡುಗೊರೆಯನ್ನು ನೀಡಲಾಗಿದೆ.

ಇದನ್ನೂ ಓದಿ: ಅಳೆದು ತೂಗಿ ಪಾಕ್ ಟೀಂ ಅನೌನ್ಸ್ – ಹಾಲಿ ಚಾಂಪಿಯನ್ ಸ್ಟ್ರೆಂಥ್ ಏನು?

ಬಜೆಟ್‌ ನಲ್ಲಿ ಹಣ ದುಬ್ಬರ ಮತ್ತು ತೆರಿಗೆ ವಿಷಯದಲ್ಲಿ ಬಿಗ್ ರಿಲೀಫ್ ನೀಡಲು ಮುಂದಾಗಿದೆ. ಬಜೆಟ್​ಗೂ ಮುನ್ನವೇ ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ ಕಡಿಮೆ ಮಾಡಲಾಗಿದೆ. ಇನ್ನು ಬಜೆಟ್ ಮಂಡನೆ ವೇಳೆ ಅನೇಕ ವಸ್ತುಗಳ ಮೇಲಿನ ಕಸ್ಟಮ್ ಸುಂಕವನ್ನು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ. ಅನೇಕ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್, ಔಷಧಿಗಳು, ಎಲೆಕ್ಟ್ರಿಕ್ ವಾಹನಗಳು ಕಡಿಮೆ ಬೆಲೆಗೆ ಸಿಗಲಿವೆ.

ಯಾವುದೆಲ್ಲ ಅಗ್ಗ..?

  • ಎಲೆಕ್ಟ್ರಾನಿಕ್ಸ್
  • 56 ಔಷಧಿಗಳು
  •  ಮೊಬೈಲ್ ಫೋನ್​ & ಬ್ಯಾಟರಿ
  •  ಎಲೆಕ್ಟ್ರಿಕ್ ಕಾರು
  •  ಫಿಶ್ ಪೇಸ್ಟ್​
  • ಚರ್ಮದ ಉತ್ಪನ್ನ
  •  ಮರೈನ್ ಪ್ರಾಡೆಕ್ಟ್​
  •  ಎಲ್​ಇಡಿ ಟಿವಿಗಳು
  •  ಕೊಬಾಲ್ಟ್ ಪೌಡರ್
  •  ಸ್ಕ್ರಾಪ್ ಆಫ್ ಲಿಥಿಯಮ್
  •  ಜಿಂಕ್ ( Zinc)

ಯಾವುದೆಲ್ಲ ದುಬಾರಿ

  • ಫ್ಲಾಟ್​ ಪ್ಯಾನಲ್ ಡಿಸ್​​ಪ್ಲೆ
  •  ಬಟ್ಟೆಗಳು
  •  ಟೆಕ್ ಮತ್ತು ಉತ್ಪಾದನಾ ವಲಯ ದುಬಾರಿ
  •  ಆಮದು ಮತ್ತು ರಫ್ತು ವ್ಯವಹಾರ ಹೊಂದಿರುವ ಕೆಲವು ಕೈಗಾರಿಕೆಗಳ ಮೇಲೆ ಪರಿಣಾಮ

Shwetha M