ಕೆಲಸ ಕೊಡಿ ಸಾರ್‌ ಕೆಲಸ.. – ಮೇ ತಿಂಗಳಿನಲ್ಲಿ ದೇಶದ  ನಿರುದ್ಯೋಗ ಪ್ರಮಾಣ ಶೇ. 7.7ಕ್ಕೆ  ಇಳಿಕೆ!

ಕೆಲಸ ಕೊಡಿ ಸಾರ್‌ ಕೆಲಸ.. – ಮೇ ತಿಂಗಳಿನಲ್ಲಿ ದೇಶದ  ನಿರುದ್ಯೋಗ ಪ್ರಮಾಣ ಶೇ. 7.7ಕ್ಕೆ  ಇಳಿಕೆ!

ನವದೆಹಲಿ: ಜಗತ್ತನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು. ಇದೀಗ ಭಾರತದಲ್ಲಿ ಮೇ ತಿಂಗಳ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಶೇ. 7.7ಕ್ಕೆ ಇಳಿದಿದೆ ಎಂದು ಅಧ್ಯಯನ ವರದಿಯಿಂದ ಗೊತ್ತಾಗಿದೆ.

ಖಾಸಗಿ ಆರ್ಥಿಕ ಅಧ್ಯಯನ ಸಂಸ್ಥೆ ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ಯ ಅಧ್ಯಯನದ ಪ್ರಕಾರ, ಭಾರತದಲ್ಲಿ 15 ವರ್ಷ ಹಾಗೂ ಮೇಲ್ಪಟ್ಟ ವಯಸ್ಸಿನ ನಿರುದ್ಯೋಗಿಗಳ ಪ್ರಮಾಣ ಮೇ ತಿಂಗಳಲ್ಲಿ ಶೇ. 7.7ರಷ್ಟು ದಾಖಲಾಗಿದೆ. ಏಪ್ರಿಲ್‌ ತಿಂಗಳಿನಲ್ಲಿ ಶೇ. 8.5ರಷ್ಟು ದಾಖಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ; ಕಾಶ್ಮೀರದಲ್ಲಿ ಐಎಸ್‌ಐ ಯ ವಿಧ್ವಂಸಕ ಕೃತ್ಯ ಬಯಲು – ಉಗ್ರ ಸಂದೇಶಗಳಿಗೆ ಬಾಲಕಿಯರ ಬಳಕೆ!

ಊದ್ಯೋಗ ಮಾರುಕಟ್ಟೆಯಲ್ಲಿ 15 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಶ್ರಮಿಕರ ಭಾಗವಹಿಸುವಿಕೆಯ (ಲೇಬರ್‌ ಪಾರ್ಟಿಸಿಪೇಶನ್‌ ರೇಶೋ-ಎಲ್‌ಆರ್‌ಪಿ) ಪ್ರಮಾಣದಲ್ಲೂ ಮೇ ತಿಂಗಳ ಅವಧಿಯಲ್ಲಿ ಕುಸಿತ ಕಂಡಿದೆ. ಹೀಗಾಗಿ ನಿರುದ್ಯೋಗ ಪ್ರಮಾಣ ಕೂಡ ಕಡಿಮೆಯಾಗಿದೆ. ಅಂದರೆ, ಉದ್ಯೋಗ ಮಾರುಕಟ್ಟೆಯಲ್ಲಿ ಹೊಸದಾಗಿ ಉದ್ಯೋಗ ಅರಸುವ ಕಾರ್ಮಿಕರ ಸಂಖ್ಯೆಯಲ್ಲೂ ಮೇ ತಿಂಗಳಲ್ಲಿ ಕಡಿತ ಆಗಿದೆ. ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಶ್ರಮಿಕರ ಭಾಗವಹಿಸುವಿಕೆಯ ಪ್ರಮಾಣ ಶೇ. 1.1ರಷ್ಟು ಕಡಿಮೆ ಆಗಿದೆ. ಅಂದರೆ ಮೇ ತಿಂಗಳಲ್ಲಿ ಶೇ. 39.6ರಷ್ಟು ಎಲ್‌ಆರ್‌ಪಿ ಕಂಡುಬಂದಿದ್ದು, ಹಿಂದಿನ ತಿಂಗಳು ಶೇ. 40ರಷ್ಟು ಇತ್ತು ಎಂದು ವರದಿಯಿಂದ ಗೊತ್ತಾಗಿದೆ.

ಮೇ ತಿಂಗಳಿನಲ್ಲಿ ಉದ್ಯೋಗ ಹುಡುಕುವ ಪ್ರಮಾಣ ಕಡಿಮೆಯಾಗಿದೆ. ಏಕೆಂದರೆ ಏಪ್ರಿಲ್‌ ತಿಂಗಳಿನಲ್ಲಿ ಭಾರಿ ಸಂಖ್ಯೆಯ ಕಾರ್ಮಿಕರು ಉದ್ಯೋಗದ ನಿರೀಕ್ಷೆಯಲ್ಲಿದ್ದರೂ ತೀರಾ ಕಡಿಮೆ ಪ್ರಮಾಣದಲ್ಲಿ ಕೆಲಸ ಸಿಕ್ಕಿದೆ. ನಿರಾಶೆಗೊಂಡ ದೊಡ್ಡ ಸಂಖ್ಯೆಯ ಕಾರ್ಮಿಕರು ಮೇ ತಿಂಗಳಿನಲ್ಲಿ ಉದ್ಯೋಗ ಹುಡುಕುವ ಪ್ರಯತ್ನ ಮಾಡಿಲ್ಲ. ಹೀಗಾಗಿ ಏಪ್ರಿಲ್‌ನಲ್ಲಿ 453.5 ದಶಲಕ್ಷ ಜನರು ಉದ್ಯೋಗ ಬಯಸಿದ್ದರೆ, ಮೇ ತಿಂಗಳಲ್ಲಿ 441.9 ದಶಲಕ್ಷ ಜನರು ಉದ್ಯೋಗ ಅರಸಿದ್ದಾರೆ. ಇದರಿಂದ ಒಟ್ಟಾರೆ ನಿರುದ್ಯೋಗ ಪ್ರಮಾಣದಲ್ಲಿಇಳಿಕೆಯಾಗಿದೆ,” ಎಂದು ಎಂದು ಸಿಎಂಐಇ ವಿಶ್ಲೇಷಕಿ ನತಾಶ ಸೋಮಯ್ಯ ವಿಶ್ಲೇಷಿಸಿದ್ದಾರೆ.

suddiyaana