ವಿಧಾನಸೌಧದಲ್ಲಿ ಅನಧಿಕೃತ ಹಣ: “ಎಲ್ಲಾ ಅಕ್ರಮಗಳಿಗೆ ಬೊಮ್ಮಾಯಿ ಶ್ರೀರಕ್ಷೆ”- ಕಾಂಗ್ರೆಸ್ ಟೀಕೆ

ವಿಧಾನಸೌಧದಲ್ಲಿ ಸಿಕ್ಕ ಅನಧಿಕೃತ 10 ಲಕ್ಷ ರೂಪಾಯಿ ಈಗ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ರೂ. ಅಕ್ರಮ ಹಣವು ಪೇ ಸಿಎಂ ವಸೂಲಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ವಿಧಾನಸೌಧದವಷ್ಟೇ ಅಲ್ಲ, ಸಿಎಂ ಬೊಮ್ಮಾಯಿ ಕುರ್ಚಿಯ ಅಡಿಯಲ್ಲೇ ಹವಾಲಾ ದಂಧೆ, ಕಮಿಷನ್ ಲೂಟಿ, ಹಫ್ತಾ ವಸೂಲಿ ನಡೆಯುತ್ತಿದ್ದರೂ ಬೊಮ್ಮಾಯಿ ಅರಿವಿಗೆ ಬಂದಿಲ್ಲ ಎಂದೇನೂ ಇಲ್ಲ. ಅವರ ಶ್ರೀರಕ್ಷೆಯಲ್ಲೇ ಎಲ್ಲಾ ಅಕ್ರಮಗಳು ನಡೆಯುತ್ತಿವೆ ಎಂದು ಅಪಾದಿಸಿದೆ.
ವಿಧಾನಸೌಧದಲ್ಲಿ ಸಿಕ್ಕ 10 ಲಕ್ಷ ಅಕ್ರಮ ಹಣವು #PayCM ವಸೂಲಿಗೆ ಸಾಕ್ಷಿಯಾಗಿದೆ.
ವಿಧಾನಸೌಧದವಷ್ಟೇ ಅಲ್ಲ @BSBommai ಅವರ ಕುರ್ಚಿಯ ಅಡಿಯಲ್ಲೇ ಹವಾಲಾ ದಂಧೆ, ಕಮಿಷನ್ ಲೂಟಿ, ಹಫ್ತಾ ವಸೂಲಿ ನಡೆಯುತ್ತಿದ್ದರೂ ಸಿಎಂ ಅರಿವಿಗೆ ಬಂದಿಲ್ಲ ಎಂದೇನೂ ಇಲ್ಲ.
ಬೊಮ್ಮಾಯಿಯವರ ಶ್ರೀರಕ್ಷೆಯಲ್ಲೇ ಎಲ್ಲಾ ಅಕ್ರಮಗಳು ನಡೆಯುತ್ತಿವೆ. pic.twitter.com/nYapmOUOrK
— Karnataka Congress (@INCKarnataka) January 5, 2023
ಇದನ್ನೂ ಓದಿ: “ಬಿಜೆಪಿ ಆಡಳಿತದಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಇದೆಯಾ?” – ಆರಗ ಜ್ಞಾನೇಂದ್ರಗೆ ಟ್ವೀಟ್ ಮೂಲಕ ಜೆಡಿಎಸ್ ಪ್ರಶ್ನೆ
ಬುಧವಾರ ಸಂಜೆ 5.30 ಸುಮಾರಿಗೆ ಜಗದೀಶ್ 10 ಲಕ್ಷದೊಂದಿಗೆ ವಿಧಾನಸೌಧಕ್ಕೆ ಬಂದಾಗ ಸಚಿವ ಸಿಸಿ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ. ಸಚಿವರ ಹೊರತಾಗಿ ವಿಧಾನಸೌಧದ ಕೆಲಸದ ಅವಧಿ ಮುಗಿದು ಬಹುತೇಕ ಖಾಲಿಯಾಗಿರುತ್ತದೆ. ಈ ಹಣಕ್ಕೂ, ಆ ಸಚಿವರಿಗೂ ಸಂಬಂಧವಿದೆಯೇ? ಸರ್ಕಾರ ರಹಸ್ಯ ಕಾಪಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದೆ.
ಜಗದೀಶ್ ನಿನ್ನೆ ಸಂಜೆ 5.30 ಸುಮಾರಿಗೆ 10 ಲಕ್ಷದೊಂದಿಗೆ ವಿಧಾನಸೌಧಕ್ಕೆ ಬರುತ್ತಾರೆ.
ಅದೇ ಸಮಯದಲ್ಲಿ ವಿಧಾನಸೌಧದಲ್ಲಿ ಸಚಿವ ಸಿಸಿ ಪಾಟೀಲ್ ಪತ್ರಿಕಾಗೋಷ್ಠಿ ನಡೆಸಿರುತ್ತಾರೆ.
