2024ಕ್ಕೆ 2040ರ ಝಲಕ್.. UIನಲ್ಲಿ ಜಾತಿ ಮುದ್ರೆ ಇಟ್ಟ ಉಪ್ಪಿ!! – ವಾರ್ನರ್ ಆಗಿ ಮಿಂಚಿದ ಉಪೇಂದ್ರ
ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಯುಐ.. ಉಪ್ಪಿ ನಿರ್ದೇಶನಕ್ಕೆ ಕೈ ಹಾಕಿದ್ರು ಅಂದ್ರೆ ಡಿಫ್ರೆಂಟ್ ಆಗೇ ಇರುತ್ತೆ.. ಈಗಾಗಲೇ ಹತ್ತು ಹಲವು ವಿಚಾರಗಳಿಂದ ಈ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ.. 2024 ಕ್ಕೆ 2040ರ ಝಲಕ್ ತೋರಿಸಿದ್ದಾರೆ ಉಪ್ಪಿದಾದ.. ಇದೀಗ ಯುಐ ಸಿನಿಮಾದ ವಾರ್ನರ್ ರಿಲೀಸ್ ಆಗಿದ್ದು, ಸಿನಿಮಾದಲ್ಲಿ ಅಸಲಿಗೆ ಏನಿದೆ..? ಇನ್ನಿಲ್ಲ.? ಎಲ್ಲವೂ ರಿವೀಲ್ ಆಗಿದೆ.
ಇದನ್ನೂ ಓದಿ: ಹೈಬ್ರಿಡ್ ನಲ್ಲಿ ಚಾಂಪಿಯನ್ಸ್ ಟ್ರೋಫಿ.. ಭಾರತಕ್ಕೂ ಕಾಲಿಡಲ್ಲವೆಂದ PAK – ICCಗೆ ಪಾಕ್ 3 ಕಂಡೀಷನ್ಸ್ ಏನು?
ಉಪ್ಪಿ ಸಿನಿಮಾದಲ್ಲಿ ಎಲ್ಲವೂ ವಿಭಿನ್ನವಾಗಿಯೇ ಇರುತ್ತವೆ. UI ಸಿನಿಮಾ ವಿಚಾರದಲ್ಲೂ ಅದು ಮುಂದುವರೆದಿದೆ. ಪ್ರತಿ ವಿಷಯವನ್ನು ಸೀಕ್ರೆಟ್ ಆಗಿಯೇ ಇಟ್ಟಿರೋ ಉಪೇಂದ್ರ, ಈಗ ಚಿತ್ರದ ವಾರ್ನರ್ ರಿಲೀಸ್ ಮಾಡಿದ್ದಾರೆ. ಈ ಪದವೇ ಕನ್ನಡಕ್ಕೆ ಹೊಸದಾಗಿದೆ. ಇದ್ರ ಮೂಲಕವೇ ಉಪ್ಪಿ ಸಿನಿಮಾದಲ್ಲಿ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನ ತಿಳಿಸಿದ್ದಾರೆ.
ಸದ್ಯ ಬಿಡುಗಡೆ ಆಗಿರುವ ವಾರ್ನರ್ ಟೀಸರ್ ಝಲಕ್‌ನಲ್ಲಿ 2040ರ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ಉಪೇಂದ್ರ. ಈ ಹಿಂದಿನ ಪೋಸ್ಟರ್‌ಗಳೆಲ್ಲವನ್ನು ನೋಡಿದ ಬಳಿಕ, ಈ ಸಿನಿಮಾದಲ್ಲಿ ಏನು ಹೇಳಿರಬಹುದು? ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಇದೀಗ ಅದೆಲ್ಲದಕ್ಕೂ ತೆರೆ ಎಳೆದಿದ್ದಾರೆ. UI ಸಿನಿಮಾದಲ್ಲಿ ಏನಿರಲಿದೆ ಎಂಬ ಕೌತುಕಕ್ಕೆ ವಾರ್ನರ್ ಉತ್ತರ ಕೊಟ್ಟಿದ್ದಾರೆ. ಅಂದರೆ, “ವಾರ್ನರ್” ಹೆಸರಿನ ಕಿರು ಟೀಸರ್ ಬಿಡುಗಡೆ ಆಗಿದ್ದು, ಜಾಗತಿಕ ಸಮಸ್ಯೆಗಳ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
