ಉಮಾಶ್ರೀ ಯಕ್ಷರಂಗ ಪ್ರವೇಶ.. ಮಂಥರೆ ಪಾತ್ರದಲ್ಲಿ ಪುಟ್ಟಕ್ಕ – ಚಿಟ್ಟಾಣಿಗೆ ಕೊಟ್ಟ ಮಾತು ಉಳಿಸಿಕೊಂಡ್ರಾ?
ನಟಿ ಉಮಾಶ್ರೀ.. ಸಿನಿಮಾ ಆಗ್ಲೀ.. ಸೀರಿಯಲ್ ಆಗ್ಲೀ.. ಯಾವುದೇ ಪಾತ್ರ ಕೊಟ್ರೂ ಆ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿಬಿಡ್ತಾರೆ.. 67ರ ಹರೆಯದಲ್ಲಿಯೂ ಅವರ ಮಾಗಿದ ನಟನೆಗೆ ಮನಸೋಲದವರೇ ಇಲ್ಲ. ಅದರಲ್ಲಿಯೂ ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಪಾತ್ರದಲ್ಲಿನ ಅವರ ನಟನೆಗೆ ಕಣ್ಣೀರು ಹಾಕಿದವರು ಅದೆಷ್ಟೋ ಮಂದಿ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ಇದೀಗ ಮೊದಲ ಬಾರಿಗೆ ಯಕ್ಷರಂಗಕ್ಕೂ ಕಾಣಿಸಿಕೊಂಡಿದ್ದಾರೆ ಉಮಾಶ್ರೀ.. ಯಕ್ಷಗಾನವೊಂದರ ಪ್ರಸಂಗದಲ್ಲಿ ಮಂಥರೆಯಾಗಿ ಕಾಣಿಸಿಕೊಂಡಿದ್ದಾರೆ ನಮ್ಮ ಪುಟ್ಮಲ್ಲಿ.
ಇದನ್ನೂ ಓದಿ: ರಾಹುಲ್ Vs ಪಂತ್ Vs ಸಂಜು – ಚಾಂಪಿಯನ್ಸ್ ಟ್ರೋಫಿಗೆ ಯಾರು ಬೆಸ್ಟ್ ವಿಕೆಟ್ ಕೀಪರ್?
ಸ್ಯಾಂಡಲ್ ವುಡ್‌ನ ಹಿರಿಯ ನಟಿ ಉಮಾಶ್ರೀಗೆ ರಂಗಭೂಮಿ ಹೊಸತೇನಲ್ಲ.. ಸಿನಿಮಾ ಸೀರಿಯಲ್ ನಲ್ಲಿ ಯಾವ ಪಾತ್ರಕೊಟ್ರೂ ನೀರು ಕುಡಿದಷ್ಟೇ ಈಸಿಯಾಗಿ ಆಕ್ಟ್ ಮಾಡ್ತಾರೆ.. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಪುಟ್ಮಲ್ಲಿ ಹಾಗೂ ಪುಟ್ಟಕ್ಕನ ಪಾತ್ರ.. ಆದ್ರೆ ಉಮಾಶ್ರೀಗೆ ಯಕ್ಷರಂಗ ಹೊಸದೇ ಆಗಿದೆ.. ಇದೀಗ ಮೊದಲ ಬಾರಿಗೆ ಯಕ್ಷಗಾನದಲ್ಲಿ ಕಾಣಿಸಿಕೊಂಡಿದ್ದಾರೆ.. ಅದೂ ಕೂಡ ರಾಮಾಯಣದ ಮಂಥರೆ ಪಾತ್ರದ ಮೂಲಕ ಸಿನಿಪ್ರೇಮಿಗಳ ಮನಗೆದ್ದಿದ್ದಾರೆ.