ಸಚಿವರ ಹೊರತಾಗಿ ವಿಧಾನಸೌಧದ ಕೆಲಸದ ಅವಧಿ ಮುಗಿದು ಬಹುತೇಕ ಖಾಲಿಯಾಗಿರುತ್ತದೆ.ಈ ಹಣಕ್ಕೂ, ಆ ಸಚಿವರಿಗೂ ಸಂಬಂಧವಿದೆಯೇ? ಸರ್ಕಾರ ರಹಸ್ಯ ಕಾಪಾಡುತ್ತಿರುವುದೇಕೆ?
— Karnataka Congress (@INCKarnataka) January 5, 2023
ಬಿಪಿಎಲ್ ಪಡಿತರದಾರರಿಗೆ ನೀಡುತ್ತಿರುವ 5 ಕೆಜಿ ಅಕ್ಕಿ ಜೊತೆಗೆ, ಒಂದು ಕೆಜಿ ಅಕ್ಕಿ ಹೆಚ್ಚುವರಿಯಾಗಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಈ ಬಗ್ಗೆಯೂ ಕಾಂಗ್ರೆಸ್ ಕಿಡಿಕಾರಿದೆ.
‘ಕಾಂಗ್ರೆಸ್ ಜಾರಿಗೆ ತಂದ ಆಹಾರ ಭದ್ರತಾ ಕಾಯ್ದೆಯ 5 ಕೆಜಿ ಅಕ್ಕಿಯನ್ನು ಹೊರತುಪಡಿಸಿ ಉಳಿದ 5 ಕೆಜಿ ಅಕ್ಕಿಯನ್ನು ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ ಬಡವರ ಹಸಿದ ಹೊಟ್ಟೆಯನ್ನು ಅಣಕಿಸುತ್ತಿದೆ. ಒಟ್ಟು 10 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 6 ಕೆಜಿಗೆ ಇಳಿಸಿದ ಸರ್ಕಾರ ಬಡವರ ಹೊಟ್ಟೆಗೆ ಹೊಡೆದಿದೆ’ ಎಂದು ಟೀಕಾ ಪ್ರಹಾರ ನಡೆಸಿದೆ.
‘ಶ್ರೀಮಂತ ಉದ್ಯಮಿಗಳ 10 ಲಕ್ಷ ಕೋಟಿಯನ್ನು ಮನ್ನಾ ಮಾಡುವ ಸರ್ಕಾರಕ್ಕೆ ಬಡವರಿಗೆ ನೀಡುವ ಅಕ್ಕಿ ಹೊರೆ ಆಯ್ತೇ? ಎಂದು ಪ್ರಶ್ನಿಸಿದ್ದು, ಬಿಜೆಪಿಯದ್ದು ದಾಸೋಹ ತತ್ವವಲ್ಲ ಅಲ್ಲ “ಗುಳುಂ ಸ್ವಾಹಾ”ದ ತತ್ವವಾಗಿದೆ. ಅನ್ನಭಾಗ್ಯದ ಅಕ್ಕಿ ಮೋದಿಯದ್ದು ಎಂಬ ಸುಳ್ಳು ಪೋಣಿಸುವ ರಾಜ್ಯ ಬಿಜೆಪಿ, ಅನ್ನ ಹಾಕುವ ಬದಲು ಕನ್ನ ಹಾಕುತ್ತಿದೆ’ ಎಂದು ಆರೋಪಿಸಿದೆ.
ರಾಜ್ಯಗಳ ಪಾಲಿಗೆ ಕೇವಲ 1 ಕೆಜಿ ಅಕ್ಕಿ ನೀಡುವ ಮೂಲಕ ಒಟ್ಟು 10 ಕೆಜಿ ನೀಡುತ್ತಿದ್ದ ಅಕ್ಕಿಯನ್ನು 6 ಕೆಜಿಗೆ ಇಳಿಸಿದ ಸರ್ಕಾರ ಬಡವರ ಹೊಟ್ಟೆಗೆ ಹೊಡೆದಿದೆ.
ಶ್ರೀಮಂತ ಉದ್ಯಮಿಗಳ 10 ಲಕ್ಷ ಕೋಟಿಯನ್ನು NPA ಮಾಡುವ ಸರ್ಕಾರಕ್ಕೆ ಬಡವರಿಗೆ ನೀಡುವ ಅಕ್ಕಿ ಹೊರೆ ಆಯ್ತೇ?
ಬಿಜೆಪಿಯದ್ದು ದಾಸೋಹ ತತ್ವವಲ್ಲ ಅಲ್ಲ “ಗುಳುಂ ಸ್ವಾಹಾ”ದ ತತ್ವ.
2/3— Karnataka Congress (@INCKarnataka) January 5, 2023