ಸೋಶಿಯಲ್‌ ಮೀಡಿಯಾ ನೋಡಿ ಮನೆ ಮದ್ದು ಟ್ರೈ ಮಾಡಿದ ಕ್ಯಾನ್ಸರ್‌ ರೋಗಿ – ಆಮೇಲೆ ಏನಾಯ್ತು ಗೊತ್ತಾ?

ಸೋಶಿಯಲ್‌ ಮೀಡಿಯಾ ನೋಡಿ ಮನೆ ಮದ್ದು ಟ್ರೈ ಮಾಡಿದ ಕ್ಯಾನ್ಸರ್‌ ರೋಗಿ – ಆಮೇಲೆ ಏನಾಯ್ತು ಗೊತ್ತಾ?

ಇತ್ತೀಚೆಗೆ ಕೆಲವರು ನಾವೇ ಪೇಷೆಂಟ್‌ ನಾವೇ ಡಾಕ್ಟರ್‌ ಅನ್ನೋ ತರ ಆಡುತ್ತಾರೆ.. ಕಾಯಿಲೆ ಬಂದ್ರು ಕೂಡ ಡಾಕ್ಟರ್‌ ಬಳಿ ಹೋಗಲ್ಲ. ಗೂಗಲ್‌, ಯೂಟ್ಯೂಬ್‌, ಸೋಶಿಯಲ್‌ ಮೀಡಿಯಾ ನೋಡಿಕೊಂಡು ಔಷಧಿಗಳನ್ನು ಸೇವಿಸುತ್ತಾರೆ. ಇದೀಗ ಇಲ್ಲೊಬ್ಬಳು ಕ್ಯಾನ್ಸರ್‌ ರೋಗಿ ಸೋಶಿಯಲ್‌ ಮೀಡಿಯಾದ ಮೂಲಕ ಪರಿಹಾರ ಕಂಡುಕೊಳ್ಳಲು ಹೋಗಿ, ಈಗ ಜೀವಕ್ಕೆ ಕಂಟಕ ತಂದುಕೊಂಡಿದ್ದಾರೆ.

ಇದನ್ನೂ ಓದಿ: ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ – ದೆಹಲಿ ಸಿಎಂ ಆಪ್ತ ಬಿಭವ್ ಕುಮಾರ್ ಅರೆಸ್ಟ್‌!

ಯುನೈಟೆಡ್ ಕಿಂಗ್‌ಡಮ್‌ನ ಐರಿನಾ ಸ್ಟೊಯ್ನೋವಾ ಎಂಬ ಮಹಿಳೆ ದೀರ್ಘಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಳು. 39 ವರ್ಷದ ಮಹಿಳೆಗೆ 2021 ರಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇತ್ತೀಚಿಗಷ್ಟೇ ವೈರಲ್ ಆಗಿರುವ ವೀಡಿಯೊ ಒಂದರಲ್ಲಿ, ಕ್ಯಾರೆಟ್ ಜ್ಯೂಸ್ ಕ್ಯಾನ್ಸರ್ ಅನ್ನು ಗುಣಪಡಿಸುತ್ತದೆ ಎಂದು ಹೇಳಲಾಗಿರುವುದನ್ನು ಈ ಮಹಿಳೆ ಗಮನಿಸಿದ್ದರು. ವಿಡಿಯೋ ನೋಡಿದ ದಿನದಿಂದ ಪ್ರತೀ ದಿನ ಕ್ಯಾರೆಟ್​​ ಜ್ಯೂಸ್​ ಕುಡಿದಿದ್ದಾಳೆ.

ವಿಡಿಯೋದಲ್ಲಿ ತಿಳಿಸಿರುವಂತೆ ಆಕೆ ಕ್ಯಾರೆಟ್‌ ಜ್ಯೂಸ್‌ ಕುಡಿದಿದ್ದಾಳೆ. ಪ್ರತಿದಿನ ಸುಮಾರು 13 ಕಪ್‌ಗಳಷ್ಟು ಕ್ಯಾರೆಟ್ ಜ್ಯೂಸ್ ಕುಡಿಯುತ್ತಿದ್ದಳು. ಆದರೆ ದಿನಕಳೆದಂತೆ ಗುಣವಾಗುವ ಬದಲು ಆಕೆಯ ಆರೋಗ್ಯ ಹದಗೆಡುತ್ತಾ ಹೋಗಿದೆ. ವೈದ್ಯರ ಸಲಹೆ ಇಲ್ಲದೆ ಈ ನಿರ್ಧಾರ ತೆಗೆದುಕೊಂಡಿದ್ದರ ಪರಿಣಾಮ ಸಂಪೂರ್ಣ ಬಲಹೀನಳಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಅಷ್ಟೊತ್ತಿಗಾಗಲೇ ಆಕೆಯ ಹೊಟ್ಟೆಯ ಕೆಳಭಾಗ, ಕಾಲುಗಳು ಮತ್ತು ಶ್ವಾಸಕೋಶಗಳು ದ್ರವದಿಂದ ತುಂಬಿದ್ದವು ಮತ್ತು ಆಕೆಯ ದೇಹದಾದ್ಯಂತ ಗಡ್ಡೆ ಹುಟ್ಟಿಕೊಂಡಿವೆ. ಇದೀಗ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತನ್ನ ಕೆಟ್ಟ ಅನುಭವದ ಬಗ್ಗೆ ಐರೆನಾ ಮಾತನಾಡಿದ್ದಾಳೆ, “ನನ್ನ ಶ್ವಾಸಕೋಶದಲ್ಲಿ ದ್ರವವಿದ್ದ ಕಾರಣ ನಾನು ಉಸಿರಾಡಲು ಸಾಧ್ಯವಾಗಲಿಲ್ಲ. ಈಗ ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾಳೆ.

Shwetha M