12 ಲಕ್ಷದ ತನಕ ತೆರಿಗೆ ಇಲ್ಲ.. ಟಿವಿ, ಮೊಬೈಲ್ , ಔಷಧಿ ಅಗ್ಗ -ಮಧ್ಯಮ ವರ್ಗಕ್ಕೆ ಜಾಕ್‌ಪಾಟ್
ಇನ್ನು ನಿರ್ಮಲಾ ಸೀತಾರಾಮನ್ 8ನೇ ಬಜೆಟ್‌ನಲ್ಲಿ ಉದ್ಯೋಮಗಳಿಗೂ ಕೂಡ ಸಾಕಷ್ಟು ಕೂಡುಗೆಯನ್ನ ನೀಡಿದ್ದಾರೆ. ಟಿವಿ, ಮೊಬೈಲ್, ಎಲೆಕ್ಟ್ರಿಕ್ ಕಾರುಗಳು ಮತ್ತು ಭಾರತದಲ್ಲಿ ತಯಾರಿಸಿದ ಬಟ್ಟೆಗಳು, ಚರ್ಮದ ವಸ್ತುಗಳೂ ಅಗ್ಗವಾಗಲಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಧ್ಯಮ ವರ್ಗಕ್ಕೆ ಜಾಕ್‌ಪಾಟ್.. 12 ಲಕ್ಷದ ತನಕ ತೆರಿಗೆ ಇಲ್ಲ
ಬಜೆಟ್ 2025ರಲ್ಲಿ ಮತ್ತೊಮ್ಮೆ ತೆರಿಗೆದಾರರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮಧ್ಯಮವರ್ಗದವರಿಗೆ ಇದರಿಂದ ಕೊನೆಗೂ ನೆಮ್ಮದಿ ಸಿಕ್ಕಿದೆ ಅಂದ್ರೆ ತಪ್ಪಾಗಲ್ಲ. 12 ಲಕ್ಷದವರೆಗೂ ಸಂಬಳ ಪಡೆಯುವವರು ಯಾವುದೇ ಟ್ಯಾಕ್ಸ್ ಕಟ್ಟುವಂತಿಲ್ಲ ಇದ್ರಿಂದ ಮಧ್ಯಮಕ್ಕೆ ಸಾಕಷ್ಟು ಅನುಕೂಲವಾಗಲಿದೆ.
ಆದಾಯ ತೆರಿಗೆ ನಿಯಮಗಳಲ್ಲಿ ಬದಲಾವಣೆ
ಬಜೆಟ್‌ನಲ್ಲಿ ಆದಾಯ ತೆರಿಗೆ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಬರಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆದಾಯ ತೆರಿಗೆ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದೆ.
ರಾಜ್ಯಗಳಿಗೆ 50 ವರ್ಷ ಬಡ್ಡಿ ರಹಿತ ಸಾಲ
- 7.5 ಕೋಟಿ ಮಂದಿಗೆ ಉದ್ಯೋಗ ಸೃಷ್ಟಿಸುವ ಸಣ್ಣ ಮತ್ತು ಅತಿ ಸಣ್ಣ ಉದ್ಯಮ
- ಸಣ್ಣ ಮತ್ತು ಅತಿ ಸಣ್ಣ ಉದ್ಯಮದಿಂದ 36% ಉತ್ಪಾದನೆ ಮಾಡುತ್ತಿದೆ.
- ಉದ್ಯಮಗಳಿಗೆ 20 ಕೋಟಿ ವರೆಗೂ ಸಾಲ ನೀಡಲಾಗುವುದು
ಇಂಡಿಯಾ ಪೋಸ್ಟ್ ಲಾಜಿಸ್ಟಿಕ್ ಸಂಸ್ಥೆ
- ಇಂಡಿಯಾ ಪೋಸ್ಟ್ ಲಾಜಿಸ್ಟಿಕ್ ಸಂಸ್ಥೆ
- ಪ್ರಮುಖ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲು ನಿರ್ಧಾರ
ಐಐಟಿಗಳಿಗೆ ಹೆಚ್ಚುವರಿ ಮೂಲಸೌಕರ್ಯ
- 2014 ರ ನಂತರ ಸ್ಥಾಪಿಸಲಾದ ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯ
- ಐಐಟಿ ಪಾಟ್ನಾವನ್ನು ವಿಸ್ತರಿಸಲಾಗುವುದು
- ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಣೆ
ಉಡಾನ್ ಯೋಜನೆಯಲ್ಲಿ ಮಹತ್ವದ ಬದಲಾವಣೆ
- ಉಡಾನ್ ಯೋಜನೆಯಲ್ಲಿ ಮಹತ್ವದ ಬದಲಾವಣೆ
- ವಿಮಾನ ಮತ್ತು ಹೆಲಿಕಾಪ್ಟರ್ ಪ್ರಯಾಣಕ್ಕೆ ಉತ್ತೇಜನ
- ಬಿಹಾರ್ ರಾಜ್ಯದಲ್ಲಿ ಗ್ರೀನ್ ಫೀಲ್ಡ್ ಏರ್‌ಪೋರ್ಟ್
- ಬಿಹಾರದ ಪಾಟ್ನಾ ಏರ್‌ಪೋರ್ಟ್ ಮೇಲ್ದರ್ಜೆಗೆ
ಹೂಡಿಕೆ ಮಿತಿಗಳ ಹೆಚ್ಚಳ
- ಎಲ್ಲಾ ಎಂಎಸ್‌ಎಂಇಗಳ ವರ್ಗೀಕರಣ
- ಹೂಡಿಕೆ ಮತ್ತು ವಹಿವಾಟು ಮಿತಿಗಳ ಹೆಚ್ಚಳ
- ಹೂಡಿಕೆ ಮಿತಿ 2.5 ಮತ್ತು ವಹಿವಾಟು ಮಿತಿ 2 ಪಟ್ಟು ಹೆಚ್ಚಿಸಲಾಗುವುದು
- ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುವ ವಿಶ್ವಾಸವನ್ನು ನೀಡುತ್ತದೆ
ಉದ್ಯಮಕ್ಕೆ ಬಂಪರ್
- ಔಷಧ ಉದ್ಯಮಕ್ಕೆ ಬಂಪರ್, ಆಮದು ಸುಂಕ ರದ್ದು
- 15 ಹಂತಗಳ ಪೈಕಿ 7 ಹಂತಗಳ ಆಮದು ಸುಂಕ ರದ್ದು
- 36 ಕ್ಯಾನ್ಸರ್ ಔಷಧಗಳ ಮೇಲಿನ ಆಮದು ಸುಂಕ ರದ್ದು
- 6 ಅತ್ಯಾವಶ್ಯಕ ಔಷಧಗಳ ಮೇಲಿನ ಆಮದು ಸುಂಕ ರದ್ದು
- ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ
- ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ವೇದಿಕೆಯಲ್ಲಿ ನೋಂದಣಿ
- ಒಟ್ಟು 20,000 ಕೋಟಿ ರೂ.ನಲ್ಲಿ ಪರಮಾಣು ಶಕ್ತಿ ಮಿಷನ್
- 2047 ರ ವೇಳೆಗೆ 100 GW ಪರಮಾಣು ಶಕ್ತಿ ಸಾಮರ್ಥ್ಯ ಹೊಂದುವ ಗುರಿ
- ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಉತ್ತೇಜಿಸಲಾಗುವುದು
- ಸುಧಾರಣೆಗಳನ್ನು ಮುಂದುವರಿಸಲು ರಾಜ್ಯಗಳಿಗೆ GSDP ಯ 0.5 ಪ್ರತಿಶತದಷ್ಟು ಸಾಲ
- ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಸಾಲ
- ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಸಾಲವನ್ನು ಸರ್ಕಾರ ನೀಡಲಿದೆ.
ವಿಮಾ ವಲಯದ ಮಿತಿ ಹೆಚ್ಚಳ.. – ಸ್ಟಾರ್ಟಪ್‌ಗಳಿಗೆ ಪ್ರೋತ್ಸಾಹ
ಔಷಧ ಉದ್ಯಮಕ್ಕೆ ಬಂಪರ್ ಸಿಕ್ಕಿದ್ದು, ಆಮದು ಸುಂಕ ರದ್ದು ಮಾಡಲಾಗಿದೆ. 15 ಹಂತಗಳ ಪೈಕಿ 7 ಹಂತಗಳ ಆಮದು ಸುಂಕ ರದ್ದು ಮಾಡಲಾಗಿದೆ. 36 ಕ್ಯಾನ್ಸರ್ ಔಷಧಗಳ ಮೇಲಿನ ಆಮದು ಸುಂಕ ರದ್ದು ಮಡಲಾಗಿದೆ. 6 ಅತ್ಯಾವಶ್ಯಕ ಔಷಧಗಳ ಮೇಲಿನ ಆಮದು ಸುಂಕ ರದ್ದು ಮಡಲಾಗಿದೆ. .ಒಂದು ಕೋಟಿ ಗಿಗ್ ಕಾರ್ಮಿಕರಿಗೆ ಸಹಾಯ ಮಾಡಲು ಸರ್ಕಾರವು ಗುರುತಿನ ಚೀಟಿಗಳು ಮತ್ತು ಇ-ಶ್ರಮ್ ವೇದಿಕೆಯಲ್ಲಿ ನೋಂದಣಿಗೆ ವ್ಯವಸ್ಥೆ ಮಾಡುತ್ತದೆ. ಒಟ್ಟು 20,000 ಕೋಟಿ ರೂ.ನಲ್ಲಿ ಪರಮಾಣು ಶಕ್ತಿ ಮಿಷನ್ ರಚಿಸಲಾಗುವುದು. 2047 ರ ವೇಳೆಗೆ 100 GW ಪರಮಾಣು ಶಕ್ತಿ ಸಾಮರ್ಥ್ಯವನ್ನು ಹೊಂದುವ ಗುರಿಯನ್ನು ಹೊಂದಿದೆ. ವಿದ್ಯುತ್ ವಿತರಣಾ ಕಂಪನಿಗಳಲ್ಲಿ ಸುಧಾರಣೆಗಳನ್ನು ಉತ್ತೇಜಿಸಲಾಗುವುದು, ಸುಧಾರಣೆಗಳನ್ನು ಮುಂದುವರಿಸಲು ರಾಜ್ಯಗಳಿಗೆ GSDP ಯ 0.5 ಪ್ರತಿಶತದಷ್ಟು ಸಾಲವನ್ನು ಅನುಮತಿಸಲಾಗುವುದು. ಐದು ಲಕ್ಷ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ಪ್ರಥಮ ಬಾರಿಗೆ 2 ಕೋಟಿ ರೂಪಾಯಿ ಸಾಲವನ್ನು ಸರ್ಕಾರ ನೀಡಲಿದೆ. ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು 74 ಪ್ರತಿಶತದಿಂದ 100 ಪ್ರತಿಶತಕ್ಕೆ ಹೆಚ್ಚಳ ಕೇಂದ್ರ ಸರ್ಕಾರ 10,000 ಕೋಟಿ ರೂಪಾಯಿಗಳ ಯೋಜನೆಯೊಂದಿಗೆ ಸ್ಟಾರ್ಟ್‌ಅಪ್‌ಗಳಿಗೆ ಆರ್ಥಿಕ ಬಲ ನೀಡಲಾಗಿದೆ.