ಪಕ್ಕದ್ಮನೆ ಆಂಟಿಯನ್ನ ಹಿಂಬಿದಿಯಿಂದ ತಬ್ಬಿಕೊಂಡ ಅಂಕಲ್! – ಆಮೇಲೆ ಆಗಿದ್ದೇನು ಗೊತ್ತಾ?

ಈಗಿನ ಕಾಲದಲ್ಲಿ ಯಾರು ಒಳ್ಳೆಯವರು? ಯಾರು ಕೆಟ್ಟವರು ಅನ್ನೋದೇ ಗೊತ್ತಾಗಲ್ಲ. ಇದೀಗ ಇಲ್ಲೊಂದು ಕಡೆ ವಠಾರದ ಅಂಕಲ್ ಒಬ್ಬ ಪಕ್ಕದ ಮನೆಯ ಮಹಿಳೆಯನ್ನ ಹಿಂಬದಿಯಿಂದ ತಪ್ಪಿಕೊಂಡು ದೊಡ್ಡ ಅವಾಂತರ ಸೃಷ್ಟಿಸಿದ್ದಾನೆ. ಇದನ್ನ ಪ್ರಶ್ನಿಸಿದ ಮಹಿಳೆ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ತಮಿಳುನಾಡಿನದಲ್ಲಿ ವಿಜಯ್‌ಗೆ ಶಾಕ್! – ಡಿಎಂಕೆ-ಎಐಎಡಿಎಂಕೆ ಮೈತ್ರಿ ಆಗುತ್ತಾ?
ಈ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಶಂಕರಪುರ ರಂಗರಾವ್ ರಸ್ತೆಯಲ್ಲಿ ನಡೆದಿದೆ. ಪುಟ್ಟರಾಜ ಎಂಬಾತ ತಬ್ಬಿ ವಿಕೃತಿ ಮೆರೆದಿದ್ದಾನೆ. ಇದನ್ನ ಪ್ರಶ್ನೆ ಮಾಡಿದ ಮಹಿಳೆಯ ಪತಿ ನಂದೀಶ್ ಮೇಲೆ ಮಚ್ಚು, ದೋಸೆ ತವಾದಿಂದ ಹಲ್ಲೆ ಕೂಡ ನಡೆಸಿದ್ದಾನೆ. ತ್ರೀವ ಹಲ್ಲೆಗೊಳಗಾದ ನಂದೀಶ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಅಷ್ಟಕ್ಕೂ ಆಗಿದ್ದೇನು?
ನಂದೀಶ್ ಹಾಗೂ ಆತನ ಹೆಂಡ್ತಿ ಶಂಕರಪುರ ರಂಗರಾವ್ ರಸ್ತೆಯಲ್ಲಿರುವ ಗಿರೀಶ್ ಜೈನ್ ಎಂಬುವರ ಮನೆಯಲ್ಲಿ ವಾಸವಾಗಿದ್ರು. ಇದೇ ವಠಾರದಲ್ಲಿ ಪುಟ್ಟರಾಜು ಹಾಗೂ ಆತನ ಹೆಂಡ್ತಿ ಸಹ ವಾಸವಾಗಿದ್ರು. ನಂದೀಶ್ ಪತ್ನಿ ಪಾತ್ರೆ ತೊಳೆಯುವ ವೇಳೆ ಪುಟ್ಟರಾಜು ಬಾಗಿಲು ಅರ್ಧಕ್ಕೆ ತೆಗೆದು ನೋಡುತ್ತಿದ್ದನಂತೆ.
ಅದೇ ರೀತಿ ಮೇ 4ರ ರಾತ್ರಿ 8:30 ಸಮಯದಲ್ಲಿ ನಂದೀಶನ ಹೆಂಡ್ತಿ ಪಾತ್ರೆ ತೊಳೆಯುತ್ತಿದ್ದಾಗ, ಪುಟ್ಟರಾಜು ಆಕೆಯನ್ನ ಹಿಂಬದಿಯಿಂದ ತಬ್ಬಿಕೊಂಡಿದ್ದಾನೆ. ಇದನ್ನ ನೋಡಿ ಮನೆಯಲ್ಲಿದ್ದ ನಂದೀಶ್ ಎಳನೀರು ಕೊಚ್ಚುವ ಮಚ್ಚು ಹಿಡಿದುಕೊಂಡು ಪುಟ್ಟರಾಜು ಬಳಿ ಬಂದಿದ್ದಾನೆ. ಪ್ರಶ್ನೆ ಮಾಡುತ್ತಿದ್ದ ವೇಳೆ ನಂದೀಶ್ ಕೈಯಲ್ಲಿದ್ದ ಮಚ್ಚು ಕಸಿದುಕೊಂಡ ಪುಟ್ಟ ನಂದೀಶನ ಮೇಲೆಯೇ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಗೆ ನಂದೀಶ್ ದೂರು ನೀಡಿದ ಬಳಿಕ ಕೇಸ್ ದಾಖಲಿಸಿಕೊಂಡ ಪೊಲೀಸರು, ಆರೋಪಿ ಪುಟ್ಟರಾಜುನನ್ನ ಬಂಧಿಸಿದ್ದಾರೆ.

ನೋಡಿರಿ