ಜಾಗತಿಕ ತಾಪಮಾನ, ಕೋವಿಡ್ 19, ಹಣದುಬ್ಬರ, ಎಐ ತಂತ್ರಜ್ಞಾನ ಮತ್ತು ಇತ್ತೀಚೆಗೆ ಸದ್ದು ಮಾಡಿದ ಯುದ್ಧಗಳ ಬಗ್ಗೆ ಯುಐ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಅದಕ್ಕೆ ತಕ್ಕಂತೆ ಸಂಪೂರ್ಣವಾಗಿ 2040ರಲ್ಲಿ ಈ ಘಟನೆ ನಡೆಯುವಂತೆ ಸೃಷ್ಟಿಸಲಾಗಿದೆ. ಇದ್ರಿಂದಾಗಿ ಉಪ್ಪಿಯ ಅಸಲಿ ಕ್ಯಾರೆಕ್ಟರ್ ಏನು ಅನ್ನೋದು ಈಗ ಗೊತ್ತಾಗಿದೆ. ಇಡೀ ಜಗ್ಗತ್ತೇ ಸರ್ವನಾಶ ಆದ ಕ್ಷಣದಲ್ಲಿ ಈ ವಾರ್ನರ್ ಬರ್ತಾನೇ ಅನ್ನೋದು ತಿಳಿಯುತ್ತದೆ. ಇಡೀ ದೇಶದ ಜನ ತುಂಡು ಬಟ್ಟೆಯನ್ನ ಸೊಂಟಕ್ಕೆ ಸುತ್ತಿಕೊಂಡಿದ್ದಾರೆ. ತಿನ್ನಲು ಅನ್ನ ಇಲ್ಲ.. ಬರೀ ಬಾಳೆ ಹಣ್ಣಿಗಾಗಿ ಕಿತ್ತಾಡುತ್ತಾರೆ.. ಆದ್ರೂ ಇವರಿಗೆ ಜಾತಿ ಮೇಲೆ ಪ್ರೀತಿ ಇದೆ. ಮೊಬೈಲ್ ಮೇಲೆ ಇನ್ನಿಲ್ಲದ ಸೆಳೆತ ಇದೆ.
ಹೌದು, ಉಪ್ಪಿ UI ಸಿನಿಮಾದಲ್ಲಿ ಜಾತಿ ಜಾತಿ ಅನ್ನೋರಿಗೆ ಟಾಂಗ್ ಕೊಟ್ಟಂತೆ ಇದೆ. ಧಿಕ್ಕಾರ ಕೂಗೋ ಜನರ ವಿರುದ್ಧ ಹೇಗೆ ರೊಚ್ಚಿಗೇಳಬೇಕು ಅನ್ನೋದನ್ನ ತಿಳಿಸಿದ್ದಾರೆ ಅಂತ ಇದ್ರಲ್ಲಿ ಗೊತ್ತಾಗುತ್ತೆ. ಗುಂಡಿನ ಸುರಿ ಮಳೆ ಗೈಯೋ ಗನ್ ಹಿಡಿದು ಹೋರಾಟಗಾರರನ್ನ ಸುಟ್ಟು ಬಿಡೋ ದೃಶ್ಯವೂ ಈ ಚಿತ್ರದಲ್ಲಿದೆ. ಎಲ್ಲವೂ ಸರ್ವನಾಶ ಆದ್ಮೇಲೆ ಏನೆಲ್ಲ ಆಗುತ್ತದೆ ಅನ್ನೋ ಒಂದು ಕಲ್ಪನೆಯನ್ನ ಇಲ್ಲಿ ಕಟ್ಟಿ ಕೊಟ್ಟಿದ್ದಾರೆ ಉಪ್ಪಿ. ಮನೆಗಳು ನೆಲಕ್ಕೆ ಉರುಳಿವೆ. ಎಲ್ಲಿ ನೋಡಿದ್ರೂ ಪಾಳು ಬಿದ್ದ ಮನೆಯ ದೃಶ್ಯಗಳನ್ನೇ ತೋರಿಸಿದ್ದು, ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.
ಅಂದ್ಹಾಗೆ ಇದೇ ಡಿಸೆಂಬರ್-20 ರಂದು UI ಸಿನಿಮಾ ರಿಲೀಸ್ ಆಗುತ್ತಿದೆ. ಬಹು ಭಾಷೆಯಲ್ಲಿ ಈ ಚಿತ್ರ ತೆರೆಗೆ ಬರ್ತಿದೆ. ಈ ಮೂಲಕ ಸಿನಿಮಾ ಪ್ರೇಮಿಗಳ ಮನದಲ್ಲಿ ಹೊಸದೊಂದು ಜಾಗೃತಿಯನ್ನೆ ಮೂಡಿಸಲು ಉಪ್ಪಿ ಸಜ್ಜಾಗಿದ್ದಾರೆ ಅನಿಸುತ್ತಿದೆ. ಅದರ ಒಂದು ಝಲಕ್ ಈಗ ಚಿತ್ರದ ವಾರ್ನರ್ ಅಲ್ಲಿಯೇ ದೊರೆತಿದೆ ಅಂತಾ ಹೇಳ್ಬೋದು.. ನೀವೂ ಯುಐ ವಾರ್ನರ್ ನೋಡಿದ್ರಾ? ಕಿರು ಟೀಸರ್ ನೋಡಿ ನಿಮ್ಗೆ ಏನ್ ಅನ್ನಿಸ್ತು ಅಂತಾ ಕಾಮೆಂಟ್ ಮಾಡಿ.