ಹೌದು.. ಹೊನ್ನಾವರದ ಪೆರ್ಡೂರು ಮೇಳದಿಂದ ನಿನ್ನೆ ಯಕ್ಷಗಾನ ಆಯೋಜನೆ ಮಾಡಲಾಗಿತ್ತು. ಶ್ರೀರಾಮ ಪಟ್ಟಾಭಿಷೇಕ, ಮಾಯಮೃಗಾವತಿ ಯಕ್ಷಗಾನ ಪ್ರದರ್ಶನ ನಡೆದಿತ್ತು.. ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಉಮಾಶ್ರೀ ಅತ್ಯಂತ ಸವಾಲಿನ ಪಾತ್ರ ಎಂದೇ ಹೇಳಲಾಗುವ ಮಂಥರೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ ಪದ್ಯಕ್ಕೆ ಹೆಜ್ಜೆ ಹಾಕುತ್ತಾ ಉಮಾಶ್ರೀ ರಂಗಪ್ರವೇಶ ಮಾಡಿದ್ರು.. ತನ್ನ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾ ರಂಗಸ್ಥಳವೇರಿದ ಉಮಾಶ್ರೀಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಉಮಾಶ್ರೀ ಜೊತೆ ಕೈಕೇಯಿ ಪಾತ್ರದಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಕಾಣಿಸಿಕೊಂಡಿದ್ದಾರೆ. ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರೋ ಉಮಾಶ್ರೀಗೆ ಮಂಥರೆ ಪಾತ್ರ ಹೊಸದೇ ಆಗಿದೆ. ಇಲ್ಲಿವರೆಗೂ ಈ ರೀತಿಯ ಪಾತ್ರ ಮಾಡಿದ್ದೇ ಇಲ್ಲ. ಮೊದಲ ಬಾರಿಗೆ ಮಂಥರೆ ಪಾತ್ರದ ಮೂಲಕವೇ ಹೊನ್ನಾವರದ ಜನರ ಹೃದಯ ಗೆದಿದ್ದಾರೆ.
ಉಮಾಶ್ರೀ ಅವರು ಮಂಥರೆ ಪಾತ್ರ ಮಾಡೋಕೆ ಕಾರಣವೂ ಇದೆ. ರಾಮಚಂದ್ರ ಚಿಟ್ಟಾಣಿ ಅವರಿಗೆ ಉಮಾಶ್ರೀ ಮಂಥರೆಯಾಗಿ ಯಕ್ಷಗಾನದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಒಂದು ಆಸೆ ಇತ್ತು. ಅದನ್ನ ಪುತ್ರ ಸುಬ್ರಮಣ್ಯ ಚಿಟ್ಟಾಣಿ ಅವರಿಗೂ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಉಮಾಶ್ರೀ ಅವರನ್ನ ಸುಬ್ರಮಣ್ಯ ಚಿಟ್ಟಾಣಿ ಮಂಥರೆ ಪಾತ್ರ ಮಾಡುವಂತೆ ಕೋರಿದ್ದರು. ಆದರೆ, ಉಮಾಶ್ರೀ ಅವರು ಇದನ್ನ ಒಪ್ಪಿರಲಿಲ್ಲ. ನನಗೆ ಯಕ್ಷಗಾನ ಹೊಸದು. ಮಾಡೋದು ಕಷ್ಟ ಅಂತಲೇ ಹೇಳಿದ್ದರು. ಆದರೆ, ರಾಮಚಂದ್ರ ಚಿಟ್ಟಾಣಿ ಈ ಒಂದು ಪಾತ್ರವನ್ನ ನಿಮ್ಮಿಂದಲೇ ಮಾಡಿಸಬೇಕು ಅಂತ ಆಸೆ ಪಟ್ಟಿದ್ದರು ಎಂದು ಹೇಳಿದ್ದಾರೆ. ಆಗಲೇ ಉಮಾಶ್ರೀ ಅವರು ಈ ಪಾತ್ರ ಮಾಡೋಕೆ ಒಪ್ಪಿಕೊಂಡಿದ್ದಾರೆ.
ಇದೀಗ ರಾಮಚಂದ್ರ ಚಿಟ್ಟಾಣಿ ಅವರ ಆಸೆಯಂತೆ ಮಂಥರೆಯಾಗಿ ಯಕ್ಷಗಾನದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರವನ್ನ ಮಾಡೋ ಮೂಲಕ ಇದೀಗ ಮಹಾನ್ ಯಕ್ಷಗಾನ ಕಲಾವಿದ ರಾಮಚಂದ್ರ ಚಿಟ್ಟಾಣಿ ಅವರ ಆಸೆಯನ್ನ ಉಮಾಶ್ರೀ ಈಡೇರಿಸಿದ್ದಾರೆ.